ಇಟಲಿಯಲ್ಲಿ ನಡೆದ ಭೂ ವಿಜ್ಞಾನ ಒಲಂಪಿಯಾಡ್‌ನಲ್ಲಿ ಮಿಂಚಿದ ಭಾರತೀಯ ವಿದ್ಯಾರ್ಥಿಗಳು!

ಇಟಲಿಯಲ್ಲಿ ಆಗಸ್ಟ್ 25ರಿಂದ 31ರವರೆಗೆ ನಡೆದ ಅಂತಾರಾಷ್ಟ್ರೀಯ ಭೂ ವಿಜ್ಞಾನ ಒಲಂಪಿಯಾಡ್ 2022(ಐಇಎಸ್‌ಒ) ನಲ್ಲಿ ಭಾರತದ ಎಂಟು ವಿದ್ಯಾರ್ಥಿಗಳು ಪ್ರಶಸ್ತಿಯನ್ನು ಗೆದ್ದಿದ್ದಾರೆ.
ಸಿದ್ದಾಂಗನಾ ಸಾಹೂ
ಸಿದ್ದಾಂಗನಾ ಸಾಹೂ

ಬೆಂಗಳೂರು: ಇಟಲಿಯಲ್ಲಿ ಆಗಸ್ಟ್ 25ರಿಂದ 31ರವರೆಗೆ ನಡೆದ ಅಂತಾರಾಷ್ಟ್ರೀಯ ಭೂ ವಿಜ್ಞಾನ ಒಲಂಪಿಯಾಡ್ 2022(ಐಇಎಸ್‌ಒ) ನಲ್ಲಿ ಭಾರತದ ಎಂಟು ವಿದ್ಯಾರ್ಥಿಗಳು ಪ್ರಶಸ್ತಿಯನ್ನು ಗೆದ್ದಿದ್ದಾರೆ. 

ವಿವಿಧ ರಾಜ್ಯಗಳ ಎಂಟು ವಿದ್ಯಾರ್ಥಿಗಳನ್ನು ಒಳಗೊಂಡ ಟೀಮ್ ಇಂಡಿಯಾ 37 ದೇಶಗಳ ತಂಡಗಳೊಂದಿಗೆ ಸ್ಪರ್ಧಿಸಿ ನಾಲ್ಕು ಚಿನ್ನ, ನಾಲ್ಕು ಬೆಳ್ಳಿ ಮತ್ತು ಆರು ಕಂಚಿನ ಪದಕಗಳನ್ನು ಗೆದ್ದಿದ್ದಾರೆ.

ಭೂ ವಿಜ್ಞಾನ ಸಚಿವಾಲಯದಿಂದ ಧನಸಹಾಯ ಮತ್ತು ಜಿಯೋಲಾಜಿಕಲ್ ಸೊಸೈಟಿ ಆಫ್ ಬೆಂಗಳೂರು ಆಯೋಜಿಸಿದ್ದು ಅಖಿಲ ಭಾರತ ಪ್ರವೇಶ ಪರೀಕ್ಷೆ ಮತ್ತು ಎರಡು ವಾರಗಳ ತರಬೇತಿ ಕಾರ್ಯಕ್ರಮ ಸೇರಿದಂತೆ ಕಠಿಣ ಸ್ಕ್ರೀನಿಂಗ್ ಪ್ರಕ್ರಿಯೆಯ ನಂತರ ಎಂಟು ವಿದ್ಯಾರ್ಥಿಗಳನ್ನು ಆಯ್ಕೆ ಮಾಡಿತ್ತು.

ವಿದ್ಯಾರ್ಥಿಗಳಾದ ಭಾನವ್ ನಂಬೂದ್ರಿ, ಸೋನಿತ್ ಸಿಸೋಲೇಕರ್, ಅಭಿಜಯ್ ಸಿಂಗ್ ಖೇಹ್ರಾ, ಅವಿಶಿ ಅಗರವಾಲ್, ಜಾಗೃತ್ ಗೌರ್, ಸಿದ್ದಾಂಗನಾ ಸಾಹೂ, ಕಿಶೋಂಗ್ ಭಾರಾಲಿ ದಾಸ್ ಮತ್ತು ಅರುಶ್ ಚೌಧರಿ ರಾಷ್ಟ್ರೀಯ ತಂಡ ಕ್ಷೇತ್ರ ತನಿಖಾ ವಿಭಾಗದಲ್ಲಿ ಎರಡು ಚಿನ್ನದ ತಂಡ ಪದಕಗಳನ್ನು ಗೆದ್ದಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com