ಬೆಂಗಳೂರು: ಬ್ಯಾಚುಲರ್ ಗಳಿಗೆ ಸಿಗ್ತಿಲ್ಲ ಬಾಡಿಗೆ ಮನೆ, ಕುಟುಂಬಸ್ಥರಿಗೇ ಮಾಲೀಕರ ಆದ್ಯತೆ!

ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ವಾಸ್ತವ್ಯಕ್ಕೆ ಬರುವ ಬ್ಯಾಚುಲರ್ ಗಳಿಗೆ ಬಾಡಿಗೆ ಮನೆ ಸಿಗುವುದು ತ್ರಾಸದಾಯಕವಾಗಿದೆ. ಮನೆ ಮಾಲೀಕರು ಕುಟುಂಬಸ್ಥರಿಗೆ ಮಣೆ ಹಾಕುತ್ತಿದ್ದಾರೆ.
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ಬೆಂಗಳೂರು: ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ವಾಸ್ತವ್ಯಕ್ಕೆ ಬರುವ ಬ್ಯಾಚುಲರ್ ಗಳಿಗೆ ಬಾಡಿಗೆ ಮನೆ ಸಿಗುವುದು ತ್ರಾಸದಾಯಕವಾಗಿದೆ. ಮನೆ ಮಾಲೀಕರು ಕುಟುಂಬಸ್ಥರಿಗೆ ಮಣೆ ಹಾಕುತ್ತಿದ್ದಾರೆ.

ಅಲ್ಲದೇ, ಮಧ್ಯವರ್ತಿಗಳು ಮತ್ತು ಸೆಕ್ಯೂರಿಟಿ ಡೆಪಾಸಿಟ್ ಕೂಡಾ ದುಬಾರಿಯಾಗಿದೆ. ಸಸ್ಯಹಾರಿಯೇ ಅಥವಾ ಮಾಂಸಹಾರಿಯೇ ಎಂಬಂತಹ ಚರ್ಚೆ ಕೂಡಾ ಆಗುತ್ತದೆ. ಕೆಲವೊಮ್ಮೆ ಧರ್ಮವೂ ಬರುತ್ತದೆ. ತಾನು ಅನ್ಯ ಧರ್ಮಕ್ಕೆ ಸೇರಿದ ಕಾರಣ ಕೆಲವು ಮಾಲೀಕರು ಬಾಡಿಗೆಗೆ ಮನೆ ಕೊಡಲು ನಿರಾಕರಿಸಿದರು ಎಂದು ಕೊಲ್ಕತ್ತಾ ಮೂಲದ ನಿಶಾ( ಹೆಸರು ಬದಲಾಯಿಸಲಾಗಿದೆ) ತನ್ನ ಅಳಲು ತೋಡಿಕೊಂಡರು. 

ವಿವಾಹವಾದವರ ಕಡೆಗೆ ಮಾಲೀಕರು ಒಲವು ಹೊಂದಿರುವುದರಿಂದ ತಮಗೆ ಮನೆ ಸಿಗುತ್ತಿಲ್ಲ ಎಂದು ಬ್ಯಾಚುಲರ್ ಗಳು ದೂರುತ್ತಾರೆ. ಕುಟುಂಬಸ್ಥರಾದರೆ ಮನೆಯನ್ನು ಉತ್ತಮವಾಗಿ ಇಟ್ಟುಕೊಳ್ಳುತ್ತಾರೆ ಎಂಬುದು ಮನೆ ಮಾಲೀಕರ ನಂಬಿಕೆಯಾಗಿರುತ್ತದೆ ಎಂದು ವೈಟ್ ಫೀಲ್ಡ್ ನ ಮತ್ತೋರ್ವ ಬ್ಯಾಚುಲರ್ ಅಂಕಿತಾ ಮಜುಂದಾರ್ ಹೇಳಿದರು. ಆಹಾರದ ಆದ್ಯತೆ ಅಥವಾ ಯಾರಾದರೂ ಸಾಕುಪ್ರಾಣಿಗಳನ್ನು ಹೊಂದಿದ್ದರೆ ಇತರ ಸಮಸ್ಯೆಗಳಿವೆ ಎಂದು ಅವರು ಹೇಳಿದರು.

ಲಿಫ್ಟ್ ಅನ್ನು ಆಗಾಗ್ಗೆ ಬಳಸುವುದಕ್ಕಾಗಿ ವಿದ್ಯುತ್ ಬಿಲ್ ಹೆಚ್ಚಾಗಿ ಬರುತ್ತಿದ್ದರಿಂದ  ಮನೆ  ಖಾಲಿ ಮಾಡುವಂತೆ ಹೇಳಲಾಯಿತು.  ಅನೇಕ ಸಂದರ್ಭಗಳಲ್ಲಿ ಅವರು ಬಹಳ ಕಿರುಕುಳ ನೀಡಲಾಯಿತು ಎಂದು ಮತ್ತೋರ್ವ ಟೆಕ್ಕಿ ಪುಲ್ಕಿತ್ ಮಹಾಜನ್ ಆರೋಪಿಸಿದರು. ಲಿಫ್ಟ್ ಬಳಕೆ ಕಡಿಮೆ ಮಾಡಿ ಅಥವಾ ಹೆಚ್ಚುವರಿ ಬಿಲ್ ಮೊತ್ತ ಪಾವತಿಸಲು ಅವರು ಹೇಳಿದರು. ಅಂತಿಮವಾಗಿ ಅಪಾರ್ಟ್ ಮೆಂಟ್ ತೊರೆಯಲು ಕೇಳಲಾಯಿತು. ಇದಕ್ಕಾಗಿ ಠೇವಣಿ ಕಳೆದುಕೊಳ್ಳುವ ಸ್ಥಿತಿಯಲ್ಲಿರುವಾಗ ಮತ್ತೆ ಮತ್ತೆ ಮನೆ ಹುಡುಕಾಟ ಮಹಾಜನ್ ಅವರನ್ನು ಚಿಂತೆಗೀಡು ಮಾಡಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com