ಮುಂಬರುವ ತಿಂಗಳುಗಳಲ್ಲಿ ಹೆಚ್ಚಿನ ಒತ್ತಡವಿರಲಿದೆ; ಆದರೆ ನಿಭಾಯಿಸುತ್ತೇವೆ; ಎಡಿಜಿಪಿ ಅಲೋಕ್ ಕುಮಾರ್

ರಾಜ್ಯದಲ್ಲಿನ ಕೋಮು ಸೌಹಾರ್ದತೆಯ ವಾತಾವರಣ ಹದಗೆಟ್ಟಿದ್ದು ಇಂತಹ ಪರಿಸ್ಥಿತಿಯಲ್ಲಿ ಕಾನೂನು ಸುವ್ಯವಸ್ಥೆ ಕಾಪಾಡಲು ಪೊಲೀಸರು ಅತ್ಯಂತ ಹೆಚ್ಚಿನ ಒತ್ತಡದಲ್ಲಿದ್ದಾರೆ. 
ಐಪಿಎಸ್ ಅಧಿಕಾರಿ ಅಲೋಕ್ ಕುಮಾರ್
ಐಪಿಎಸ್ ಅಧಿಕಾರಿ ಅಲೋಕ್ ಕುಮಾರ್

ಮಸೂದ್ ಬಿ, ಪ್ರವೀಣ್ ನೆಟ್ಟಾರು ಹಾಗೂ ಮೊಹಮ್ಮದ್ ಫಾಜಿಲ್ ಹತ್ಯೆ ಪ್ರಕರಣಗಳು, ಆಗಸ್ಟ್ 15 ರಂದು ಶಿವಮೊಗ್ಗದಲ್ಲಿ ವೀರ್ ಸಾವರ್ ಕರ್ ಹಾಗೂ ಟಿಪ್ಪು ಸುಲ್ತಾನ್ ಪೋಸ್ಟರ್ ವಿವಾದ ರಾಜ್ಯದಲ್ಲಿನ ಕೋಮು ಸೌಹಾರ್ದತೆಯ ವಾತಾವರಣವನ್ನು ಹದಗೆಡಿಸಿದ್ದು ಇಂತಹ ಪರಿಸ್ಥಿತಿಯಲ್ಲಿ ಕಾನೂನು ಸುವ್ಯವಸ್ಥೆ ಕಾಪಾಡಲು ಪೊಲೀಸರು ಅತ್ಯಂತ ಹೆಚ್ಚಿನ ಒತ್ತಡದಲ್ಲಿದ್ದಾರೆ. 

ರಾಜ್ಯದಲ್ಲಿ ಪೊಲೀಸ್ ಅಧಿಕಾರಿಗಳ ಕೆಲಸ ಅತ್ಯಂತ ಸವಾಲಿನ ಕೆಲಸವಾಗಿ ಪರಿಣಮಿಸಿದ್ದು, ಸಾರ್ವಜನಿಕ ಕೇಂದ್ರಿತ ಯೋಜನೆಗಳು, ಸೇವೆಗಳಿಗಿಂತಲೂ ಕಾನೂನು ಸುವ್ಯವಸ್ಥೆಯನ್ನು ನಿಭಾಯಿಸುವುದಕ್ಕೆ ನಮ್ಮ ಶಕ್ತಿ ವ್ಯಯವಾಗುತ್ತಿದೆ. ಮುಂದಿನ ತಿಂಗಳುಗಳಲ್ಲಿ ಪೊಲೀಸ್ ಅಧಿಕಾರಿಗಳು ಕಟ್ಟೆಚ್ಚರ ವಹಿಸುವ ನಿಟ್ಟಿನಲ್ಲಿ ಹೆಚ್ಚಿನ ಒತ್ತಡ ಎದುರಿಸುತ್ತಿರುತ್ತೇವೆ. ಆದರೆ ಅದನ್ನು ಸಮರ್ಥವಾಗಿ ನಿಭಾಯಿಸುತ್ತೇವೆ ಎಂದು ಕಾನೂನು ಸುವ್ಯವಸ್ಥೆ ವಿಭಾಗದ ಎಡಿಜಿಪಿ ಅಲೋಕ್ ಕುಮಾರ್ ದಿ ನ್ಯೂ ಇಂಡಿಯನ್ ಎಕ್ಸ್ ಪ್ರೆಸ್ ಗೆ ನೀಡಿರುವ ಸಂದರ್ಶನದಲ್ಲಿ ತಿಳಿಸಿದ್ದಾರೆ. 

ವಿಧಾನಸಭೆ ಚುನಾವಣೆಗೆ ಇನ್ನು 8 ತಿಂಗಳು ಬಾಕಿ ಇದ್ದು,  ಕೋಮು ಸೌಹಾರ್ದತೆ ಕದಡುವ ಘಟನೆಗಳು ನಡೆದಿರುವ ಹಿನ್ನೆಲೆಯಲ್ಲಿ ಉಂಟಾಗಬಹುದಾದ ಪರಿಸ್ಥಿಗಳನ್ನು ನಿಭಾಯಿಸುವುದಕ್ಕೆ ಪೊಲೀಸರು ಸಜ್ಜುಗೊಂಡಿದ್ದಾರೆಯೇ?

ವಿಕೋಪಕ್ಕೆ ತಿರುಗಬಹುದಾಗಿದ್ದ ಕಾನೂನು ಸುವ್ಯವಸ್ಥೆಯ ಹಾಗೂ ಕೋಮು ಸಮಸ್ಯೆಗಳ ವಿಷಯವನ್ನು ನಿಭಾಯಿಸುವ ನಿಟ್ಟಿನಲ್ಲಿ ಪೊಲೀಸರು ವ್ಯಸ್ತರಾಗಿದ್ದಾರೆ, ಹಿಂಸಾಚಾರದ, ಹೊತ್ತಿ ಉರಿಯುವ ಪ್ರತಿಯೊಂದು ಘಟನೆಗೂ ಪ್ರತೀಕಾರವಾಗಿ ಭುಗಿಲೇಳಬಹುದಾಗಿದ್ದ 5-6 ಘಟನೆಗಳಿಗೆ ನಾವು ನಮ್ಮ ಸಮಯೋಚಿತ ಪ್ರಯತ್ನಗಳಿಂದ ಪ್ರಾರಂಭದಲ್ಲೇ ಕಡಿವಾಣ ಹಾಕಿದ್ದೇವೆ. ಅದು ಸಾರ್ವಜನಿಕರಿಗೆ ಹೆಚ್ಚಾಗಿ ತಿಳಿದಿಲ್ಲ. ನಂಬಿಕೆ ಕಡಿಮೆ ಇರುವೆಡೆ ಶಾಂತಿ ಮತ್ತು ಸೌಹಾರ್ದತೆಯನ್ನು ಸ್ಥಾಪಿಸುವುದು ಅತ್ಯಂತ ಸವಾಲಿನ ಸಂಗತಿಯಾಗಿದೆ. ಕಾನೂನು ಸುವ್ಯವಸ್ಥೆ ನಿಭಾಯಿಸುವುದು ಸರ್ಕಾರದ ಆದ್ಯ ಕರ್ತವ್ಯವಾಗಿದೆ ಹಾಗೂ ಈ ನಿಟ್ಟಿನಲ್ಲಿ ಪೊಲೀಸರಿಗೆ ಪ್ರಮುಖ ಜವಾಬ್ದಾರಿ ನೀಡಲಾಗಿದೆ. ಪ್ರಜಾಪ್ರಭುತ್ವದಲ್ಲಿ ಜನರಿಗೆ ಶಾಂತಿಯುತ ಪ್ರತಿಭಟನೆ ನಡೆಸಲು ಹಕ್ಕು ಇದೆ. ಆದರೆ ಇಂದು ಬೇರೆ ಬೇರೆ ಗ್ರಹಿಕೆಗಳಿಂದ ಕ್ರಿಯೆ ಮತ್ತು ಅದಕ್ಕೆ ಪ್ರತಿಕ್ರಿಯಾತ್ಮಕ ಘಟನೆಗಳಿಗೂ ದಾರಿ ಮಾಡಿಕೊಡುತ್ತದೆ. ಈ ಪೈಕಿ ಕೆಲವು ಹಿಂಸಾಚಾರ ಸ್ವರೂಪವನ್ನೂ ಪಡೆಯುತ್ತವೆ. ಇದು ಪೊಲೀಸರ ಕರ್ತವ್ಯಕ್ಕೆ ಸವಾಲಾಗುತ್ತದೆ.

ಕರಾವಳಿ ಕರ್ನಾಟಕ ಹಾಗೂ ಶಿವಮೊಗ್ಗದಲ್ಲಿ ಈಗ ಪರಿಸ್ಥಿತಿ ಹೇಗಿದೆ?

ಕರಾವಳಿ ಕರ್ನಾಟಕ ಹಾಗೂ ಶಿವಮೊಗ್ಗ ಈಗ ಹಾಟ್ ಸ್ಪಾಟ್ ಗಳಾಗಿ ಪರಿಣಮಿಸಿವೆ. ನಾವು ಸಮುದಾಯದ ನಾಯಕರನ್ನು ಶಾಂತಿ ಮಾತುಕತೆಗೆ ಆಹ್ವಾನಿಸುತ್ತೇವೆ, ಅವರೂ ಬರುತ್ತಾರೆ. ಆದರೆ ಒಳಗಿನ ಬೇಗುದಿ (ಗೌಪ್ಯವಾಗಿ, ಬೂದಿ ಮುಚ್ಚಿದ ಕೆಂಡದಂತಹ ಪರಿಸ್ಥಿತಿ) ಪ್ರಬಲವಾಗಿದೆ.

ವಾಸ್ತವದ ಪರಿಸ್ಥಿತಿ ಏನಿದೆ ಎಂಬುದರ ಬಗ್ಗೆ ಹಾಗೂ ಶಾಂತಿ ಕಾಪಾಡಲು ಪೊಲೀಸರು ವಹಿಸಿರುವ ಶ್ರಮದ ಬಗ್ಗೆ ಕಾನೂನು ಸುವ್ಯವಸ್ಥೆ ಹೆಚ್ಚುವರಿ ಪ್ರಧಾನ ನಿರ್ದೇಶಕನಾಗಿ ನನಗೆ ಅರಿವಿದೆ. ವಿಶೇಷವಾಗಿ ಕೋಮು ಸಮಸ್ಯೆಗಳ ಪರಿಸ್ಥಿತಿಯಲ್ಲಿ ನಾವು ನ್ಯಾಯಯುತ, ದೃಢ ಮತ್ತು ವೇಗದ ಕ್ರಮ ಕೈಗೊಳ್ಳಬೇಕಾಗುತ್ತದೆ, ಅದರಲ್ಲಿ ಯಾವುದೇ ಸುಲಭದ ಮಾರ್ಗ (Short cut) ಇರುವುದಿಲ್ಲ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com