ಬೆಂಗಳೂರಿನಲ್ಲಿ 1.59 ಲಕ್ಷ ಗಣೇಶ ಮೂರ್ತಿಗಳ ವಿಸರ್ಜನೆ

ಕೆರೆಗಳು, ಕಲ್ಯಾಣಿಗಳು, ಸಂಚಾರಿ ಟ್ಯಾಂಕರ್‌ಗಳು ಸೇರಿದಂತೆ ನಿಗದಿತ ಸ್ಥಳಗಳಲ್ಲಿ ಬುಧವಾರ ಒಟ್ಟು 1.59 ಲಕ್ಷ ಗಣೇಶ ಮೂರ್ತಿಗಳನ್ನು ವಿಸರ್ಜಿಸಲಾಯಿತು.
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ
Updated on

ಬೆಂಗಳೂರು: ಕೆರೆಗಳು, ಕಲ್ಯಾಣಿಗಳು, ಸಂಚಾರಿ ಟ್ಯಾಂಕರ್‌ಗಳು ಸೇರಿದಂತೆ ನಿಗದಿತ ಸ್ಥಳಗಳಲ್ಲಿ ಬುಧವಾರ ಒಟ್ಟು 1.59 ಲಕ್ಷ ಗಣೇಶ ಮೂರ್ತಿಗಳನ್ನು ವಿಸರ್ಜಿಸಲಾಯಿತು. ಬಿಬಿಎಂಪಿ ಪ್ರಕಾರ, ಹಬ್ಬದ ದಿನದಂದು ಪೂಜೆಯ ನಂತರ ಪಾಲಿಕೆಯ ಎಂಟು ವಲಯಗಳಲ್ಲಿ 1,59,980 ಮೂರ್ತಿಗಳನ್ನು ವಿಸರ್ಜನೆ ಮಾಡಲಾಗಿದೆ.

ಪ್ಲಾಸ್ಟರ್ ಆಫ್ ಪ್ಯಾರಿಸ್ (ಪಿಒಪಿ) ಗಣೇಶ ಮೂರ್ತಿಗಳ ಬಳಕೆಗೆ ನಿಷೇಧವಿದ್ದರೂ, ಬಿಬಿಎಂಪಿ ವ್ಯಾಪ್ತಿಯಲ್ಲಿ 12,000  ಮೂರ್ತಿಗಳು ಪತ್ತೆಯಾಗಿವೆ. ಆದಾಗ್ಯೂ, ಅಧಿಕಾರಿಗಳು ಅಂತಹ ವಿಗ್ರಹಗಳು ಜಲಮೂಲಗಳಲ್ಲಿ ವಿಸರ್ಜನೆಯಾಗದಂತೆ ತಡೆದು ಬೇರೆಡೆ ವ್ಯವಸ್ಥೆ ಮಾಡಿದರು.

ಆ.31ರಂದು ಸಂಚಾರಿ/ ಮೊಬೈಲ್ ಟ್ಯಾಂಕರ್ ಹಾಗೂ ಕಲ್ಯಾಣಿ/ ಹೊಂಡಗಳಲ್ಲಿ ಒಟ್ಟು 1,59,980 ಗಣೇಶ ಮೂರ್ತಿಗಳನ್ನು ವಿಸರ್ಜನೆ ಮಾಡಲಾಗಿದೆ ಎಂದು ಪ್ರಕಟಣೆ ತಿಳಿಸಿದೆ. ಅತಿ ಹೆಚ್ಚು ಮಣ್ಣಿನ ಮೂರ್ತಿಗಳು (68,521) ದಕ್ಷಿಣ ವಲಯದಲ್ಲಿ ವಿಸರ್ಜನೆಯಾಗಿದ್ದು, ಇದೇ ವಲಯದಲ್ಲಿ ಅತಿ ಹೆಚ್ಚು ಪಿಒಪಿ ಮೂರ್ತಿಗಳೂ (11,402) ವಿಸರ್ಜನೆಯಾಗಿವೆ.

ಪಶ್ಚಿಮ ವಲಯ (306) ಇದೆ. ಆರ್‌.ಆರ್‌. ನಗರ– 152, ಬೊಮ್ಮನಹಳ್ಳಿ– 131, ಯಲಹಂಕ– 73, ದಾಸರಹಳ್ಳಿ ವಲಯದಲ್ಲಿ 22 ಪಿಒಪಿ ಮೂರ್ತಿಗಳು ವಿಸರ್ಜನೆಯಾಗಿವೆ. ಪೂರ್ವ ಹಾಗೂ ಮಹದೇವಪುರ ವಲಯಲದಲ್ಲಿ ಪಿಒಪಿ ಮೂರ್ತಿಗಳು ವಿಸರ್ಜನೆಯಾಗಿಲ್ಲ. ದಕ್ಷಿಣ ವಲಯದಲ್ಲಿ ಅತಿ ಹೆಚ್ಚು ಮಣ್ಣಿನ ಗಣೇಶ ಮೂರ್ತಿಗಳನ್ನು ವಿಸರ್ಜನೆ ಮಾಡಲಾಯಿತು. ಯಡಿಯೂರು ಕೆರೆಯಲ್ಲಿ 68,521 ವಿಗ್ರಹಗಳನ್ನು ವಿಸರ್ಜನೆ ಮಾಡಲಾಗಿದೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com