ಬೆಳ್ತಂಗಡಿ ಶಾಸಕ ಹರೀಶ್ ಪೂಂಜಾ ಕಾರು ಅಡ್ಡಗಟ್ಟಿ ಬೆದರಿಕೆ: ಕೇಸು ದಾಖಲು

ಕೆಲ ಅಪರಿಚಿತ ದುಷ್ಕರ್ಮಿಗಳು ಕಳೆದ ರಾತ್ರಿ ಬೆಳ್ತಂಗಡಿ ಕ್ಷೇತ್ರದ ಶಾಸಕ ಹರೀಶ್ ಪೂಂಜಾ ಅವರು ಕಾರಿನಲ್ಲಿ ಪ್ರಯಾಣಿಸುತ್ತಿದ್ದಾಗ ಬೆನ್ನಟ್ಟಿ ಬೆದರಿಕೆ ಹಾಕಿದ ಪ್ರಸಂಗ ನಡೆದಿದೆ. ಈ ಸಂಬಂಧ ಬೆಳ್ತಂಗಡಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ. 
ಹರೀಶ್ ಪೂಂಜಾ
ಹರೀಶ್ ಪೂಂಜಾ
Updated on

ಮಂಗಳೂರು: ಕೆಲ ಅಪರಿಚಿತ ದುಷ್ಕರ್ಮಿಗಳು ಕಳೆದ ರಾತ್ರಿ ಬೆಳ್ತಂಗಡಿ ಕ್ಷೇತ್ರದ ಶಾಸಕ ಹರೀಶ್ ಪೂಂಜಾ ಅವರು ಕಾರಿನಲ್ಲಿ ಪ್ರಯಾಣಿಸುತ್ತಿದ್ದಾಗ ಬೆನ್ನಟ್ಟಿ ಬೆದರಿಕೆ ಹಾಕಿದ ಪ್ರಸಂಗ ನಡೆದಿದೆ. ಈ ಸಂಬಂಧ ಬೆಳ್ತಂಗಡಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ. 

ಬೆಂಗಳೂರಿನಿಂದ ಬಂದಿದ್ದ ಶಾಸಕರನ್ನು ಮಂಗಳೂರು ವಿಮಾನ ನಿಲ್ದಾಣದಲ್ಲಿ ನಿನ್ನೆ ರಾತ್ರಿ ಕಾರಿನಲ್ಲಿ ಹತ್ತಿಸಿಕೊಂಡು ಮಂಗಳೂರು ಸರ್ಕ್ಯುಟ್ ಹೌಸ್ ಗೆ ತೆರಳಿದ್ದೆ. ಅಲ್ಲಿ ಸಭೆ ಮುಗಿಸಿಕೊಂಡು ಮತ್ತೊಂದು ಕಾರಿನಲ್ಲಿ ಶಾಸಕರು ಬೆಳ್ತಂಗಡಿ ಕಡೆಗೆ ಹೋಗುತ್ತಿದ್ದರು. ಅವರನ್ನು ನಾನು ಹಿಂಬಾಲಿಸಿಕೊಂಡು ಹೋದೆ. 

ನಗುರಿ ರೈಲ್ವೆ ಮೇಲ್ಸೇತುವೆ ಬಳಿ ತಲುಪಿದಾಗ ಸ್ಕಾರ್ಪಿಯೊ ಕಾರಿನಲ್ಲಿ ಬಂದ ವ್ಯಕ್ತಿ ನಮ್ಮನ್ನು ಹಿಂಬಾಲಿಸಲು ಆರಂಭಿಸಿದ. ಕೂಡಲೇ ನಾನು ಶಾಸಕರಿಗೆ ತಿಳಿಸಿದೆ, ಆತ ಶಾಸಕರ ಕಾರನ್ನು ಹಿಂಬಾಲಿಸಲು ಆರಂಭಿಸಿದ ಬಳಿಕ ಶಾಸಕರನ್ನು ಕಾರನ್ನು ಅಡ್ಡಗಟ್ಟಿ ಬೈಯುತ್ತಾ ಫರಂಗಿಪೇಟೆ ಮೀನು ಮಾರುಕಟ್ಟೆ ಹತ್ತಿರ ಕತ್ತಿ ತೋರಿಸಿ ಬೆದರಿಕೆ ಹಾಕಿದ. ನಂತರ ಬಿ ಸಿ ರೋಡ್ ನತ್ತ ಆರೋಪಿ ಕಾರಿನಲ್ಲಿ ಹೊರಟು ಹೋದ ಎಂದು ಶಾಸಕ ಹರೀಶ್ ಪೂಂಜ ಅವರ ಕಾರಿನ ಚಾಲಕ ನವೀನ್ ಪೊಲೀಸರಿಗೆ ನೀಡಿರುವ ದೂರಿನಲ್ಲಿ ತಿಳಿಸಿದ್ದಾರೆ. 

ಪೊಲೀಸರು ಭಾರತೀಯ ದಂಡ ಸಂಹಿತೆ ಸೆಕ್ಷನ್ 341, 504 ಮತ್ತು 506ರಡಿಯಲ್ಲಿ ಕೆಲವು ಅಪರಿಚಿತರ ವಿರುದ್ಧ ದೂರು ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ. 

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com