ಭಾರತ್ ಜೋಡೋ ಯಾತ್ರೆ: ರಾಹುಲ್, ಸಿದ್ದರಾಮಯ್ಯರಿಂದ ನಿಯಮ ಉಲ್ಲಂಘನೆ- ಬಿಜೆಪಿ

ಭಾರತ್ ಜೋಡೋ ಯಾತ್ರೆ ವೇಳೆಯಲ್ಲಿ ಬಂಡೀಪುರ ಹುಲಿ ಸಂರಕ್ಷಿತಾರಣ್ಯದ ಒಳಗಡೆ  ಕಾಂಗ್ರೆಸ್ ಮುಖಂಡರು ಶುಕ್ರವಾರ ಬೆಳಗ್ಗೆ  ವನ್ಯಜೀವಿ ಸಂರಕ್ಷಣಾ ವನ್ಯಜೀವಿ ನಿಯಮಗಳ ಉಲ್ಲಂಘನೆಯಾಗಿದೆ ಎಂದು ಆರೋಪಿಸಿ ಬಿಜೆಪಿ ನಾಯಕರು ದೂರು ಸಲ್ಲಿಸಿದ್ದಾರೆ.
ಭಾರತ್ ಜೋಡೋ ಯಾತ್ರೆಯಲ್ಲಿ ರಾಹುಲ್, ಸಿದ್ದರಾಮಯ್ಯ
ಭಾರತ್ ಜೋಡೋ ಯಾತ್ರೆಯಲ್ಲಿ ರಾಹುಲ್, ಸಿದ್ದರಾಮಯ್ಯ

ಬೆಂಗಳೂರು: ಭಾರತ್ ಜೋಡೋ ಯಾತ್ರೆ ವೇಳೆಯಲ್ಲಿ ಬಂಡೀಪುರ ಹುಲಿ ಸಂರಕ್ಷಿತಾರಣ್ಯದ ಒಳಗಡೆ  ಕಾಂಗ್ರೆಸ್ ಮುಖಂಡರು ಶುಕ್ರವಾರ ಬೆಳಗ್ಗೆ  ವನ್ಯಜೀವಿ ಸಂರಕ್ಷಣಾ ವನ್ಯಜೀವಿ ನಿಯಮಗಳ ಉಲ್ಲಂಘನೆಯಾಗಿದೆ ಎಂದು ಆರೋಪಿಸಿ ಬಿಜೆಪಿ ನಾಯಕರು ದೂರು ಸಲ್ಲಿಸಿದ್ದಾರೆ.

ಭಾರತ್ ಜೋಡೋ ಯಾತ್ರೆಯ ನೇತೃತ್ವ ವಹಿಸಿರುವ ಕಾಂಗ್ರೆಸ್ ಮಾಜಿ ಅಧ್ಯಕ್ಷ ರಾಹುಲ್ ಗಾಂಧಿ, ವಿಪಕ್ಷ ನಾಯಕ ಸಿದ್ದರಾಮಯ್ಯ ಮತ್ತು ಕಾಂಗ್ರೆಸ್ ಮುಖಂಡರಾದ ಕೆಜೆ ಜಾರ್ಜ್ ಮತ್ತು ಹೆಚ್ ಸಿ ಮಹದೇವಪ್ಪ ವಿರುದ್ಧ ಶನಿವಾರ ಬೆಳಗ್ಗೆ ದೂರು ದಾಖಲಾಗಿದೆ. ವನ್ಯಜೀವಿ ಸಂರಕ್ಷಣಾ ಕಾಯ್ದೆ 1972ರ ಪ್ರಕಾರ ಅನುಮತಿ ಪಡೆಯದೆ ಕಾಂಗ್ರೆಸ್ ಮುಖಂಡರು ಬಂಡೀಪುರ ಹುಲಿ ಸಂರಕ್ಷಿತಾರಣ್ಯ ಪ್ರವೇಶಿಸಿದ್ದು, ಬಿಟಿಆರ್ ಮುಖ್ಯರಸ್ಥೆಯಲ್ಲಿ ತಮ್ಮ ವಾಹನಗಳಿಂದ ಕೆಳಗೆ ಇಳಿದಿದ್ದಾರೆ ಎಂದು ಬಿಜೆಪಿ ಆರೋಪಿಸಿದೆ.

ಗೇಟ್‌ಗಳನ್ನು ಮುಚ್ಚಬೇಕಾದ ಸಂದರ್ಭದಲ್ಲಿ ಅರಣ್ಯ ಇಲಾಖೆ ಸಿಬ್ಬಂದಿ ಕರ್ನಾಟಕ ಮತ್ತು ಮುದುಮಲೈ ಕಡೆಯಿಂದ ಚೆಕ್‌ಪೋಸ್ಟ್‌ಗಳ ಮೂಲಕ ಪ್ರವೇಶಕ್ಕೆ ಅವಕಾಶ ನೀಡಿದ್ದಾರೆ ಎಂದು ದೂರುದಾರರು ಆರೋಪಿಸಿದ್ದಾರೆ. ಚೆಕ್ ಪೋಸ್ಟ್ ಗಳಲ್ಲಿ ಬಂಡೀಪುರ ಹುಲಿ ಸಂರಕ್ಷಿತಾರಣ್ಯದ ಮೂಲಕ ಬೆಳಗ್ಗೆ 6 ಗಂಟೆಯಿಂದ ಸಂಜೆ 6 ಗಂಟೆಯವರೆಗೂ ಮಾತ್ರ ವಾಹನಗಳಿಗೆ  ಅನುಮತಿ ನೀಡಲಾಗುತ್ತದೆ.

ತುರ್ತು ವಾಹನಗಳು ಮತ್ತು ರಾತ್ರಿ ಸಮಯದಲ್ಲಿ ನಾಲ್ಕು ಪ್ರವಾಸಿ ಬಸ್ ಗಳನ್ನು ಹೊರತುಪಡಿಸಿ, ಬೇರೆ ವಾಹನಗಳ ಸಂಚಾರಕ್ಕೆ ನಿಷೇಧವಿದೆ. ರಾಹುಲ್ ಗಾಂಧಿ ಅವರ ಬೆಂಗಾವಲು ವಾಹನ ರಾಷ್ಟ್ರೀಯ ಹೆದ್ದಾರಿ-766 ರಲ್ಲಿ (ಕೇರಳದ ಕೋಝಿಕ್ಕೋಡ್- ಕೊಳ್ಳೇಗಾಲ ಸಂಪರ್ಕದ ರಸ್ತೆ) ಮುಂಜಾನೆ ಸಾಗಿದೆ ಆದರೆ, ಅದು  ಮುಡುಮಲೈ ಕಡೆಯಿಂದ ಗುಡಲೂರು ಮಾರ್ಗವಾಗಿ ಬಿಟಿಆರ್  ಪ್ರವೇಶಿಸಿರುವುದಾಗಿ ಹಿರಿಯ ಅರಣ್ಯಾಧಿಕಾರಿಯೊಬ್ಬರು ದಿ ನ್ಯೂ ಇಂಡಿಯನ್ ಎಕ್ಸ್ ಪ್ರೆಸ್ ಗೆ ತಿಳಿಸಿದರು.  
 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com