ಕಲಬುರಗಿ: ಹಳಿ ದಾಟುವಾಗ ಗೂಡ್ಸ್ ರೈಲಿಗೆ ಸಿಲುಕಿದ ತಾಯಿ-ಮಗ; ಕೂದಲೆಳೆ ಅಂತರದಲ್ಲಿ ಪ್ರಾಣಾಪಾಯದಿಂದ ಪಾರು!
ಹಳಿ ದಾಟುವಾಗ ಗೂಡ್ಸ್ ರೈಲಿಗೆ ಸಿಲುಕಿದ ತಾಯಿ ಮಗ ಕೂದಲೆಳೆ ಅಂತರದಲ್ಲಿ ಪ್ರಾಣ ಉಳಿಸಿಕೊಂಡಿರುವ ಭಯಾನಕ ಘಟನೆ ನಗರದ ರೈಲ್ವೆ ನಿಲ್ದಾಣದಲ್ಲಿ ನಡೆದಿದೆ.
Published: 08th December 2022 11:51 AM | Last Updated: 08th December 2022 11:51 AM | A+A A-

ರೈಲ್ವೆ ಹಳಿ ಪಕ್ಕ ತಾಯಿ-ಮಗ
ಕಲಬುರಗಿ: ಹಳಿ ದಾಟುವಾಗ ಗೂಡ್ಸ್ ರೈಲಿಗೆ ಸಿಲುಕಿದ ತಾಯಿ ಮಗ ಕೂದಲೆಳೆ ಅಂತರದಲ್ಲಿ ಪ್ರಾಣ ಉಳಿಸಿಕೊಂಡಿರುವ ಭಯಾನಕ ಘಟನೆ ನಗರದ ರೈಲ್ವೆ ನಿಲ್ದಾಣದಲ್ಲಿ ನಡೆದಿದೆ.
ರೈಲ್ವೆ ನಿಲ್ದಾಣದಲ್ಲಿ ಮೇಲ್ಸೇತುವೆ ಇದ್ದರೂ ಸಹ ಮೂರನೇ ಪ್ಲಾಟ್ ಫಾರಂನಿಂದ ಒಂದನೇ ಪ್ಲಾಟ್ ಫಾರಂಗೆ ತಾಯಿ ಮಗ ಹಳಿ ದಾಟಿಕೊಂಡು ಬರುವಾಗ ಗೂಡ್ಸ್ ರೈಲು ಆಗಮಿಸಿದೆ. ಮುಂದೆ ಹೋಗಿದ್ದ ತಾಯಿ ರೈಲಿಗೆ ಸಿಲುಕಿದ್ದಾಳೆಂದು ಮಗ ರಕ್ಷಣೆಗೆ ಧಾವಿಸಿ ಬಂದಿದ್ದು, ಬಳಿಕ ಇಬ್ಬರೂ ಹಳಿ ಪಕ್ಕದ ಸ್ವಲ್ಪ ಸ್ಥಳದಲ್ಲಿಯೇ ರೈಲು ದಾಟುವವರೆಗೆ ಅವಚಿ ಕುಳಿತು ಪ್ರಾಣ ಉಳಿಸಿಕೊಂಡಿದ್ದಾರೆ.
ಪ್ಲಾಟ್‍ಫಾರಂನಿಂದ ನಡೆದುಕೊಂಡು ಮಹಿಳೆ ರೈಲು ಹಳಿ ದಾಟಲು ಮುಂದಾಗಿದ್ದರು. ಈ ವೇಳೆ ಗೂಡ್ಸ್ ರೈಲು ಬರೋದನ್ನು ನೋಡಿ ತಾಯಿಯನ್ನು ರಕ್ಷಿಸಲು ಮಗ ಮುಂದಾಗಿದ್ದಾರೆ.
ಹಳಿ ಪಕ್ಕದ ಸ್ವಲ್ಪ ಜಾಗದಲ್ಲಿ ತಾಯಿ ಮತ್ತು ಮಗ ಮಲಗಿ ಜೀವ ಉಳಿಸಿಕೊಂಡಿದ್ದಾರೆ. ಈ ಮೂಲಕ ಗೂಡ್ಸ್ ರೈಲಿನಿಂದ ಆಗುತ್ತಿದ್ದ ಭಾರೀ ಅನಾಹುತದಿಂದ ಪಾರಾಗಿದ್ದಾರೆ. ಈ ಭಯಾನಕ ದೃಶ್ಯ ಮೊಬೈಲ್ ಕ್ಯಾಮೆರಾದಲ್ಲಿ ಸೆರೆಯಾಗಿದೆ. ಜೀವ ಉಳಿಯುತ್ತಿದ್ದಂತೆ ರೈಲ್ವೆ ನಿಲ್ದಾಣದಿಂದ ತಾಯಿ ಮಗ ಬೇರಡೆ ಹೋಗಿದ್ದಾರೆ.
ವಿಡಿಯೋ ವೈರಲ್ ಆಗಿದ್ದು, ಪ್ಲಾಟ್‌ಫಾರ್ಮ್ ಗೋಡೆಯ ಹತ್ತಿರ ಕುಳಿತಿದ್ದ ಬಾಲಕ ತನ್ನ ತಾಯಿಯನ್ನು ತಬ್ಬಿಕೊಳ್ಳುತ್ತಿರುವುದನ್ನು ಕಂಡು ಬಂದಿದೆ, ರೈಲು ಅವರ ಮೇಲೆ ಹಾದುಹೋಗಿರುವುದು ವಿಡಿಯೋದಲ್ಲಿ ದಾಖಲಾಗಿದೆ.