ಅಮುಲ್ ಹಾಲಿನ ಬೆಲೆ ಹೆಚ್ಚಳದ ಬೆನ್ನಲ್ಲೇ ಕೆಎಂಎಫ್‌ ಕೂಡ ಹಾಲಿನ ಬೆಲೆ ಹೆಚ್ಚಳಕ್ಕೆ ಮುಂದಾಗಿದೆಯೇ?

ದೇಶದ ಪ್ರಮುಖ ಹಾಲು ಮತ್ತು ಹಾಲಿನ ಉತ್ಪನ್ನಗಳನ್ನು ಮಾರಾಟ ಮಾಡುವ ಕಂಪನಿಗಳಾದ ಅಮುಲ್‌ ಮತ್ತು ಮದರ್‌ ಡೈರಿ ಮಂಗಳವಾರ ಹಾಲಿನ ಮಾರಾಟ ದರವನ್ನು ಲೀಟರ್‌ಗೆ 2 ರೂ. ಏರಿಕೆ ಮಾಡಿವೆ. ಇದೇ ಬೆನ್ನಲ್ಲೇ ನಂದಿನಿ ಹೆಸರಿನಲ್ಲಿ ಉತ್ಪನ್ನಗಳನ್ನು ಹೊರತರುವ ಕರ್ನಾಟಕ ಹಾಲು ಒಕ್ಕೂಟ (ಕೆಎಂಎಫ್) ಕೂಡ ಬೆಲೆ ಏರಿಕೆ ಮಾಡಲಿದೆಯೇ ಎನ್ನುವ ಮಾತುಗಳು ಕೇಳಿಬಂದಿದೆ.
ಪ್ರಾತಿನಿಧಿಕ ಚಿತ್ರ
ಪ್ರಾತಿನಿಧಿಕ ಚಿತ್ರ

ಬೆಂಗಳೂರು: ದೇಶದ ಪ್ರಮುಖ ಹಾಲು ಮತ್ತು ಹಾಲಿನ ಉತ್ಪನ್ನಗಳನ್ನು ಮಾರಾಟ ಮಾಡುವ ಕಂಪನಿಗಳಾದ ಅಮುಲ್‌ ಮತ್ತು ಮದರ್‌ ಡೈರಿ ಮಂಗಳವಾರ ಹಾಲಿನ ಮಾರಾಟ ದರವನ್ನು ಲೀಟರ್‌ಗೆ 2 ರೂ. ಏರಿಕೆ ಮಾಡಿವೆ. ಇದೇ ಬೆನ್ನಲ್ಲೇ ನಂದಿನಿ ಹೆಸರಿನಲ್ಲಿ ಉತ್ಪನ್ನಗಳನ್ನು ಹೊರತರುವ ಕರ್ನಾಟಕ ಹಾಲು ಒಕ್ಕೂಟ (ಕೆಎಂಎಫ್) ಕೂಡ ಬೆಲೆ ಏರಿಕೆ ಮಾಡಲಿದೆಯೇ ಎನ್ನುವ ಮಾತುಗಳು ಕೇಳಿಬಂದಿದೆ. ಹಾಲಿನ ದರವನ್ನು ಹೆಚ್ಚಿಸುವ ಪ್ರಸ್ತಾವನೆಯನ್ನು ಸರ್ಕಾರದ ಮುಂದೆ ಇಡಲಾಗಿದ್ದು, ಅದು ಬಾಕಿ ಉಳಿದಿದೆ ಎಂದು ಮೂಲಗಳು ತಿಳಿಸಿವೆ.

ಅತ್ಯಂತ ಸ್ಪರ್ಧಾತ್ಮಕ ಹಾಲು ಉತ್ಪಾದನಾ ಮಾರುಕಟ್ಟೆಯಲ್ಲಿ ಹಾಲಿನ ಬೆಲೆ ಏರಿಕೆಯಾಗಲಿ ಅಥವಾ ಸಂಗ್ರಹಣೆ ಹೆಚ್ಚಾಗಲಿ ಕೊನೆಗೆ ಹಾಲು ಉತ್ಪಾದಕನಾಗಿರುವ ರೈತನೇ ಅಂತಿಮ ಫಲಾನುಭವಿ ಎಂದು ಡೈರಿ ತಜ್ಞರು ಹೇಳಿದ್ದಾರೆ. ಒಂದು ವೇಳೆ ಲೀಟರ್ ಹಾಲಿಗೆ 2 ರೂಪಾಯಿ ಹೆಚ್ಚಳವಾದರೆ, ಶೇ 80 ರಷ್ಟು ರೈತನಿಗೆ ಹೋಗುತ್ತದೆ ಎಂದು ಅವರು ಹೇಳಿದರು.

ಹಾಲಿನ ದರ ಹೆಚ್ಚಿಸುವ ಬಗ್ಗೆ ಕೆಎಂಎಫ್ ಅಧ್ಯಕ್ಷ ಬಾಲಚಂದ್ರ ಜಾರಕಿಹೊಳಿ ಹಾಗೂ ಮಂಡಳಿಯೊಂದಿಗೆ ಚರ್ಚಿಸುತ್ತೇವೆ ಎಂದು ಕೆಎಂಎಫ್ ಎಂಡಿ ಬಿ.ಸಿ. ಸತೀಶ್ ಟಿಎನ್‌ಐಇಗೆ ತಿಳಿಸಿದ್ದಾರೆ. ಈ ಬಗ್ಗೆ ಜಾರಕಿಹೊಳಿ ಪ್ರತಿಕ್ರಿಯೆಗೆ ಲಭ್ಯವಾಗಿಲ್ಲ.

ಡೈರಿ ಸೈನ್ಸ್ ಕಾಲೇಜಿನ ಮಾಜಿ ಅಧ್ಯಾಪಕ ಡಾ. ಶಂಕರ್ ಪಿ.ಎ ಮಾತನಾಡಿ, 'ಇತರ ಕೃಷಿ ಉತ್ಪನ್ನಗಳು ವ್ಯರ್ಥವಾಗುತ್ತಿರುವಾಗ ಅಥವಾ ಕಡಿಮೆ ಬೆಲೆಯಿಂದ ಬಳಲುತ್ತಿರುವಾಗ, ಹಾಲಿನ ಬೆಲೆ ಹೆಚ್ಚಳ ಮಾಡಬೇಕು, ಆದರೆ ಸರ್ಕಾರ ಅದಕ್ಕೆ ಅವಕಾಶ ನೀಡುತ್ತದೆಯೇ? ಹಾಲು ಉತ್ಪಾದಕರಾದ ರೈತರಿಗೆ ಅನುಕೂಲವಾಗುತ್ತದೆ ಎಂಬುದು ನಿಜವಾದರೂ, ಹಾಲಿನ ಬೆಲೆ ಏರಿಕೆಯಿಂದ ಹಲವು ಪರಿಣಾಮಗಳು ಉಂಟಾಗುತ್ತವೆ. ಹೀಗಾಗಿ ಬೆಲೆ ಏರಿಕೆಗೆ ಸರ್ಕಾರ ಹೇಗೆ ಅವಕಾಶ ನೀಡುತ್ತದೆ? ಎಂದು ಹೇಳಿದ್ದಾರೆ.

ರೈತ ಸಂಘದ ಮುಖಂಡ ಕುರುಬೂರು ಶಾಂತಕುಮಾರ್ ಮಾತನಾಡಿ, ‘ಹೈನುಗಾರಿಕೆ ಕ್ಷೇತ್ರಕ್ಕೆ ನೀಡಲಾಗಿರುವ ಕೇಂದ್ರದ ಹಲವು ಯೋಜನೆಗಳು ಕೇವಲ ಕಾಗದದಲ್ಲಿಯೇ ಉಳಿದಿರುವುದರಿಂದ ನಿಜವಾದ ರೈತರಿಗೆ ಪ್ರಯೋಜನವಾಗಿಲ್ಲ’ ಎನ್ನುತ್ತಾರೆ.

ಮೇವು, ಔಷಧಗಳು, ಸಾರಿಗೆ ಮತ್ತು ವಿದ್ಯುತ್‌ನಂತಹ ಹೈನುಗಾರಿಕೆ ಸಂಬಂಧಿತ ವಸ್ತುಗಳ ಬೆಲೆಗಳು ಹೆಚ್ಚಾಗಿವೆ ಎಂದು ತಜ್ಞರು ಹೇಳಿದ್ದಾರೆ.

ಕೆಎಂಎಫ್‌ನ ಮಾಜಿ ಉದ್ಯೋಗಿಯೊಬ್ಬರು, 'ರೈತರನ್ನು ಉತ್ತೇಜಿಸಲು ಪ್ರತಿ ಲೀಟರ್‌ಗೆ 5 ರೂಪಾಯಿ ಸಬ್ಸಿಡಿ ನೀಡುವ ಏಕೈಕ ರಾಜ್ಯ ಕರ್ನಾಟಕ' ಎಂದು ಹೇಳಿದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X

Advertisement

X
Kannada Prabha
www.kannadaprabha.com