ಬೆಂಗಳೂರು: ಆಸ್ತಿಗಾಗಿ 88 ವರ್ಷದ ತಾಯಿ ಹತ್ಯೆಗೆ ಯತ್ನಿಸಿದ 65 ವರ್ಷದ ನಿವೃತ್ತ ಸೇನಾಧಿಕಾರಿ ಬಂಧನ
ಬೆಂಗಳೂರು: ಆಸ್ತಿ ವಿಚಾರವಾಗಿ 88 ವರ್ಷದ ತಾಯಿಯನ್ನು ಆಕೆಯ ಮನೆಯಲ್ಲಿಯೇ ಹತ್ಯೆ ಮಾಡಲು ಯತ್ನಿಸಿದ 65 ವರ್ಷದ ವ್ಯಕ್ತಿಯನ್ನು ಆರ್‌ಟಿ ನಗರ ಪೊಲೀಸರು ಬಂಧಿಸಿದ್ದಾರೆ.
ಮಹಿಳೆ, ಕ್ಯಾಥರೀನ್ ಡಿ'ಕ್ರೂಜ್ ಅವರಿಗೆ ನಾಲ್ಕು ಮಕ್ಕಳು. ಅವರಲ್ಲಿ ಇಬ್ಬರು ವಿದೇಶದಲ್ಲಿ ನೆಲೆಸಿದ್ದಾರೆ, ಒಬ್ಬ ಅವಿವಾಹಿತ ಮಗಳು ಆಶ್ರಮದಲ್ಲಿ ವಾಸಿಸುತ್ತಿದ್ದಾರೆ. ಆರೋಪಿ ಜಾನ್ ಡಿಕ್ರೂಜ್ ಎಲ್ಲರಿಗೂ ಹಿರಿಯನಾಗಿದ್ದಾನೆ.
ಕೋಟ್ಯಂತರ ರು. ಮೌಲ್ಯದ ಆಸ್ತಿಯನ್ನು ಮಗನ ಹೆಸರಿಗೆ ಮಾಡಿ ಕೊಟ್ಟರೂ, ದಾಹ ತೀರದ ಮಗ ವಯಸ್ಸಾದ ತಾಯಿಯ ಉಸಿರು ನಿಲ್ಲಿಸಲು ಮುಂದಾಗಿದ್ದಾರೆ ಎಂಬ ಆರೋಪ ಕೇಳಿಬಂದಿದೆ. ಈ ಘಟನೆ ಆರ್‌ಟಿ ನಗರದ 2ನೇ ಬ್ಲಾಕ್ನಲ್ಲಿ ನಡೆದಿದೆ.
ಕ್ಯಾಥರಿನ್ ಡಿ ಕ್ರೂಸ್ (88) ನತದೃಷ್ಟ ತಾಯಿ. ಮಗ ಜಾನ್ ಡಿ ಕ್ರೂಸ್ (65)ರನ್ನು ಆರ್.ಟಿ. ನಗರ ಠಾಣಾ ಪೊಲೀಸರು ಬಂಧಿಸಿದ್ದಾರೆ. ಮೊದಲನೆಯವರಾದ ಜಾನ್ ಡಿ ಕ್ರೂಸ್ ಹೆಸರಿಗೆ ಆಸ್ತಿ ಬರೆದುಕೊಟ್ಟಿದ್ದರೂ ಸಹ ತಾಯಿಯೊಂದಿಗೆ ನಿತ್ಯ ಗಲಾಟೆ ಮಾಡುತ್ತಿದ್ದರು ಎನ್ನಲಾಗ್ತಿದೆ.
ನಾಲ್ಕು ವರ್ಷಗಳ ಹಿಂದೆಯೇ ಅನಾರೋಗ್ಯಕ್ಕೆ ತುತ್ತಾತ ಕ್ಯಾಥರಿನ್‌ಗೆ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಲಾಗಿತ್ತು. ಬಳಿಕ ಮನೆಗೆ ಬಂದಾಗ ಆಕೆಯ ನೋಡಿಕೊಳ್ಳಲು ಅಮೆರಿಕದಲ್ಲಿರುವ ಪುತ್ರ ಕೇರ್ ಟೇಕರ್‌ವೊಬ್ಬರನ್ನು ನೇಮಿಸಿದ್ದರು. ನಿತ್ಯ ಕೇರ್ ಟೇಕರ್ ಬಂದು ನೋಡಿಕೊಳ್ಳುತ್ತಿದ್ದರು. ಆದರೆ, ಆರೋಪಿ ತಾಯಿಗೆ ಅಳವಡಿಸಿದ್ದ ಕೃತಕ ಉಸಿರಾಟ ಆಕ್ಸಿಜನ್ ಮಾಸ್ಕ್ ತೆಗೆದು ಹತ್ಯೆಗೆ ಯತ್ನಿಸಿದ್ದಾನೆ. ಅದನ್ನು ಗಮನಿಸಿದ ಕೇರ್ ಟೇಕರ್, ಪ್ರಶ್ನಿಸಿದ್ದಾರೆ. ಆಗ ಆರೋಪಿ ಆಕೆ ಸಾಯಲಿ ಎಂದು ಆಕ್ಸಿಜನ್ ಮಾಸ್ಕ್ ತೆಗೆದರೆ, ನೀವು ಹಾಕುತ್ತಿದ್ದಿರಾ ಎಂದೆಲ್ಲ ಪ್ರಶ್ನಿಸಿದ್ದಾನೆ.
ಹೀಗಾಗಿ ಪೊಲೀಸ್ ಠಾಣೆಗೆ ದೂರು ನೀಡಿದ್ದರು. ಆದರಿಂದ ಆರೋಪಿಯನ್ನು ಬಂಧಿಸಲಾಗಿದೆ. ಆರೋಪಿ 2019 ಡಿಸೆಂಬರ್‌ನಲ್ಲಿಯೂ ಇದೇ ರೀತಿ ತಾಯಿಯ ಕೊಲೆಗೆ ಯತ್ನಿಸಿದ್ದ.
ಕೂಡಲೇ ಎಚ್ಚೆತ್ತ ಕೇರ್ ಟೇಕರ್ ಪೊಲೀಸರಿಗೆ ಕರೆ ಮಾಡಿದ್ದಿರಂದ ಸ್ಥಳಕ್ಕೆ ಬಂದ ಆರ್ ಟಿ ನಗರ ಪೊಲೀಸರು ವೃದ್ಧೆ ಕ್ಯಾಥರೀನ್ರನ್ನು ರಕ್ಷಿಸಿದ್ದಾರೆ. ಕೇರ್ ಟೇಕರ್ ದೂರಿನ ಮೇರೆಗೆ ಆರ್ ಟಿ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತಾಯಿಯನ್ನೇ ಕೊಲೆ ಮಾಡಲು ಮುಂದಾಗಿದ್ದ ಮಗನನ್ನು ಬಂಧಿಸಿದ್ದಾರೆ.
ಆತನನ್ನು ಬಂಧಿಸಿ ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹದಲ್ಲಿ ಇರಿಸಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಜಾನ್ ವಿರುದ್ಧ ಐಪಿಸಿ ಸೆಕ್ಷನ್ 307ರ ಅಡಿಯಲ್ಲಿ ಕೊಲೆ ಯತ್ನ ಪ್ರಕರಣ ದಾಖಲಾಗಿದೆ.
Follow KannadaPrabha channel on WhatsApp
KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ