ವಿಧಾನಸಭಾ ಚುನಾವಣೆ 2023: ಮತದಾರರ ಓಲೈಕೆಗೆ ಬಿಜೆಪಿ ತಂತ್ರ, ವಿದ್ಯುತ್ ದರ ಕಡಿತಗೊಳಿಸಲು ಸರ್ಕಾರ ಮುಂದು!
ರಾಜ್ಯ ವಿಧಾನಸಭಾ ಚುನಾವಣೆಗೆ ಇನ್ನು ಕೆಲವೇ ತಿಂಗಳುಗಳು ಬಾಕಿ ಉಳಿದಿದ್ದು, ಈ ನಡುವೆ ಮತದಾರರ ಓಲೈಸಲು ಬಿಜೆಪಿ ತಂತ್ರಗಳನ್ನು ರೂಪಿಸುತ್ತಿದೆ. ಇದರಂತೆ ವಿದ್ಯುತ್ ದರವನ್ನು ಹೆಚ್ಚಿಸುವ ವಿದ್ಯುತ್ ಸರಬರಾಜು ನಿಗಮಗಳ (ಎಸ್ಕಾಂ) ಬೇಡಿಕೆಯ ಹೊರತಾಗಿಯೂ ವಿದ್ಯುತ್ ದರ ಕಡಿತಗೊಳಿಸಲು ಮುಂದಾಗಿದೆ.
Published: 03rd December 2022 09:34 AM | Last Updated: 03rd December 2022 06:18 PM | A+A A-

ಸಂಗ್ರಹ ಚಿತ್ರ
ಬೆಂಗಳೂರು: ರಾಜ್ಯ ವಿಧಾನಸಭಾ ಚುನಾವಣೆಗೆ ಇನ್ನು ಕೆಲವೇ ತಿಂಗಳುಗಳು ಬಾಕಿ ಉಳಿದಿದ್ದು, ಈ ನಡುವೆ ಮತದಾರರ ಓಲೈಸಲು ಬಿಜೆಪಿ ತಂತ್ರಗಳನ್ನು ರೂಪಿಸುತ್ತಿದೆ. ಇದರಂತೆ ವಿದ್ಯುತ್ ದರವನ್ನು ಹೆಚ್ಚಿಸುವ ವಿದ್ಯುತ್ ಸರಬರಾಜು ನಿಗಮಗಳ (ಎಸ್ಕಾಂ) ಬೇಡಿಕೆಯ ಹೊರತಾಗಿಯೂ ವಿದ್ಯುತ್ ದರ ಕಡಿತಗೊಳಿಸಲು ಮುಂದಾಗಿದೆ.
ಪ್ರತಿ ಯುನಿಟ್'ಗೆ 70 ಪೈಸೆಯಿಂದ ರೂ.2.10ವರೆಗೂ ಇಳಿಕೆ ಮಾಡುವಂತೆ ಕರ್ನಾಟಕ ವಿದ್ಯುತ್ ನಿಯಂತ್ರಣ ಆಯೋಗ (ಕೆಇಆರ್‌ಸಿ)ಕ್ಕೆ ಸೂಚನೆ ನೀಡಲು ಮುಂದಾಗಿದೆ ಎಂದು ತಿಳಿದುಬಂದಿದೆ.
ಇಂಧನ ಸಚಿವ ವಿ.ಸುನೀಲ್ ಕುಮಾರ್ ಅವರು ಮಾತನಾಡಿ, ಈ ಸಂಬಂಧ ಪ್ರಸ್ತಾವನೆಯನ್ನು ಕೆಇಆರ್‌ಸಿಗೆ ಕಳುಹಿಸಲಾಗಿದೆ ಎಂದು ಹೇಳಿದ್ದಾರೆ.
ಬೇರೆ ರಾಜ್ಯಗಳಿಗೆ ಹೋಲಿಸಿದರೆ ಕರ್ನಾಟಕದಲ್ಲಿ ವಿದ್ಯುತ್ ದರ ಹೆಚ್ಚಿರುವುದರಿಂದ ಕರ್ನಾಟಕದಲ್ಲಿ ವಿದ್ಯುತ್ ದರ ಕಡಿಮೆ ಮಾಡಲಾಗುತ್ತಿದೆ. ಗ್ರಾಹಕರಿಗೆ ಶುಲ್ಕ ವಿಧಿಸುವ ವಿವಿಧ ಸ್ಲ್ಯಾಬ್‌ಗಳ ಪರಿಷ್ಕರಣೆಯನ್ನೂ ಪ್ರಸ್ತಾವನೆ ಒಳಗೊಂಡಿದೆ. ಬಿಲ್ಲಿಂಗ್ ಪ್ರಕ್ರಿಯೆಯನ್ನು ಸುಗಮಗೊಳಿಸಲು ಈಗಿರುವ ಆರರಿಂದ ಏಳು ಸ್ಲ್ಯಾಬ್‌ಗಳನ್ನು ಮೂರಕ್ಕೆ ಇಳಿಸುವ ಆಲೋಚನೆ ಇದೆ ಎಂದು ತಿಳಿಸಿದ್ದಾರೆ.
ಇದನ್ನೂ ಓದಿ: ವಿಧಾನಸಭಾ ಚುನಾವಣೆಗೆ ಭರ್ಜರಿ ತಯಾರಿ: ಅನಾರೋಗ್ಯಗಳಿಗೆ ಚಿಕಿತ್ಸೆ ಪಡೆದು, ಫಿಟ್ ಆಗುತ್ತಿರುವ ರಾಜಕೀಯ ನಾಯಕರು!
ಇಂಧನ ಇಲಾಖೆಯ ಅಧಿಕಾರಿಯೊಬ್ಬರು ಮಾತನಾಡಿ, ಈ ಪ್ರಸ್ತಾವನೆಯು ಬಳಕೆದಾರರ ಶುಲ್ಕ ಮತ್ತು ಇಂಧನ ವೆಚ್ಚದ ಹೊಂದಾಣಿಕೆ ಶುಲ್ಕಗಳ ಭಾಗವಾಗಿಲ್ಲ, ಏಪ್ರಿಲ್ ನಲ್ಲಿ ಬಿಲ್ಲಿಂಗ್ ಪ್ರಕ್ರಿಯೆ ಹೊಸದಾಗಿ ಪ್ರಾರಂಭವಾಗಲಿದ್ದು, ಮುಂದಿನ ಹಣಕಾಸು ವರ್ಷಕ್ಕೆ ಸುಂಕಡವನ್ನು ಕಡಿಮೆ ಪ್ರಸ್ತಾವನೆ ಸಲ್ಲಿಸಲಾಗಿದೆ ಎಂದು ಹೇಳಿದ್ದಾರೆ.
ಶುಲ್ಕಗಳಲ್ಲಿ ಕಡಿತದ ಬದಲಿಗೆ, ನಾವು ಅದನ್ನು ಶುಲ್ಕಗಳ ತರ್ಕಬದ್ಧಗೊಳಿಸುವಿಕೆ ಎಂದು ಕರೆಯಲು ಬಯಸುತ್ತೇವೆ. ಹಸಿರು ಶಕ್ತಿಯ ಬಳಕೆ ಹೆಚ್ಚಾದ ಕಾರಣ, ನಾವು ಸುಂಕವನ್ನು ಕಡಿಮೆ ಮಾಡಲು ಉತ್ಸುಕರಾಗಿದ್ದೇವೆ ಎಂದು ಅಧಿಕಾರಿ ತಿಳಿಸಿದ್ದಾರೆ.
ಬಳಕೆದಾರರ ಶುಲ್ಕ ಪರಿಷ್ಕರಣೆಯನ್ನೂ ಕಡಿತಗೊಳಿಸಲು ಇಲಾಖೆ ಮುಂದಾಗಿದ್ದು, ಗ್ರಾಮೀಣ ವಿದ್ಯುತ್ ಬಳಕೆದಾರರಿಗೆ ರಿಯಾಯಿತಿಗಳ ನೀಡುವಂತೆ ಶಿಫಾರಸು ಮಾಡಿದೆ ಎಂದು ತಿಳಿದುಬಂದಿದೆ.
ಗ್ರಾಮ ಪಂಚಾಯಿತಿ ವ್ಯಾಪ್ತಿಯ ಗ್ರಾಹಕರಿಗೆ ಬಳಕೆದಾರರ ಶುಲ್ಕದಲ್ಲಿ 25 ಪೈಸೆ ರಿಯಾಯಿತಿ ನೀಡಲು ಚಿಂತನೆ ನಡೆಸಿದೆ ಎನ್ನಲಾಗಿದೆ.
ಇದನ್ನೂ ಓದಿ: ಅಧಿಕಾರಕ್ಕೆ ಬಂದಿದ್ದೇ ಆದರೆ, ಶರಾವತಿ ಸಂತ್ರಸ್ತರ ಸಮಸ್ಯೆಗಳ ಪರಿಹರಿಸುತ್ತೇವೆ: ಸಿದ್ದರಾಮಯ್ಯ
ಪ್ರಸ್ತುತ ಪ್ರತಿ ಯೂನಿಟ್‌ಗೆ 4.15 ಮತ್ತು 4.05 ರೂ. ವಿಧಿಸಲಾಗುತ್ತಿರುವ 50 ಯೂನಿಟ್‌ಗಳವರೆಗಿನ ಕಡಿಮೆ ಒತ್ತಡದ ಗ್ರಾಹಕರಿಗೆ ಪ್ರತಿ ಯೂನಿಟ್‌ಗೆ 3.6 ರೂ.ಗೆ ಶುಲ್ಕವನ್ನು ಕಡಿತಗೊಳಿಸಲು ಪ್ರಸ್ತಾಪಿಸಿದೆ.
50 ಯುನಿಟ್ವರೆಗೆ ಲೈಫ್ ಲೈನ್ ಬಳಕೆಯ ಎಲ್ಟಿ 2 (ಎ1) ಹಾಗೂ ಎಲ್ಟಿ 2(ಎ2) ಗ್ರಾಹಕರಿಗೆ ಈಗ ಪ್ರತಿ ಯುನಿಟ್ಗೆ ವಿಧಿಸುತ್ತಿದ್ದ 4.15 ರೂ ಹಾಗೂ 4.05 ರೂ. ಶುಲ್ಕವನ್ನು 3.6 ರೂ.ಗೆ ಇಳಿಸಲು ಚಿಂತನೆ ನಡೆಸಲಾಗಿದೆ. 50ರಿಂದ 200 ಯುನಿಟ್ ವರೆಗಿನ ಬಳಕೆಗೆ ಈ ವರೆಗೆ ವಿಧಿಸುತ್ತಿದ್ದ ಎರಡು ಸ್ಲಾ್ಯಬ್ಗಳನ್ನು ಒಂದಕ್ಕೆ ಇಳಿಸಲು ನಿರ್ಧರಿಸಲಾಗಿದ್ದು ಸರಾಸರಿ 5.40 ರೂ. ಪ್ರತಿ ಯುನಿಟ್ ಸರಾಸರಿ ಬಳಕೆದಾರರ ಶುಲ್ಕ ವಿಧಿಸುವ ಬಗ್ಗೆ ಚರ್ಚೆ ನಡೆಸಲಾಗುತ್ತಿದೆ. ಇದರಿಂದ ಪ್ರತಿ ಯುನಿಟ್ಗೆ ಸರಾಸರಿ 2 ರೂ.ವರೆಗೂ ಇಳಿಕೆ ಮಾಡುವುದಕ್ಕೆ ಸಾಧ್ಯವಿದೆ ಎಂದು ಹೇಳಲಾಗುತ್ತಿದೆ. 200 ಯುನಿಟ್ ಹಾಗೂ ನಂತರದ ಬಳಕೆದಾರರಿಗೆ ಈಗಿರುವ 8.20 ಹಾಗೂ 7.70 ರೂ.ದರವನ್ನು ಏಕೀಕೃತಗೊಳಿಸಿ 7 ರೂ.ಗೆ ನಿಗದಿಗೊಳಿಸಲಾಗುತ್ತದೆ ಎಂದು ತಿಳಿದುಬಂದಿದೆ.