ಕೇಂದ್ರ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಬೆಂಗಳೂರಿಗೆ ಆಗಮನ

ಬೆಂಗಳೂರಿನ ಇಸ್ಕಾನ್ ದೇಗುಲದ ವತಿಯಿಂದ ಆಯೋಜಿಸಿರುವ ಗೀತಾ ಜಯಂತಿ ಮಹೋತ್ಸವ ಕಾರ್ಯಕ್ರಮದಲ್ಲಿ ಭಾಗವಹಿಸುವ ಸಲುವಾಗಿ ಕೇಂದ್ರ ರಕ್ಷಣಾ ಸಚಿವರಾದ  ರಾಜನಾಥ್ ಸಿಂಗ್ ಅವರು ಇಂದು ಹೆಚ್.ಎ.ಎಲ್ ವಿಮಾನ ನಿಲ್ದಾಣಕ್ಕೆ ಆಗಮಿಸಿದರು.  
ರಾಜನಾಥ್ ಸಿಂಗ್
ರಾಜನಾಥ್ ಸಿಂಗ್

ಬೆಂಗಳೂರು: ಬೆಂಗಳೂರಿನ ಇಸ್ಕಾನ್ ದೇಗುಲದ ವತಿಯಿಂದ ಆಯೋಜಿಸಿರುವ ಗೀತಾ ಜಯಂತಿ ಮಹೋತ್ಸವ ಕಾರ್ಯಕ್ರಮದಲ್ಲಿ ಭಾಗವಹಿಸುವ ಸಲುವಾಗಿ ಕೇಂದ್ರ ರಕ್ಷಣಾ ಸಚಿವರಾದ ರಾಜನಾಥ್ ಸಿಂಗ್ ಅವರು ಇಂದು ಹೆಚ್.ಎ.ಎಲ್ ವಿಮಾನ ನಿಲ್ದಾಣಕ್ಕೆ ಆಗಮಿಸಿದರು.  

ನಗರಾಭಿವೃದ್ಧಿ ಸಚಿವರಾದ ಬಿ ಬಸವರಾಜು (ಬೈರತಿ) ಅವರು ರಕ್ಷಣಾ ಸಚಿವರನ್ನು ಆತ್ಮೀಯವಾಗಿ ಬರ ಮಾಡಿಕೊಂಡರು.

ಈ ಸಮಯದಲ್ಲಿ ಲೆಫ್ಟಿನೆಂಟ್‌ ಜನರಲ್‌ ಬಸಂತ್ ರೆಪ್ ಸ್ವಾಲ್, ಉತ್ತರಾಧಿ ಮಠದ ಸ್ವಾಮೀಜಿ ಸತ್ಯಧ್ಯಾನಾಚಾರ್, ಹೆಚ್.ಎ.ಎಲ್ ನ ವ್ಯವಸ್ಥಾಪಕ ನಿರ್ದೇಶಕರಾದ ಅನಂತ ಕೃಷ್ಣ ಮತ್ತು ಹಿರಿಯ ಅಧಿಕಾರಿಗಳು ಉಪಸ್ಥಿತರಿದ್ದರು.

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com