ಗಡಿ ವಿವಾದ: ಗದಗದಲ್ಲಿ ಮಹಾರಾಷ್ಟ್ರದ ಲಾರಿಗೆ ಮಸಿ ಬಳಿದು 'ಕನ್ನಡ' ಎಂದು ಬರೆದ ಪ್ರತಿಭಟನಾಕಾರರು!
ಗದಗ ಜಿಲ್ಲೆಯಲ್ಲಿ ಮಹಾರಾಷ್ಟ್ರದ ವಿರುದ್ಧ ಪ್ರತಿಭಟನೆ ನಡೆದಿದ್ದು, ಕನ್ನಡ ಪರ ಸಂಘಟನೆ ಕಾರ್ಯಕರ್ತರು ಮಹಾರಾಷ್ಟ್ರದ ವಾಹನಕ್ಕೆ ಮಸಿ ಎರಚಿ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಲಾರಿ ಮೇಲೆ ಕನ್ನಡ ಎಂದು ಬರೆದು, ಕನ್ನಡಕ್ಕೆ ಬೆಂಬಲ ಸೂಚಿಸಿದ್ದಾರೆ.
Published: 09th December 2022 07:58 AM | Last Updated: 09th December 2022 10:46 AM | A+A A-

ಟ್ರಕ್ ಮೇಲೆ ಕನ್ನಡ ಎಂದು ಬರೆದಿರುವ ಕಾರ್ಯಕರ್ತರು.
ಗದಗ: ಗದಗ ಜಿಲ್ಲೆಯಲ್ಲಿ ಮಹಾರಾಷ್ಟ್ರದ ವಿರುದ್ಧ ಪ್ರತಿಭಟನೆ ನಡೆದಿದ್ದು, ಕನ್ನಡ ಪರ ಸಂಘಟನೆ ಕಾರ್ಯಕರ್ತರು ಮಹಾರಾಷ್ಟ್ರದ ವಾಹನಕ್ಕೆ ಮಸಿ ಎರಚಿ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಲಾರಿ ಮೇಲೆ ಕನ್ನಡ ಎಂದು ಬರೆದು, ಕನ್ನಡಕ್ಕೆ ಬೆಂಬಲ ಸೂಚಿಸಿದ್ದಾರೆ.
ಗಡಿ ವಿವಾದದಲ್ಲಿ ಮಹಾರಾಷ್ಟ್ರ ಸರ್ಕಾರದ ಧೋರಣೆ ವಿರುದ್ಧ ಕರ್ನಾಟಕ ರಕ್ಷಣಾ ವೇದಿಕೆ (ಕೆಆರ್‌ವಿ) ಸದಸ್ಯರು ಪ್ರತಿಭಟನೆ ನಡೆಸಿದರು. ಅಲ್ಲದೆ ರಸ್ತೆ ತಡೆ ನಡೆಸಿದು ಆಕ್ರೋಶ ವ್ಯಕ್ತಪಡಿಸಿದರು.
ಈ ವೇಳೆ ಮಹಾರಾಷ್ಟ್ರ ನೋಂದಣಿ ಇರುವ ಟ್ರಕ್ ಅನ್ನು ಕಂಡ ಕೂಡಲೇ ಅದನ್ನು ನಿಲ್ಲಿಸಿ, ಕಪ್ಪು ಮಸಿ ಎರಚಿ ಆಕ್ರೋಶ ವ್ಯಕ್ತಪಡಿಸಿದರು.
ಕೆಲವು ಕಾರ್ಯಕರ್ತರು ಸಿಎಂ ಏಕನಾಥ್ ಶಿಂಧೆ ಸೇರಿದಂತೆ ಮಹಾರಾಷ್ಟ್ರದ ರಾಜಕಾರಣಿಗಳ ಪ್ರತಿಕೃತಿ ದಹಿಸಿದರು. ಈ ವೇಳೆ ಸ್ಥಳಕ್ಕೆ ಧಾವಿಸಿದ ಪೊಲೀಸರು ಕಾರ್ಯಕರ್ತರನ್ನು ಲಾರಿಯಿಂದ ಕೆಳಗಿಳಿಸಿದರು. ಅಷ್ಟರಲ್ಲಾಗಲೇ ಕಾರ್ಯಕರ್ತರೊಬ್ಬರು ಲಾರಿಗೆ ಕಪ್ಪು ಮಸಿ ಎರಚಿದರು. ನಂತರ ಪರಿಸ್ಥಿತಿಯನ್ನು ತಿಳಿಗೊಳಿಸಿದ ಪೊಲೀಸರು ಮಹಾರಾಷ್ಟ್ರ ವಾಹನ ಸಂಚಾರಕ್ಕೆ ಅನುವು ಮಾಡಿಕೊಟ್ಟರು.