ಭಾರತ-ಚೀನಾ ಸಂಬಂಧ ಸದ್ಯದ ಪರಿಸ್ಥಿತಿಯಲ್ಲಿ ಉದ್ವಿಗ್ನ; ಇನ್ನೂ ಅಪಾಯಕಾರಿಯಾಗಬಹುದು: ವಿದೇಶಾಂಗ ಸಚಿವ ಜೈಶಂಕರ್

ಭಾರತ-ಚೀನಾ ಸಂಬಂಧ ಉದ್ವಿಗ್ನವಾಗಿದ್ದು, ಗಡಿ ವಿವಾದದಿಂದಾಗಿ ಇದು ಅಪಾಯಕಾರಿ ಪರಿಸ್ಥಿತಿಯಾಗಬಹುದು ಎಂದು ವಿದೇಶಾಂಗ ವ್ಯವಹಾರಗಳ ಸಚಿವ ಡಾ ಎಸ್ ಜೈಶಂಕರ್ ಹೇಳಿದ್ದಾರೆ.
ಬೆಂಗಳೂರಿನ ಪಿಇಎಸ್ ಶಿಕ್ಷಣ ಸಂಸ್ಥೆಗೆ ಭೇಟಿ ನೀಡಿ ವಿದ್ಯಾರ್ಥಿಗಳಿಂದ ಆರ್ಟಿಫಿಶಿಯಲ್ ಇಂಟೆಲಿಜೆನ್ಸ್ ಮತ್ತು ತಂತ್ರಜ್ಞಾನ ಬಗ್ಗೆ ಮಾಹಿತಿ ಪಡೆದ ವಿದೇಶಾಂಗ ಸಚಿವ ಜೈಶಂಕರ್
ಬೆಂಗಳೂರಿನ ಪಿಇಎಸ್ ಶಿಕ್ಷಣ ಸಂಸ್ಥೆಗೆ ಭೇಟಿ ನೀಡಿ ವಿದ್ಯಾರ್ಥಿಗಳಿಂದ ಆರ್ಟಿಫಿಶಿಯಲ್ ಇಂಟೆಲಿಜೆನ್ಸ್ ಮತ್ತು ತಂತ್ರಜ್ಞಾನ ಬಗ್ಗೆ ಮಾಹಿತಿ ಪಡೆದ ವಿದೇಶಾಂಗ ಸಚಿವ ಜೈಶಂಕರ್

ಬೆಂಗಳೂರು: ಭಾರತ-ಚೀನಾ ಸಂಬಂಧ ಉದ್ವಿಗ್ನವಾಗಿದ್ದು, ಗಡಿ ವಿವಾದದಿಂದಾಗಿ ಇದು ಅಪಾಯಕಾರಿ ಪರಿಸ್ಥಿತಿಯಾಗಬಹುದು ಎಂದು ವಿದೇಶಾಂಗ ವ್ಯವಹಾರಗಳ ಸಚಿವ ಡಾ ಎಸ್ ಜೈಶಂಕರ್ ಹೇಳಿದ್ದಾರೆ.

ನಿನ್ನೆ ಬೆಂಗಳೂರಿನಲ್ಲಿ ಮಾಧ್ಯಮ ಸಂವಾದದೊಂದಿಗೆ ಮಾತನಾಡಿದ ಅವರು, ಸದ್ಯದ ಪರಿಸ್ಥಿತಿಯಲ್ಲಿ ಭಾರತ-ಚೀನಾ ಸಂಬಂಧ ಸಹಜವಾಗಿಲ್ಲ ಎಂದು ಹೇಳಿದ್ದಾರೆ.

ಪೂರ್ವ ಲಡಾಕ್ ನ ಗಡಿ ವಾಸ್ತವ ರೇಖೆಯುದ್ದಕ್ಕೂ ಚೀನಾ ಸೇನೆಯನ್ನು ಹಿಂತೆಗೆದುಕೊಳ್ಳಲು ಭಾರತ-ಚೀನಾ ಮಧ್ಯೆ ಇದುವರೆಗೆ 16 ಸುತ್ತಿನ ಕಮಾಂಡರ್ ಮಟ್ಟದ ಮಾತುಕತೆ ನಡೆದರೂ ಕೂಡ ಇನ್ನೂ ಸಮಸ್ಯೆ ಬಗೆಹರಿದಿಲ್ಲ. ಕಳೆದ ಎರಡು ಚಳಿಗಾಲದಲ್ಲಿ ಭಾರತೀಯ ಸೇನೆ ನೆಲೆ ಕಂಡುಕೊಂಡಿದ್ದು ಅದು ನಮ್ಮ ಸಂಕಲ್ಪವನ್ನು ತೋರಿಸುತ್ತದೆ. ಚೀನಾ ಸೇನೆ ಹತ್ತಿರವಾಗಿ ನೆಲೆನಿಂತಿರುವ ಪೂರ್ವ ಲಡಾಕ್ ನ ಗಡಿಯಿಂದ ಭಾರತೀಯ ಸೇನೆಯ ಪಡೆಯನ್ನು ಹಿಂಪಡೆಯಲು ಸಾಕಷ್ಟು ಪ್ರಗತಿಯನ್ನು ಮಾಡಿದೆ. ಇನ್ನೂ ಕೆಲವು ಪ್ರದೇಶಗಳು ಗಡಿಯಲ್ಲಿ ಖಾಲಿಯಿವೆ ಎಂದು ಪೂರ್ವ ಲಡಾಕ್ ನ ಪರಿಸ್ಥಿತಿಯನ್ನು ಸಚಿವ ಜೈಶಂಕರ್ ಹೇಳಿದರು.

ಗಡಿ ಪ್ರದೇಶಗಳಲ್ಲಿ ಚೀನಾ ಶಾಂತಿ ಕದಡಿದರೆ ಅದು ಅವರೊಂದಿಗಿನ ನಮ್ಮ ದ್ವಿಪಕ್ಷೀಯ ಸಂಬಂಧದ ಮೇಲೆ ಪರಿಣಾಮ ಬೀರುತ್ತದೆ ಎಂಬ ನಿಲುವನ್ನು ಭಾರತ ನಿರಂತರವಾಗಿ ಉಳಿಸಿಕೊಂಡಿದೆ ಎಂದರು.

ಚೀನಾದ ಬ್ಯಾಲಿಸ್ಟಿಕ್ ಕ್ಷಿಪಣಿ ಮತ್ತು ಉಪಗ್ರಹ ಪತ್ತೆಹಚ್ಚುವಿಕೆಯ ಹಡಗು 'ಯುವಾನ್ ವಾಂಗ್ 5' ವಿರುದ್ಧ ಭಾರತದ ಭದ್ರತಾ ಕಾಳಜಿಗಳ ಬಗ್ಗೆ ಶ್ರೀಲಂಕಾದ ಹಂಬಂಟೋಟಾ ಬಂದರಿನಲ್ಲಿ MEA ವಕ್ತಾರ ಅರಿಂದಮ್ ಬಾಗ್ಚಿ ಅವರ ಅಭಿಪ್ರಾಯಗಳನ್ನು ಪುನರುಚ್ಚರಿಸಿದರು.

"ಭದ್ರತಾ ಕಾಳಜಿಯು ಸಾರ್ವಭೌಮವಾಗಿದೆ. ಪ್ರತಿ ದೇಶದ ಹಕ್ಕು. ನಾವು ಸ್ವಂತ ಹಿತಾಸಕ್ತಿಯಿಂದ ಉತ್ತಮ ತೀರ್ಪು ನೀಡುತ್ತೇವೆ. ಚೀನಾದ ಬೆಲ್ಟ್ ಅಂಡ್ ರೋಡ್ ಇನಿಶಿಯೇಟಿವ್ ನಮ್ಮ ಸಾರ್ವಭೌಮತ್ವ ಮತ್ತು ಪ್ರಾದೇಶಿಕ ಸಮಗ್ರತೆಯನ್ನು ಉಲ್ಲಂಘಿಸುತ್ತದೆ ಎಂದು ಹೇಳಿದರು.

ಮಾತುಕತೆ ಮೂಲಕ ಸಂಘರ್ಷ ಬರೆಹರಿಸಿ: ಉಕ್ರೇನ್-ರಷ್ಯಾ ಸಂಘರ್ಷದ ಕುರಿತು ಮಾತನಾಡಿದ ವಿದೇಶಾಂಗ ಸಚಿವರು, ಇದು ಇಂಧನ ಮತ್ತು ಆಹಾರ ಬಿಕ್ಕಟ್ಟಿಗೆ ಕಾರಣವಾಗಿದೆ ಎಂದು ಹೇಳಿದರು. "ಘರ್ಷಣೆಯು ಜಾಗತಿಕ ವ್ಯಾಪಾರದ ಮೇಲೆ ಪರಿಣಾಮ ಬೀರಿದೆ, ತೈಲ, ಗೋಧಿ ಮತ್ತು ಅರೆವಾಹಕಗಳ ಪೂರೈಕೆಯಲ್ಲಿ ಚಂಚಲತೆಯನ್ನು ಸೃಷ್ಟಿಸಿದೆ ಮತ್ತು ಹೂಡಿಕೆ ಸವಾಲುಗಳಿಗೆ ಕಾರಣವಾಗಿದೆ.

ಈ ಎಲ್ಲಾ ಸವಾಲುಗಳನ್ನು ನಾವು ಎದುರಿಸಬೇಕಿದೆ. ರಾಜಕೀಯವಾಗಿ, ಸಂಘರ್ಷವನ್ನು ಮಾತುಕತೆ ಮತ್ತು ರಾಜತಾಂತ್ರಿಕತೆಯ ಮೂಲಕ ಪರಿಹರಿಸಬೇಕು. ಜಗತ್ತಿನಲ್ಲಿ ಅಸ್ಥಿರತೆ ರಾಷ್ಟ್ರೀಯ ಭದ್ರತೆಗೆ ಸವಾಲಾಗಿದ್ದು, ಅದನ್ನು ಪರಿಹರಿಸಲು ಮೋದಿ ಸರ್ಕಾರ ಎಲ್ಲ ಪ್ರಯತ್ನಗಳನ್ನು ಮಾಡುತ್ತಿದೆ ಎಂದರು. ಭಾರತವು ಐತಿಹಾಸಿಕವಾಗಿ ಆಫ್ಘಾನಿಸ್ತಾನದ ಜನರೊಂದಿಗೆ ಸಂಬಂಧವನ್ನು ಉಳಿಸಿಕೊಂಡಿದೆ ಎಂದು ಹೇಳಿದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com