2ನೇ ಪೊಕ್ಸೊ ಪ್ರಕರಣ: ಮುರುಘಾ ಶರಣರ ಜಾಮೀನು ಅರ್ಜಿ ತಿರಸ್ಕೃತ

ಎರಡನೇ ಪೋಕ್ಸೋ ಪ್ರಕರಣದಲ್ಲಿ ಚಿತ್ರದುರ್ಗ ಮುರುಘಾ ಮಠದ ಶಿವಮೂರ್ತಿ ಶರಣರು ಸಲ್ಲಿಸಿದ್ದ ಜಾಮೀನು ಅರ್ಜಿಯನ್ನು ಎರಡನೇ ಹೆಚ್ಚುವರಿ ಜಿಲ್ಲಾ ನ್ಯಾಯಾಧೀಶರು ಗುರುವಾರ ತಿರಸ್ಕರಿಸಿದೆ.
ಮುರುಘಾ ಮಠದ ಶಿವಮೂರ್ತಿ ಶರಣರು
ಮುರುಘಾ ಮಠದ ಶಿವಮೂರ್ತಿ ಶರಣರು

ಚಿಕ್ಕಬಳ್ಳಾಪುರ: ಎರಡನೇ ಪೋಕ್ಸೋ ಪ್ರಕರಣದಲ್ಲಿ ಚಿತ್ರದುರ್ಗ ಮುರುಘಾ ಮಠದ ಶಿವಮೂರ್ತಿ ಶರಣರು ಸಲ್ಲಿಸಿದ್ದ ಜಾಮೀನು ಅರ್ಜಿಯನ್ನು ಎರಡನೇ ಹೆಚ್ಚುವರಿ ಜಿಲ್ಲಾ ನ್ಯಾಯಾಧೀಶರು ಗುರುವಾರ ತಿರಸ್ಕರಿಸಿದೆ.

ಎರಡನೇ ಹೆಚ್ಚುವರಿ ಜಿಲ್ಲಾ ನ್ಯಾಯಾಧೀಶೆ ಬಿ.ಕೆ.ಕೋಮಲಾ ಅವರು ಮಠಾಧೀಶರ ಪರ ವಕೀಲರು ಸಲ್ಲಿಸಿದ್ದ ಜಾಮೀನು ಅರ್ಜಿಯನ್ನು ತಿರಸ್ಕರಿಸಿದರು.

ಪೋಕ್ಸೋ ಆರೋಪ ಎದುರಿಸುತ್ತಿರುವ ಶಿವಮೂರ್ತಿ ಶರಣರ ವಿರುದ್ಧ ಆಗಸ್ಟ್ 26 ರಂದು ಮೈಸೂರಿನ ನಜರ್‌ಬಾದ್ ಪೊಲೀಸ್ ಠಾಣೆಯಲ್ಲಿ ಮೊದಲ ಪ್ರಕರಣ ದಾಖಲಾಗಿತ್ತು. ನಂತರ ಸೆಪ್ಟೆಂಬರ್ 1 ರಂದು ಅವರನ್ನು ಬಂಧಿಸಲಾಯಿತು.ನಂತರ ಚಿತ್ರದುರ್ಗ ಗ್ರಾಮಾಂತರ ಠಾಣೆಗೆ ಪ್ರಕರಣವನ್ನು ವರ್ಗಾಯಿಸಲಾಯಿತು.

ಶರಣದ ವಿರುದ್ಧ ಇದ್ದ ಮೊದಲ ಪೋಕ್ಸೊ ಪ್ರಕರಣದಲ್ಲೂ ಜಾಮೀನು ತಿರಸ್ಕೃತಗೊಂಡಿದ್ದು, ಇದೀಗ ಎರಡನೇ ಪೋಕ್ಸೋ ಪ್ರಕರಣದಲ್ಲೂ ಜಾಮೀನು ತಿರಸ್ಕೃತಗೊಂಡಿದೆ.

ಇದೇ ವೇಳೆ, 1988ರ ಧಾರ್ಮಿಕ ಸಂಸ್ಥೆಗಳ (ದುರುಪಯೋಗ ತಡೆ) ಕಾಯಿದೆಯ ಸೆಕ್ಷನ್ 8ರ ಅಡಿಯಲ್ಲಿ ಪೊಲೀಸರು ಸಲ್ಲಿಸಿದ ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಾಲಯವು, ಡಾ.ಶಿವಮೂರ್ತಿ ಮುರುಘಾ ಶರಣರು ಧಾರ್ಮಿಕ ಚಟುವಟಿಕೆಗಳು, ಎಸ್'ಜೆಎಂ ಶಿಕ್ಷಣ ಸಂಸ್ಥೆಗಳು, ಮುರುಘಾ ಮಠದ ಆಡಳಿತಾತ್ಮಕ ವಿಷಯಗಳಲ್ಲಿ ಪಾಲ್ಗೊಳ್ಳಲು ಅವಕಾಶ ನೀಡಬಾರದು ಎಂದು ನ್ಯಾಯಾಲಯಕ್ಕೆ ಮನವಿ ಮಾಡಿದ್ದು, ಈ ಸಂಬಂಧ ವಿಚಾರಣೆ ನಡೆಸಿದ ನ್ಯಾಯಾಲಯವರು ಡಿಸೆಂಬರ್ 3ಕ್ಕೆ ಆದೇಶವನ್ನು ಕಾಯ್ದಿರಿಸಿದೆ.

ಮಠಾಧೀಶರು ಕಂಬಿ ಹಿಂದೆ ಬಿದ್ದಿರುವ ಕಾರಣ ಡಾ.ಶಿವಮೂರ್ತಿ ಮುರುಘಾ ಶರಣರು ಬಸವಪ್ರಭು ಸ್ವಾಮೀಜಿ ಹಾಗೂ ವಸ್ತ್ರಮಠಕ್ಕೆ ದಿನನಿತ್ಯದ ವಿಷಯಗಳ ಕುರಿತು ಈಗಾಗಲೇ ಅಧಿಕಾರ ಪವರ್ ಆಫ್ ಅಟಾರ್ನಿ ನೀಡಿದ್ದಾರೆ, ಆದ್ದರಿಂದ ಈ ಸಮಸ್ಯೆ ಉದ್ಭವಿಸುವುದಿಲ್ಲ ಎಂದು ದರ್ಶಿ ಉಮೇಶ್ ಹೇಳಿದರು.

ಈ ನಡುವೆ ಶ್ರೀಗಳ ಪರ ವಕೀಲ ಉಮೇಶ್ ಅವರು ಮಾತನಾಡಿ, ಡಾ.ಶಿವಮೂರ್ತಿ ಮುರುಘಾ ಶರಣರು ಈಗಾಗಲೇ ಬಂಧನದಲ್ಲಿದ್ದು, ಪವರ್ ಆಫ್ ಅಟಾರ್ನಿಯನ್ನು ಬಸವಪ್ರಭು ಸ್ವಾಮೀಜಿಗಳಿಗೆ ಹಸ್ತಾಂತರಿಸಿರುವ ಕಾರಣ, ಈ ಸಂಬಂಧ ಯಾವುದೇ ಸಮಸ್ಯೆಗಳು ಉದ್ಭವಿಸುವುದಿಲ್ಲ ಎಂದು ಹೇಳಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com