ಸರ್ಕಾರಿ-ಅನುದಾನಿತ ಶಾಲೆಗಳಲ್ಲಿ 'ರಕ್ತಹೀನತೆ ತಪಾಸಣೆ ಕಾರ್ಯಾಗಾರ' ನಡೆಸುತ್ತಿರುವ ಬಿಬಿಎಂಪಿ!
ಮಕ್ಕಳಲ್ಲಿ ರಕ್ತಹೀನತೆಯನ್ನು ಗುರುತಿಸಲು ಮತ್ತು ಅಧ್ಯಯನ ಮಾಡಲು ಬಿಬಿಎಂಪಿ ನಗರದಾದ್ಯಂತ ಸರ್ಕಾರಿ ಮತ್ತು ಅನುದಾನಿತ ಶಾಲೆಗಳಲ್ಲಿ ರಕ್ತಹೀನತೆ ತಪಾಸಣೆ ಕಾರ್ಯಾಗಾರಗಳನ್ನು ಆರಂಭಿಸಿದೆ.
Published: 16th December 2022 09:37 AM | Last Updated: 16th December 2022 01:48 PM | A+A A-

ಸಂಗ್ರಹ ಚಿತ್ರ
ಬೆಂಗಳೂರು: ಮಕ್ಕಳಲ್ಲಿ ರಕ್ತಹೀನತೆಯನ್ನು ಗುರುತಿಸಲು ಮತ್ತು ಅಧ್ಯಯನ ಮಾಡಲು ಬಿಬಿಎಂಪಿ ನಗರದಾದ್ಯಂತ ಸರ್ಕಾರಿ ಮತ್ತು ಅನುದಾನಿತ ಶಾಲೆಗಳಲ್ಲಿ ರಕ್ತಹೀನತೆ ತಪಾಸಣೆ ಕಾರ್ಯಾಗಾರಗಳನ್ನು ಆರಂಭಿಸಿದೆ.
ಡಿಸೆಂಬರ್ ಮೊದಲ ವಾರದಿಂದ ಶಾಲೆಗಳಲ್ಲಿ ರಕ್ತಹೀನತೆ ತಪಾಸಣೆ ಕಾರ್ಯಾಗಾರಗಳನ್ನು ಬಿಬಿಎಂಪಿ ನಡೆಸುತ್ತಿದೆ ಎಂದು ತಿಳಿದುಬಂದಿದೆ.
ಸಾರ್ವಜನಿಕ ಆರೋಗ್ಯ ಕೇಂದ್ರಗಳ ವೈದ್ಯರು ಮಕ್ಕಳಲ್ಲಿ ಹಿಮೋಗ್ಲೋಬಿನ್ ಮಟ್ಟ ಮತ್ತು ರಕ್ತಹೀನತೆಯನ್ನು ಪರಿಶೀಲಿಸುತ್ತಿದ್ದಾರೆಂದು ಎಂದು ಬಿಬಿಎಂಪಿ ವಿಶೇಷ ಆಯುಕ್ತ (ಆರೋಗ್ಯ) ಡಾ ಕೆವಿ ತ್ರಿಲೋಕ್ ಚಂದ್ರ ಅವರು ತಿಳಿಸಿದ್ದಾರೆ.
ಇದನ್ನೂ ಓದಿ: ಗುತ್ತಿಗೆದಾರರ ಸಾಲ ತೀರಿಸಲು 600 ರೂ.ಕೋಟಿ ಸಾಲ ಕೋರಿ ಸರ್ಕಾರಕ್ಕೆ ಬಿಬಿಎಂಪಿ ಪ್ರಸ್ತಾವನೆ
ಈ ಸಂಶೋಧನೆಗಳೊಂದಿಗೆ ಮಕ್ಕಳಲ್ಲಿ ರಕ್ತಹೀನತೆಯ ಮೂಲ ಕಾರಣಗಳನ್ನು ಅರ್ಥಮಾಡಿಕೊಳ್ಳಲು ಮತ್ತು ಅದನ್ನು ನಿಭಾಯಿಸಲು ಅಗತ್ಯ ಕ್ರಮಗಳನ್ನು ತೆಗೆದುಕೊಳ್ಳಲು ಪಾಲಿಕೆ ಯೋಜಿಸಿದೆ.
ಸಕ್ರಾ ವರ್ಲ್ಡ್ ಹಾಸ್ಪಿಟಲ್ ವಿಭಾಗದ ಮುಖ್ಯಸ್ಥ (ಪೀಡಿಯಾಟ್ರಿಕ್ಸ್) ಡಾ ರಜತ್ ಆತ್ರೇಯ ಮಾತನಾಡಿ, “ಆಹಾರದಲ್ಲಿನ ಕಳಪೆ ಪೋಷಕಾಂಶಗಳು ರಕ್ತಹೀನತೆಗೆ ಪ್ರಮುಖ ಕಾರಣ, ವಿಶೇಷವಾಗಿ ಕಡಿಮೆ ಆದಾಯವಿರುವ ಜನರದಲ್ಲಿ ಇದು ಹೆಚ್ಚಾಗಿ ಕಂಡು ಬರುತ್ತದೆ. ಪೌಷ್ಠಿಕಾಂಶಯುಕ್ತ ಆಹಾರವನ್ನು ನೀಡದಿದ್ದರೆ ಎದೆ ಹಾಲಿನಿಂದ ಆಹಾರ ತಿನ್ನಲು ಆರಂಭಿಸಿದ ಮಗುವಿನಲ್ಲೂ ಕೂಡ ರಕ್ತಹೀನತೆ ಕಂಡು ಬರಬಹುದು. ಋತುಚಕ್ರದ ಆರಂಭದ ಕೆಲವು ವರ್ಷಗಳಲ್ಲಿ ಹೆಣ್ಣು ಮಗುವಿನಲ್ಲಿ ಅತಿಯಾದ ರಕ್ತದ ನಷ್ಟದಿಂದಾಗಿ ರಕ್ತಹೀನತೆ ಕಂಡುಬರುತ್ತದೆ ಎಂದು ವಿವರಿಸಿದ್ದಾರೆ.