ನೇಮಕಾತಿ 2022: ಜೆಸ್ಕಾಂ ನಲ್ಲಿ 13 ಹುದ್ದೆಗಳು ಖಾಲಿ, ಆಸಕ್ತರು ಕೂಡಲೇ ಅರ್ಜಿ ಸಲ್ಲಿಸಿ
ಗುಲ್ಬರ್ಗಾ ವಿದ್ಯುಚ್ಛಕ್ತಿ ಸರಬರಾಜು ಕಂಪನಿ ನಿಯಮಿತದಲ್ಲಿ ಅಗತ್ಯವಿರುವ ಅಪ್ರೆಂಟಿಸ್ ಹುದ್ದೆಗಳ ಭರ್ತಿಗೆ ಅರ್ಹ ಹಾಗೂ ಆಸಕ್ತ ಅಭ್ಯರ್ಥಿಗಳಿಂದ ಅರ್ಜಿ ಕರೆಯಲಾಗಿದೆ.
Published: 01st December 2022 06:24 PM | Last Updated: 01st December 2022 06:24 PM | A+A A-

ಸಂಗ್ರಹ ಚಿತ್ರ
ಗುಲ್ಬರ್ಗಾ ವಿದ್ಯುಚ್ಛಕ್ತಿ ಸರಬರಾಜು ಕಂಪನಿ ನಿಯಮಿತದಲ್ಲಿ ಅಗತ್ಯವಿರುವ ಅಪ್ರೆಂಟಿಸ್ ಹುದ್ದೆಗಳ ಭರ್ತಿಗೆ ಅರ್ಹ ಹಾಗೂ ಆಸಕ್ತ ಅಭ್ಯರ್ಥಿಗಳಿಂದ ಅರ್ಜಿ ಕರೆಯಲಾಗಿದೆ.
ಹುದ್ದೆ: ಗ್ರ್ಯಾಜುಯೆಟ್ ಅಪ್ರೆಂಟಿಸ್, ಡಿಪ್ಲೋಮಾ ಅಪ್ರೆಂಟಿಸ್
ಕರ್ತವ್ಯ ಸ್ಥಳ: ಕಲಬುರಗಿ
ಖಾಲಿಯಿರುವ ಹುದ್ದೆಗಳ ಸಂಖ್ಯೆ: 135
ಹುದ್ದೆ | ಹುದ್ದೆಗಳ ಸಂಖ್ಯೆ |
ಗ್ರ್ಯಾಜುಯೆಟ್ ಅಪ್ರೆಂಟಿಸ್ | 100 |
ಡಿಪ್ಲೋಮಾ ಅಪ್ರೆಂಟಿಸ್ | 35 |
ಶೈಕ್ಷಣಿಕ ಅರ್ಹತೆ:
ಗ್ರ್ಯಾಜುಯೆಟ್ ಅಪ್ರೆಂಟಿಸ್ – ಎಲೆಕ್ಟ್ರಿಕಲ್ ಇಂಜಿನಿಯರಿಂಗ್, ಪದವಿ
ಡಿಪ್ಲೋಮಾ ಅಪ್ರೆಂಟಿಸ್ – ಎಲೆಕ್ಟ್ರಿಕಲ್ ಇಂಜಿನಿಯರಿಂಗ್, ಡಿಪ್ಲೋಮಾ ಸರ್ಟಿಫಿಕೇಟ್ ಹೊಂದಿರಬೇಕು.
ವಯೋಮಿತಿ: ಕನಿಷ್ಠ 18 ವರ್ಷ
ವೇತನ: ತರಬೇತಿ ಅವಧಿಯಲ್ಲಿ ಮಾಸಿಕ ರೂ. 9000 (ಇಂಜಿನಿಯರ್ ಪದವೀಧರರು) ಹಾಗೂ ರೂ. 8000 (ಡಿಪ್ಲೋಮಾ ಇಂಜಿನಿಯರಿಂಗ್) ವೇತನ ನೀಡಲಾಗುತ್ತದೆ.
ಅರ್ಹತಾ ಮಾನದಂಡ:
2020, 2021, 2022ರ ಇಸವಿಯಲ್ಲಿ ಇಂಜಿನಿಯರಿಂಗ್ ಹಾಗೂ ಡಿಪ್ಲೋಮಾ ಇಂಜಿನಿಯರಿಂಗ್ ಪಾಸಾಗಿರುವವರು ಅರ್ಜಿ ಸಲ್ಲಿಸಲು ಅರ್ಹರಾಗಿರುತ್ತಾರೆ.
ಆಯ್ಕೆ ವಿಧಾನ: ಅರ್ಹತೆಯ ಆಧಾರದ ಮೇಲೆ ಹುದ್ದೆಗಳಿಗೆ ಆಯ್ಕೆ ಮಾಡಲಾಗುವುದು.
ಅರ್ಜಿ ಸಲ್ಲಿಕೆಯ ವಿಧಾನ:
ಅಭ್ಯರ್ಥಿಯು ಆಫ್‌ಲೈನ್ ಮೂಲಕ ಅರ್ಜಿ ಸಲ್ಲಿಸುವ ಮೊದಲು ಇಲಾಖೆ ಹೊರಡಿಸಿರುವ ಅಧಿಸೂಚನೆಯನ್ನು ಗಮನವಿಟ್ಟು ಓದಿ ಅರ್ಜಿ ಸಲ್ಲಿಸಲು ಅಗತ್ಯವಿರುವ ದಾಖಲೆಗಳನ್ನು ಸಿದ್ಧಪಡಿಸಿಕೊಂಡು ನಂತರ ಅರ್ಜಿಯನ್ನು ಸಲ್ಲಿಸಬೇಕು.
ಅರ್ಜಿ ಸಲ್ಲಿಸುವ ವಿಳಾಸ:
ಪ್ರಧಾನ ವ್ಯವಸ್ಥಾಪಕರು,
(ಆ ಮತ್ತು ಮಾಸಂಅ), ನಿಗಮ ಕಛೇರಿ,
ಗು.ವಿ.ಸ.ಕಂ.ನಿ, (ಜೆಸ್ಕಾಂ)
ಕಲಬುರಗಿ – 585102
ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: ಡಿಸೆಂಬರ್ 08, 2022
ಹೆಚ್ಚಿನ ಮಾಹಿತಿಗಾಗಿ ಅಧಿಸೂಚನೆ ಮತ್ತು ಅರ್ಜಿ ಸಲ್ಲಿಕೆ ನಮೂನೆಗಾಗಿ ಇಲ್ಲಿ ಕ್ಲಿಕ್ ಮಾಡಿ
https://ggle.io/5P7V