ಉಡುಪಿ: ಜಿಲ್ಲೆಯಲ್ಲಿ ಚಲಿಸುತ್ತಿದ್ದ ಕಾರಿನಿಂದ ಸ್ಕೈ ಶಾಟ್ ಪಟಾಕಿಗಳನ್ನು ಸಿಡಿಸುವ ಮೂಲಕ ಸಾರ್ವಜನಿಕ ಸುರಕ್ಷತೆಗೆ ಅಪಾಯ ತಂದೊಡ್ಡಿದ ಆರೋಪದ ಮೇಲೆ ಯುವಕನೊಬ್ಬನನ್ನು ಶನಿವಾರ ಪೊಲೀಸರು ಬಂಧಿಸಿದ್ದಾರೆ.
ಆತನ ಕಾರನ್ನು ಸಹ ಪೊಲೀಸರು ವಶಪಡಿಸಿಕೊಂಡಿದ್ದಾರೆ.
ಪೊಲೀಸರ ಪ್ರಕಾರ, ವಿಶಾಲ್ ಕೊಹ್ಲಿ ಎಂಬಾತನನ್ನು ಮಣಿಪಾಲ ನಗರದಲ್ಲಿ ಬಂಧಿಸಲಾಗಿದೆ. ಯುವಕ ತನ್ನ ಕಾರಿನ ಮೇಲೆ ಸ್ಕೈ ಶಾಟ್ ಪಟಾಕಿಗಳನ್ನು ಇಟ್ಟು ಸಿಡಿಸಿದ್ದ. ಈತ ಸಾರ್ವಜನಿಕ ಸ್ಥಳಗಳಲ್ಲಿ ಸಂಚರಿಸುತ್ತಿದ್ದಂತೆ ಸ್ಕೈ ಶಾಟ್ ಪಟಾಕಿಗಳು ಒಂದರ ಹಿಂದೆ ಒಂದರಂತೆ ಸಿಡಿಯುತ್ತಲೇ ಇದ್ದವು.
ಪೆಟ್ರೋಲ್ ಪಂಪ್‌ನ ಹತ್ತಿರ ಕಾರು ಅಪಾಯಕಾರಿಯಾಗಿ ಚಲಿಸಿದಾಗ ಕೊಹ್ಲಿ ಮತ್ತು ಇತರ ಸಾರ್ವಜನಿಕರು ಸ್ವಲ್ಪದರಲ್ಲೇ ಪಾರಾಗಿದ್ದರು. ವಿಶಾಲ್ ಅವರ ಕೃತ್ಯದ ವಿಡಿಯೋ ಮತ್ತು ಫೋಟೋಗಳು ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದ್ದು, ಸಾರ್ವಜನಿಕರು ಅದರ ಬಗ್ಗೆ ಕಳವಳ ವ್ಯಕ್ತಪಡಿಸುವುದರೊಂದಿಗೆ ಕಮೆಂಟ್‌ಗಳ ಸುರಿಮಳೆಗೈದಿದ್ದಾರೆ.
ಗುರುವಾರ ಘಟನೆ ನಡೆದಿದ್ದು, ವಿಶಾಲ್‌ಗಾಗಿ ಪೊಲೀಸರು ಹುಡುಕಾಟ ನಡೆಸುತ್ತಿದ್ದಂತೆ ನಾಪತ್ತೆಯಾಗಿದ್ದಾರೆ. ಮಣಿಪಾಲ ಪೊಲೀಸರು ಆತನನ್ನು ಪತ್ತೆ ಹಚ್ಚಿ ಇಂದು ಬೆಳಗ್ಗೆ ಬಂಧಿಸಿದ್ದಾರೆ. ಈ ಸಂಬಂಧ ಮುಂದಿನ ತನಿಖೆ ನಡೆಯುತ್ತಿದೆ.
Advertisement