ಬೆಂಗಳೂರು- ಮೈಸೂರು ದಶಪಥ ಹೆದ್ದಾರಿ ವರವೋ? ಶಾಪವೋ?: ಸಿಎಂ ಬೊಮ್ಮಾಯಿಗೆ ಶಾಸಕ ಡಿ.ಸಿ ತಮ್ಮಣ್ಣ ಪತ್ರ

ಬೆಂಗಳೂರು – ಮೈಸೂರು ಹೆದ್ದಾರಿ ‌ಅವ್ಯವಸ್ಥೆ ವಿರುದ್ದ‌  ಜೆಡಿಎಸ್ ಹೋರಾಟ ಮುಂದುವರೆದಿದ್ದು, ಶಾಸಕ ಡಿ‌.ಸಿ.ತಮ್ಮಣ್ಣ ಸಿಎಂ ಬಸವರಾಜ ಬೊಮ್ಮಾಯಿ ಅವರಿಗೆ ಪತ್ರ ಬರೆದು‌ ಆಕ್ರೋಶ ಹೊರಹಾಕಿದ್ದಾರೆ.
ಮೈಸೂರು- ಬೆಂಗಳೂರು ಹೆದ್ದಾರಿ
ಮೈಸೂರು- ಬೆಂಗಳೂರು ಹೆದ್ದಾರಿ
Updated on

ಬೆಂಗಳೂರು: ಬೆಂಗಳೂರು – ಮೈಸೂರು ಹೆದ್ದಾರಿ ‌ಅವ್ಯವಸ್ಥೆ ವಿರುದ್ದ‌  ಜೆಡಿಎಸ್ ಹೋರಾಟ ಮುಂದುವರೆದಿದ್ದು, ಶಾಸಕ ಡಿ‌.ಸಿ.ತಮ್ಮಣ್ಣ ಸಿಎಂ ಬಸವರಾಜ ಬೊಮ್ಮಾಯಿ ಅವರಿಗೆ ಪತ್ರ ಬರೆದು‌ ಆಕ್ರೋಶ ಹೊರಹಾಕಿದ್ದಾರೆ.

ಈಗ ಬೆಂಗಳೂರು-ಮೈಸೂರು ಮಧ್ಯೆ ದಶಪಥ ಹೆದ್ದಾರಿ ನಿರ್ಮಾಣವಾಗುತ್ತಿದೆ. ಈ ಹೆದ್ದಾರಿಯು ಅಭಿವೃದ್ಧಿಗೆ ಕೊಡುಗೆ ನೀಡುವುದರ ಬದಲು ಹೆದ್ದಾರಿಯ ಪಕ್ಕದ ಗ್ರಾಮೀಣ ಭಾಗದ ಜನರ ಆರ್ಥಿಕ ಅಭಿವೃದ್ಧಿಗೆ ಮಾರಕವಾಗಲಿದೆ. ಎರಡು ವರ್ಷಗಳಿಂದ ಕೊರೋನಾ ಕಾರಣದಿಂದ ಹೆದ್ದಾರಿಯ ಎರಡೂ ಬದಿಯ ಹೋಟೆಲ್‌, ಡಾಬಾ ಮತ್ತು ಸರಕು ಮಾರಾಟಗಾರರಿಗೆ ತೊಂದರೆಯಾಗಿತ್ತು.

ಇನ್ನುಮುಂದೆ ಅವು ಶಾಶ್ವತವಾಗಿ ಮುಚ್ಚುವ ಸ್ಥಿತಿಗೆ ತಲುಪುತ್ತವೆ. ಈಗಾಗಲೇ ಕೋಟ್ಯಂತರ ರು. ಸಾಲ ಮಾಡಿ, ಹೂಡಿಕೆ ಮಾಡಿರುವವರು ದಿವಾಳಿಯಾಗುವುದರ ಜೊತೆಗೆ ಅನೇಕ ಸಾವಿರ ಉದ್ಯೋಗ ನಷ್ಟವಾಗಿ, ಈಗಾಗಲೇ ಉದ್ಯೋಗ ಕಂಡುಕೊಂಡಿದ್ದ ಗ್ರಾಮೀಣ ಯುವಕ-ಯುವತಿಯರು ಪುನಃ ನಿರುದ್ಯೋಗಿಗಳಾಗುವ ಸಂಭವವಿದೆ.

139 ಕಿ.ಮೀ ಉದ್ದದ ಈ ಲೇನ್ ಸುಮಾರು 200 ಹಳ್ಳಿಗಳು ಮತ್ತು ಅನೇಕ ಪಟ್ಟಣಗಳಿಗೆ ಜೀವನಾಡಿಯಾಗಿ ಕಾರ್ಯನಿರ್ವಹಿಸುತ್ತದೆ ಎಂದು ಮಾಜಿ ಇಂಜಿನಿಯರ್ ತಮ್ಮಣ್ಣ ಅವರು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರಿಗೆ ಪತ್ರವೊಂದನ್ನು ಬರೆದಿದ್ದಾರೆ. ರಸ್ತೆಯಲ್ಲಿ ಅನೇಕ  ಮಂದಿ ತಮ್ಮ ಜೀವನ ನಿರ್ವಹಣೆಗಾಗಿ ವ್ಯಾಪಾರ ನಡೆಸುತ್ತಿದ್ದಾರೆ, ಇದರಿಂದ  50 ಮಂದಿಗೆ  ಉದ್ಯೋಗ ದೊರಕುತ್ತದೆ. ಈ ರಸ್ತೆಯಿಂದಾಗಿ ಪ್ರತ್ಯಕ್ಷವಾಗಿ ಹಾಗೂ ಪರೋಕ್ಷವಾಗಿ 20 ಸಾವಿರ ಉದ್ಯೋಗಗಳು ಸೃಷ್ಟಿಯಾಗಿವೆ.

ಅವರಲ್ಲಿ ಅನೇಕರು ತರಕಾರಿ, ಹಣ್ಣುಗಳು, ಹಾಲು ಮತ್ತು ಇತರ ಅಗತ್ಯ ವಸ್ತುಗಳನ್ನು ತಿನಿಸುಗಳನ್ನು ಸರಬರಾಜು ಮಾಡುವ ಮೂಲಕ ಪ್ರಯೋಜನ ಪಡೆದರು. ವಿದ್ಯಾವಂತ ನಿರುದ್ಯೋಗಿ ಗ್ರಾಮಸ್ಥರು ದಾರಿಯಲ್ಲಿರುವ ತಿನಿಸುಗಳು, ಗಾರ್ಮೆಂಟ್ ಘಟಕಗಳು ಮತ್ತು ಉತ್ಪಾದನಾ ಕೇಂದ್ರಗಳಲ್ಲಿ ಕೆಲಸ ಕಂಡುಕೊಂಡಿದ್ದಾರೆ ಎಂದು ಪತ್ರದಲ್ಲಿ ಬರೆದಿದ್ದಾರೆ.

ರಿಯಲ್ ಎಸ್ಟೇಟ್ ಮೌಲ್ಯದ ಏರಿಕೆಯಿಂದ ಲಾಭ ಪಡೆದ ಅನೇಕ ರೈತರು ಮತ್ತು ಭೂ ಮಾಲೀಕರು ಸಹ ಇದ್ದಾರೆ, ಇದು ಅವರಿಗೆ  ಆದಾಯ ಮತ್ತು ಸಂಪೂರ್ಣ ಮಾರಾಟದ ಸಂದರ್ಭದಲ್ಲಿ ಹೆಚ್ಚಿನ ಮೌಲ್ಯವನ್ನು ನೀಡಿತು.

ಹೆದ್ದಾರಿ ತಡೆದು ಬೆಂಗಳೂರಿನಿಂದ ಮೈಸೂರಿಗೆ ಏಕ ಪ್ರವೇಶ ನಿರ್ಗಮನದ ನಿರ್ಧಾರದಿಂದ ಪೆಟ್ರೋಲ್ ಬಂಕ್‌ಗಳು ಸೇರಿದಂತೆ ದಾರಿಯುದ್ದಕ್ಕೂ ಇರುವ ನೂರಾರು ಸಣ್ಣ ಉದ್ದಿಮೆಗಳ ಜೀವಕ್ಕೆ ಅಪಾಯವಿದೆ ಎಂದು ತಮ್ಮಣ್ಣ ಎಚ್ಚರಿಸಿದ್ದಾರೆ.

ಈಗಾಗಲೇ ಕೋಟ್ಯಂತರ ರು. ಸಾಲ ಮಾಡಿ, ಹೂಡಿಕೆ ಮಾಡಿರುವವರು ದಿವಾಳಿಯಾಗುವುದರ ಜೊತೆಗೆ ಅನೇಕ ಸಾವಿರ ಉದ್ಯೋಗ ನಷ್ಟವಾಗಿ, ಈಗಾಗಲೇ ಉದ್ಯೋಗ ಕಂಡುಕೊಂಡಿದ್ದ ಗ್ರಾಮೀಣ ಯುವಕ-ಯುವತಿಯರು ಪುನಃ ನಿರುದ್ಯೋಗಿಗಳಾಗುವ ಸಂಭವವಿದೆ ಎಂದಿದ್ದಾರೆ.

ಬೆಂಗಳೂರು-ಮೈಸೂರು ಮಧ್ಯೆ ಮೈಸೂರಿನ ಮಹಾರಾಜ ನಾಲ್ವಡಿ ಕೃಷ್ಣರಾಜ ಒಡೆಯರ್‌ ಅವರು ಸರ್‌.ಎಂ. ವಿಶ್ವೇಶ್ವರಯ್ಯನವರ ನೇತೃತ್ವದಲ್ಲಿ ದ್ವಿಪಥದ ಕಾಂಕ್ರೀಟ್‌ ರಸ್ತೆ ನಿರ್ಮಿಸಿದ್ದರು. 8 ದಶಕಗಳ ಕಾಲ ಉಭಯ ನಗರಗಳಿಗೆ ಸಂಪರ್ಕ ಕಲ್ಪಿಸಿದ್ದ ಈ ರಸ್ತೆಯು 2001ರವರೆಗೆ ಅಲ್ಲಲ್ಲಿ ಹಾಳಾಗಿ, ಹಾಳಾದ ಜಾಗದಲ್ಲಿ ಡಾಂಬರೀಕರಣಗೊಂಡು ಜನರ ಸಂಚಾರಕ್ಕೆ ಒದಗಿಬರುತ್ತಿತ್ತು.

ದಿವಂಗತ ನಾಲ್ಕನೇ ಕೃಷ್ಣರಾಜ ಒಡೆಯರ್ ಅವರ ಕಾಲದಿಂದ ಸುಮಾರು 80 ವರ್ಷಗಳ ಕಾಲ ರಾಜ್ಯಕ್ಕೆ ಸೇವೆ ಸಲ್ಲಿಸಿದ ಸರ್.ಎಂ.ವಿಶ್ವೇಶ್ವರಯ್ಯ ಅವರ ಅವಧಿಯಲ್ಲಿ ಸಿಂಗಲ್ ರಸ್ತೆಯನ್ನು ಅಗಲಗೊಳಿಸಿ ಡಬಲ್ ರೋಡ್ ಮಾಡಲಾಗಿತ್ತು ಎಂದು ನೆನಪಿಸಿದರು.  ತಮ್ಮಣ್ಣ ತಮ್ಮ ಐದು ಪುಟಗಳ ಪತ್ರದಲ್ಲಿ ರಸ್ತೆ ಯೋಜನೆಯಲ್ಲಿನ ರಚನಾತ್ಮಕ ದೋಷಗಳನ್ನೂ ಎತ್ತಿ ತೋರಿಸಿದ್ದಾರೆ. ಮೈಸೂರು-ಬೆಂಗಳೂರು ದಶಪಥ ಹೆದ್ದಾರಿ ಯೋಜನೆಯಿಂದ ಸುಮಾರು 200 ಹಳ್ಳಿಗಳ ಮೇಲೆ ಪರಿಣಾಮ ಬೀರಲಿದೆ ಎಂದು ವಿವರಿಸಿದ್ದಾರೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X
Google Preferred source

Advertisement

X
Kannada Prabha
www.kannadaprabha.com