ಹಾಸನ: ಜಿಂಕೆ ಬೇಟೆ; ರೆಸಾರ್ಟ್ ಮಾಲಿಕನ ಬಂಧನ 

ಜಿಂಕೆಯನ್ನು ಬೇಟೆಯಾಡಿದ್ದ ರೆಸಾರ್ಟ್ ಮಾಲಿಕ ಶಿಶಿರ್ ಎಂಬಾತನನ್ನು ಅರಣ್ಯ ಸಿಬ್ಬಂದಿಗಳು ಬಂಧಿಸಿದ್ದಾರೆ. 
ಬಂಧನ (ಸಂಗ್ರಹ ಚಿತ್ರ)
ಬಂಧನ (ಸಂಗ್ರಹ ಚಿತ್ರ)
Updated on

ಹಾಸನ: ಜಿಂಕೆಯನ್ನು ಬೇಟೆಯಾಡಿದ್ದ ರೆಸಾರ್ಟ್ ಮಾಲಿಕ ಶಿಶಿರ್ ಎಂಬಾತನನ್ನು ಅರಣ್ಯ ಸಿಬ್ಬಂದಿಗಳು ಬಂಧಿಸಿದ್ದಾರೆ. 

ಸಕಲೇಶಪುರದ ಅಚ್ಚನಹಳ್ಳಿಯಲ್ಲಿ ರೆಸಾರ್ಟ್ ಮಾಲಿಕ ಶಿಶಿರ್ ಜಿಂಕೆಯನ್ನು ಬೇಟೆಯಾಡಿದ್ದರು. 

ಶಿಶಿರ್ ಗೆ ಜಿಂಕೆ ಬೇಟೆಯ ವೇಳೆ ಸಾಥ್ ನೀಡಿದ್ದ ಅವಿನಾಶ್, ಜೀವನ್, ಕೀರ್ತನ್ ಎಂಬ ಇಬ್ಬರು ವ್ಯಕ್ತಿಗಳು ನಾಪತ್ತೆಯಾಗಿದ್ದು, ಜಿಂಕೆ ಮಾಂಸ ರೆಸಾರ್ಟ್ ನಲ್ಲಿರಬೇಕಾದರೆ ಅರಣ್ಯಾಧಿಕಾರಿಗಳು ಸ್ಥಳಕ್ಕೆ ಧಾವಿಸಿದ್ದಾರೆ. 
 
12 ಕೆಜಿಯಷ್ಟು ಮಾಂಸ, ಗನ್, ಸರಕು ವಾಹನ, ಕಾರು, ಮೋಟರ್ ಬೈಕ್ ಹಾಗೂ ಇನ್ನಿತರ ಶಸ್ತ್ರಾಸ್ತ್ರಗಳನ್ನು ಅಧಿಕಾರಿಗಳು, ವಶಕ್ಕೆ ಪಡೆದಿದ್ದಾರೆ.
 
ಸ್ಥಳೀಯರ ಪ್ರಕಾರ, ಈ ಪ್ರದೇಶದಲ್ಲಿ ಜಿಂಕೆಗಳ ಬೇಟೆ ಸಾಮಾನ್ಯವಾಗಿದ್ದು, ಬೇಟೆ ತಪ್ಪಿಸಬೇಕಾದರೆ ಅರಣ್ಯ ಸಿಬ್ಬಂದಿ ಈ ಪ್ರದೇಶದಲ್ಲಿ ಗಸ್ತು ಹೆಚ್ಚಳ ಮಾಡಬೇಕೆಂದು ಹೇಳಿದ್ದಾರೆ. 

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com