ಭಾರತದ ಸ್ಟಾರ್ಟಪ್ ವಿಭಾಗದಲ್ಲಿ ಬೆಂಗಳೂರಿಗೆ ಮೊದಲ ಸ್ಥಾನ

ಸ್ಟಾರ್ಟಪ್ ನೀತಿಯನ್ನು ಹೊಂದಿರುವ ದೇಶದ ರಾಜ್ಯಗಳಲ್ಲಿ ಕರ್ನಾಟಕವೂ ಒಂದಾಗಿದ್ದು, ಬೆಂಗಳೂರು ಸ್ಟಾರ್ಟಪ್ ಹಬ್ ಆಗಿ ಬೆಳೆಯುವ ಮೂಲಕ ಮುಂಚೂಣಿಯಲ್ಲಿದೆ ಎಂದು ಕೈಗಾರಿಕಾ ಸಚಿವ ಮುರುಗೇಶ್ ನಿರಾಣಿ ಅವರು ತಿಳಿಸಿದ್ದಾರೆ.
ವಿಧಾನಸೌಧ
ವಿಧಾನಸೌಧ

ಬೆಂಗಳೂರು: ಸ್ಟಾರ್ಟಪ್ ನೀತಿಯನ್ನು ಹೊಂದಿರುವ ದೇಶದ ರಾಜ್ಯಗಳಲ್ಲಿ ಕರ್ನಾಟಕವೂ ಒಂದಾಗಿದ್ದು, ಬೆಂಗಳೂರು ಸ್ಟಾರ್ಟಪ್ ಹಬ್ ಆಗಿ ಬೆಳೆಯುವ ಮೂಲಕ ಮುಂಚೂಣಿಯಲ್ಲಿದೆ ಎಂದು ಕೈಗಾರಿಕಾ ಸಚಿವ ಮುರುಗೇಶ್ ನಿರಾಣಿ ಅವರು ತಿಳಿಸಿದ್ದಾರೆ.

ಅತಿಹೆಚ್ಚು ಹಣದ ಒಳಹರಿವಿನಿಂದ ಬೆಂಗಳೂರು ದೇಶದಲ್ಲಿಯೇ ಮೊದಲ ಸ್ಥಾನ ಗಳಿಸಿದೆ. ಅನುಕ್ರಮವಾಗಿ ದೆಹಲಿ, ಮುಂಬೈ ಚೆನ್ನೈ ಮತ್ತು ಪುಣೆ ಐದು ಸ್ಥಾನಗಳನ್ನು ಪಡೆದುಕೊಂಡಿದೆ.

ಸ್ಟಾರ್ಟಪ್ ನೀತಿಯನ್ನು ಹೊಂದಿರುವ ದೇಶದ ಮೊದಲ ರಾಜ್ಯಗಳಲ್ಲಿ ಕರ್ನಾಟಕವೂ ಒಂದಾಗಿದೆ ಮತ್ತು ಇದರ ಪರಿಣಾಮವಾಗಿ ನಮ್ಮ ಸ್ಟಾರ್ಟಪ್ ಪರಿಸರ ವ್ಯವಸ್ಥೆಯು ಮಹತ್ತರವಾಗಿ ಬೆಳೆದಿದೆ. ನಮ್ಮ ಉದಯೋನ್ಮುಖ ಆರಂಭಿಕ ಸಂಸ್ಕೃತಿಯನ್ನು ಮತ್ತಷ್ಟು ಬೆಂಬಲಿಸಲು ಹೂಡಿಕೆ ಸ್ನೇಹಿ ವಾತಾವರಣವನ್ನು ಒದಗಿಸಲು ನಮ್ಮ ಸರ್ಕಾರ ಬದ್ಧವಾಗಿದೆ ಎಂದು ನಿರಾಣಿ ಹೇಳಿದ್ದಾರೆ.

ಬೆಂಗಳೂರು ಶೀಘ್ರದಲ್ಲೇ ಯುನಿಕಾರ್ನ್ ನ ಪ್ರತಿಮೆಯನ್ನು ಹೊಂದಲಿದೆ! StartupUru ಬೆಂಗಳೂರಿಗೆ ಮತ್ತೊಂದು ಸೂಕ್ತ ಗೌರವ! ಎಂದು ಬ್ರಾಂಡ್ ಸ್ಟಾಂಟರ್ಜಿ ತಜ್ಞರಾದ ಹರೀಶ್ ಬಿಜೂರ್ ಹೇಳಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com