ಕೃಷ್ಣಾ ನದಿಗೆ ಬಿದ್ದು ಮಹಿಳೆ ಆತ್ಮಹತ್ಯೆ; ಕೊಲ್ಹಾರ್ ಟೌನ್ ನಲ್ಲಿ ಘಟನೆ!

ಗುರುತು ತಿಳಿಯದ ಮಹಿಳೆಯೊಬ್ಬರು ಕೃಷ್ಣಾ ನದಿಗೆ ಬಿದ್ದು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಶನಿವಾರ ವಿಜಯಪುರದಲ್ಲಿ ನಡೆದಿದೆ.
ನದಿಗೆ ಹಾರಿ ಪ್ರಾಣಬಿಟ್ಟ ಮಹಿಳೆ
ನದಿಗೆ ಹಾರಿ ಪ್ರಾಣಬಿಟ್ಟ ಮಹಿಳೆ
Updated on: 

ವಿಜಯಪುರ: ಗುರುತು ತಿಳಿಯದ ಮಹಿಳೆಯೊಬ್ಬರು ಕೃಷ್ಣಾ ನದಿಗೆ ಬಿದ್ದು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಶನಿವಾರ ವಿಜಯಪುರದಲ್ಲಿ ನಡೆದಿದೆ.

ವಿಜಯಪುರದ ಕೊಲ್ಹಾರ ಟೌನ್ ನಲ್ಲಿ ಇಂದು ಬೆಳಗ್ಗೆ ಈ ಘಟನೆ ನಡೆದಿದ್ದು, ದ್ವಿಚಕ್ರ ವಾಹನದಲ್ಲಿ ಬಂದ ಮಹಿಳೆ ವಾಹನವನ್ನು ಸೇತುವೆ ಬಳಿ ನಿಲ್ಲಿಸಿ ನೋಡ-ನೋಡುತ್ತಲೇ ತಡೆಗೋಡೆ ಮೇಲೇರಿದ್ದಾರೆ. ದಾರಿಹೋಕರು ಇದನ್ನು ಕಂಡು ಆಕೆಯನ್ನು ತಡೆಯುವಷ್ಟರಲ್ಲಿಯೇ ಆಕೆ ನೀರಿಗೆ ಹಾರಿದ್ದಾರೆ ಎನ್ನಲಾಗಿದೆ. 

ಈ ವಿಚಾರವನ್ನು ಪೊಲೀಸರಿಗೆ ತಿಳಿಸಲಾಗಿದ್ದು, ಪೊಲೀಸರು ಘಟನಾ ಪ್ರದೇಶಕ್ಕೆ ಬರುವಷ್ಟರಲ್ಲೇ ಆಕೆಯ ಪ್ರಾಣಪಕ್ಷಿ ಹಾರಿಹೋಗಿದೆ. ಆತ್ಮಹತ್ಯೆ ಮಾಡಿಕೊಂಡ ಮಹಿಳೆಯ ಗುರುತು ಪತ್ತೆ ಇನ್ನಷ್ಟೇ ಪತ್ತೆಯಾಗಬೇಕಿದೆ ಎಂದು ಪೊಲೀಸರು ತಿಳಿಸಿದ್ದಾರೆ.
 

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com