ಯಾರು 'ಭಾರತ್ ಜೋಡೋ' ಮಾಡಿದ್ದಾರೆ, ಯಾರು 'ತೋಡೋ' ಮಾಡಿದ್ದಾರೆಂದು ಎಲ್ಲರಿಗೂ ತಿಳಿದಿದೆ: ಸಿಎಂ ಬೊಮ್ಮಾಯಿ

ಯಾರು ಭಾರತ್ ಜೋಡೋ ಮಾಡಿದ್ದಾರೆ, ಯಾರು ಭಾರತ್ ತೋಡೋ ಮಾಡಿದ್ದಾರೆ ಎಂದು ಎಲ್ಲರಿಗೂ ಗೊತ್ತಿದೆ ಎಂದು ಮುಖ್ಯ ಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ.
ಸಿಎಂ ಬೊಮ್ಮಾಯಿ
ಸಿಎಂ ಬೊಮ್ಮಾಯಿ
Updated on

ಹಾವೇರಿ: ಯಾರು ಭಾರತ್ ಜೋಡೋ ಮಾಡಿದ್ದಾರೆ, ಯಾರು ಭಾರತ್ ತೋಡೋ ಮಾಡಿದ್ದಾರೆ ಎಂದು ಎಲ್ಲರಿಗೂ ಗೊತ್ತಿದೆ ಎಂದು ಮುಖ್ಯ ಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ.

ಹಾವೇರಿ ಜಿಲ್ಲೆಯ ಸಿ.ಬಿ. ಕೊಳ್ಳಿ ಪಾಲಿಟೆಕ್ನಿಕ್ ಕಾಲೇಜು ಮೈದಾನದ ಹೆಲಿಪ್ಯಾಡ್‍ಗೆ ಬಂದಿಳಿದು ಕಾರ್ಯಕ್ರಮಕ್ಕೆ ತೆರಳುವ ಮುನ್ನ ಮಾಧ್ಯಮದವರೊಂದಿಗೆ ಮಾತನಾಡಿದ ಸಿಎಂ ಬೊಮ್ಮಾಯಿ ಅವರು, ಭಾರತ್ ಜೋಡೋ ಫ್ಲೆಕ್ಸ್ ಗಳನ್ನು ಹರಿದುಹಾಕಿರುವ ಬಗ್ಗೆ ಡಿ.ಕೆ.ಶಿವಕುಮಾರ್ ಹೇಳಿಕೆಗೆ ಪ್ರತಿಕ್ರಿಯೆ ನೀಡಿ ಡಿ.ಕೆ.ಶಿವಕುಮಾರ್ ಏನಾದರೂ ಹೇಳಲಿ. ಯಾರೇ ಫ್ಲೆಕ್ಸ್ ಹಾಕಬೇಕಾದರೂ ಅನುಮತಿ ಪಡೆಯಬೇಕು. ಯಾವುದೇ ರಾಜಕೀಯ ಪಕ್ಷದ ಫ್ಲೆಕ್ಸ್ ಹರಿಯುವ ಅವಶ್ಯಕತೆ  ಬಿಜೆಪಿಗೆ ಇಲ್ಲ. ಎಲ್ಲ ಜನರಿಗೂ ಎಲ್ಲಾ ವಿಚಾರಗಳು ಗೊತ್ತಿದೆ.  ಹೀಗಾಗಿ ಅದರ ಅವಶ್ಯಕತೆ ಇಲ್ಲ ಎಂದು ನನ್ನ ಭಾವನೆ ಎಂದರು.

SDPI ಬಗ್ಗೆ ಈಗಲೇ ನಿರ್ಧಾರವಿಲ್ಲ
ಇದೇ ವೇಳೆ SDPI ವಿಚಾರದ ಕುರಿತು ಮಾತನಾಡಿದ ಸಿಎಂ ಬೊಮ್ಮಾಯಿ, 'PFI ನಿಷೇಧಿಸಲಾಗಿದೆ. ಹಲವಾರು ಪಾತ್ರಗಳನ್ನು ಪಡೆದುಕೊಡದ್ದಿದೆ. SDPI ಭಾರತ ಚುನಾವಣಾ ಆಯೋಗದಲ್ಲಿ ನೋಂದಣಿಯಾಗಿರುವ ಪಕ್ಷ. ಇದರ ನಿಷೇಧದ ಬಗ್ಗೆ ಯಾವುದೇ ನಿರ್ಧಾರ ಕೇಂದ್ರ ಸರ್ಕಾರ ತೆಗೆದುಕೊಂಡಿಲ್ಲ. ಬರುವ ದಿನಗಳ ಬೆಳವಣಿಗೆಯ ಆಧಾರದ ಮೇಲೆ ಕ್ರಮ ವಹಿಸಲಾಗುವುದು ಎಂದರು.

PFI ನಿಷೇಧ ರಾಜಕೀಯ ಸ್ಟಂಟ್ ಹಾಗೂ ಚುನಾವಣಾ ಗಿಮಿಕ್ ಎಂದಿರುವ ಬಿ.ಕೆ.ಹರಿಪ್ರಸಾದ್ ಅವರಿಗೆ ಬೇರೇನೂ ವ್ಯಾಖ್ಯಾನ ಮಾಡಲು ಸಾಧ್ಯ. ಇಷ್ಟು ವರ್ಷ ವಿಧ್ವಂಸಕ ಕೃತ್ಯಗಳು ನಮ್ಮೆದುರಿಗೆ ನಡೆದಿದೆ. ಕೊಲೆ, ಭಯೋತ್ಪಾದನೆ ಚಟುವಟಿಗೆ ಬೆಂಬಲ ನೀಡಿದ್ದಾರೆ. ಇದೇ ಕಾಂಗ್ರೆಸ್ ವಿಧಾನ ಸಭೆ ಒಳಹೊರಗೆ  ನಿಷೇಧಿಸಿ ಅಂತ ಹೇಳುತ್ತಿದ್ದವರು, ಈಗ ಗಿಮಿಕ್ ಎಂದು ಕರೆಯುವುದು ಎಷ್ಟರ ಮಟ್ಟಿಗೆ ಸರಿ ಎಂದು ಹರಿಪ್ರಸಾದ್ ಯೋಚಿಸಬೇಕು ಎಂದರು.

ಕನ್ನಡ ಭವನಕ್ಕೆ ಭೂಮಿ ಕುರಿತು ಗೋವಾ ಸಿಎಂಗೆ ಪತ್ರ
ಕನ್ನಡ ಭವನಕ್ಕೆ ಎರಡು ಎಕರೆ ಸ್ಥಳ ನಿಗದಿ ಮಾಡಲು ಗೋವಾ ಮುಖ್ಯ ಮಂತ್ರಿಗಳಿಗೆ ಪತ್ರ ಬರೆಯಲಾಗಿದೆ ಹಾಗೂ ಅವರೊಂದಿಗೆ ಮಾತನಾಡಲಾಗಿದೆ. ಸ್ಥಳ ನಿಗದಿ ಮಾಡುವುದಾಗಿ ಹೇಳಿದ್ದಾರೆ ಎಂದರು. ಭಾರತ್ ಜೋಡೋ  ಕಾರ್ಯಕ್ರಮಕ್ಕೆ ಸಾಹಿತಿಗಳ ಬೆಂಬಲ ನೀಡಿರುವ ಬಗ್ಗೆ ಪ್ರತಿಕ್ರಿಯೆ ನೀಡಿದ ಸಿಎಂ,  ದೇಶದಲ್ಲಿ ಸಾಹಿತಿಗಳು ಎರಡೂ ಕಡೆ ಇದ್ದಾರೆ. ಹಾಗಾಗಿ ಕೆಲವರು ಅಲ್ಲಿ, ಕೆಲವರು ಇಲ್ಲಿ ಬೆಂಬಲ ನೀಡುತ್ತಾರೆ. ನವೆಂಬರ್ ನಲ್ಲಿ ನಡೆಯಲಿರುವ ಹಾವೇರಿ ಸಾಹಿತ್ಯ ಸಮ್ಮೇಳನಕ್ಕೆ ಎಲ್ಲಾ ಸಿದ್ಧತೆಗಳು ನಡೆಯುತ್ತಿದೆ. ಅದ್ದೂರಿಯಾಗಿ ಸಮ್ಮೇಳನ ಮಾಡುತ್ತೇವೆ ಎಂದರು.

ಕಾರ್ಯಕ್ರಮಗಳಿಗೆ ಚಾಲನೆ
ಕೆಎಂಎಫ್ ಕಚೇರಿ ಉದ್ಘಾಟನೆ ಹಾಗೂ ಮೆಗಾ ಡೈರಿ ಶಂಕು ಸ್ಥಾಪನೆ ಪ್ರಮುಖ ಕಾರ್ಯಕ್ರಮ. ಹಾಲು ಉತ್ಪಾದನೆ ಹಾಗೂ ಹಾಲು ಉತ್ಪಾದಕರಿಗೆ ಬಹಳಷ್ಟು ಅನುಕೂಲ ಕೊಡುವ ಕಾರ್ಯಕ್ರಮ ಇದಾಗಿದೆ. ಇದರ ಜೊತೆಗೆ ಹಲವಾರು ಕಾರ್ಯಕ್ರಮಗಳಿಗೆ ಚಾಲನೆ ನೀಡಲಾಗುತ್ತಿದೆ. ಬಜೆಟ್ ನಲ್ಲಿ ಹೇಳಲಾಗಿರುವ ಕಾರ್ಯಕ್ರಮಗಳ ಪ್ರಾರಂಭವಾಗುತ್ತಿದೆ ಎಂದರು.

ಸಚಿವರಾದ  ಶಿವರಾಂ ಹೆಬ್ಬಾರ್, ಬಿ.ಸಿ. ಪಾಟೀಲ್, ಸಂಸದ ಶಿವಕುಮಾರ್ ಉದಾಸಿ, ಶಾಸಕ ನೆಹರೂ ಓಲೇಕಾರ್, ಮಾಜಿ ಶಾಸಕ ಮಹಿಮಾ ಪಟೇಲ್ ಮೊದಲಾದವರು ಉಪಸ್ಥಿತರಿದ್ದರು.
 

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com