ರೈಲ್ವೆಯಲ್ಲಿ ಅವ್ಯವಸ್ಥೆ: ಸೀಟು ಪಡೆಯಲು ಗಂಟೆಗಟ್ಟಲೆ ನಿಂತ ಕಬಡ್ಡಿ ತಂಡ! 

ಜಮ್‌ಶೆಡ್‌ಪುರದಲ್ಲಿ ನಡೆಯುತ್ತಿರುವ ಸಬ್‌ ಜೂನಿಯರ್‌ ರಾಷ್ಟ್ರೀಯ ಚಾಂಪಿಯನ್‌ಶಿಪ್‌ನಲ್ಲಿ ಭಾಗವಹಿಸುತ್ತಿರುವ ರಾಜ್ಯದ 16 ವರ್ಷದೊಳಗಿನ ಕಬಡ್ಡಿ ಆಟಗಾರರು ಪ್ರಯಾಣಿಸಬೇಕಾದ  ನಿಲ್ದಾಣದ ಗೊಂದಲದಿಂದ ರೈಲು ತಪ್ಪಿ ಯಶವಂತಪುರ ರೈಲು ನಿಲ್ದಾಣದಲ್ಲಿ ಬಹಳ ಹೊತ್ತು ಕಾಯಬೇಕಾಯಿತು.
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ಬೆಂಗಳೂರು: ಜಮ್‌ಶೆಡ್‌ಪುರದಲ್ಲಿ ನಡೆಯುತ್ತಿರುವ ಸಬ್‌ ಜೂನಿಯರ್‌ ರಾಷ್ಟ್ರೀಯ ಚಾಂಪಿಯನ್‌ಶಿಪ್‌ನಲ್ಲಿ ಭಾಗವಹಿಸುತ್ತಿರುವ ರಾಜ್ಯದ 16 ವರ್ಷದೊಳಗಿನ ಕಬಡ್ಡಿ ಆಟಗಾರರು ಪ್ರಯಾಣಿಸಬೇಕಾದ  ನಿಲ್ದಾಣದ ಗೊಂದಲದಿಂದ ರೈಲು ತಪ್ಪಿ ಯಶವಂತಪುರ ರೈಲು ನಿಲ್ದಾಣದಲ್ಲಿ ಬಹಳ ಹೊತ್ತು ಕಾಯಬೇಕಾಯಿತು. ಆನಂತರ ಪ್ರಯಾಣಿಕರಿಂದ ತುಂಬಿ ತುಳುಕುತ್ತಿದ್ದ ಮತ್ತೊಂದು ರೈಲಿನಲ್ಲಿ ಪ್ರಯಾಣಿಸಿದರು. 

ರೈಲಿನಲ್ಲಿ ಸೀಟು ಸಿಗದ ಕಾರಣ 12 ಹುಡುಗರು ಮತ್ತು 12 ಹುಡುಗಿಯರ ತಂಡ  ಪ್ಯಾಸೇಜ್‌ನಲ್ಲಿ ಮತ್ತು ಕೆಲವರು ಶೌಚಾಲಯದ ಬಳಿ ಕೆಲವು ಗಂಟೆಗಳ ಕಾಲ ನಿಲ್ಲಬೇಕಾಯಿತು. ಅವರು ಅಂಗಾ ಎಕ್ಸ್‌ಪ್ರೆಸ್‌ ಹತ್ತ ಬೇಕಾಗಿತ್ತು. ಕರ್ನಾಟಕ ಕಬಡ್ಡಿ ಅಸೋಸಿಯೇಷನ್ ​​ಹಾಗೂ ತಂಡದ ವ್ಯವಸ್ಥಾಪಕರ ನಡುವಿನ ಸಂಪರ್ಕ ಸಮಸ್ಯೆಯಿಂದಾಗಿ  ಸರ್ ಎಂವಿ ಟರ್ಮಿನಲ್‌ನಲ್ಲಿ ಕಾಯುವ ಬದಲು ಯಶವಂತಪುರ ನಿಲ್ದಾಣಕ್ಕೆ ಕಳುಹಿಸಲಾಯಿತು.

ರೈಲು ಯಶವಂತಪುರ ನಿಲ್ದಾಣದಿಂದ ಹೊರಡಲಿದೆ ಎಂದು  ತಂಡದ ವ್ಯವಸ್ಥಾಪಕ ಸಂಜೀವ್ ಮಸಾಲ್ಜಿ ಮತ್ತು ತರಬೇತುದಾರ ಆನಂದ್ ಬಸವರಾಜ್ ಊಹಿಸಿದ್ದರು.  “ಬುಕಿಂಗ್ ಸಮಯದಲ್ಲಿ ಅಥವಾ ನಂತರ ರೈಲು ಸರ್ ಎಂವಿ ಟರ್ಮಿನಲ್‌ನಿಂದ ಹೊರಡುತ್ತದೆ ಎಂದು ನಮಗೆ ತಿಳಿದಿರಲಿಲ್ಲ. ಅನೇಕ ವರ್ಷಗಳಿಂದ ಅಂಗಾ ಎಕ್ಸ್ ಪ್ರೆಸ್ ಯಶವಂತಪುರದಿಂದ ನಿರ್ಗಮಿಸುತ್ತಿದೆ. ಅಸೋಸಿಯೇಷನ್ ಸರಿಯಾದ ಮಾಹಿತಿ ನೀಡಲಿಲ್ಲ ಎಂದು ಮಸಾಲ್ಜಿ ಹೇಳಿದರು. 

ತದನಂತರ ಪ್ರಶಾಂತಿ ಎಕ್ಸ್‌ಪ್ರೆಸ್  ಬುಕ್ ಮಾಡಲಾಯಿತು, ಅದು ತುಂಬಿತ್ತು. ಬಹಳ ಹೊತ್ತು ಸೀಟು  ಸಿಗದೇ ಆಟಗಾರರು ಶೌಚಾಲಯದ ಬಳಿಯೇ ನಿಲ್ಲಬೇಕಾಯಿತು. ಕೆಲವು ಪ್ರಯಾಣಿಕರು ಇಳಿದ ನಂತರವೇ ಅವರಿಗೆ ಆಸನಗಳನ್ನು ಒದಗಿಸಲಾಯಿತು ಎಂದು ವ್ಯವಸ್ಥಾಪಕರು ಹೇಳಿದರು. ಈ ಘಟನೆಯಿಂದ ಆಟಗಾರರು ರೋಸಿ ಹೋದರು ಎಂದು ಅವರು ತಿಳಿಸಿದರು. 

ಈ ಘಟನೆ ಚಾಂಪಿಯನ್‌ಶಿಪ್‌ನಲ್ಲಿ ಅವರ ಪ್ರದರ್ಶನಕ್ಕೆ ಅಡ್ಡಿಯಾಗಬಹುದು ಎಂದು ವ್ಯವಸ್ಥಾಪಕರು ಹೇಳಿದರು. ಹೊರೆಯನ್ನು ಕಡಿಮೆ ಮಾಡಲು ಯಶವಂತಪುರ ನಿಲ್ದಾಣ ಮತ್ತು ಕೆಎಸ್‌ಆರ್ ನಿಲ್ದಾಣದಿಂದ ಈ ವರ್ಷ ಹಲವಾರು ರೈಲುಗಳನ್ನು ಸರ್ ಎಂವಿ ಟರ್ಮಿನಲ್‌ಗೆ ಸ್ಥಳಾಂತರಿಸಲಾಗಿದೆ ಎಂದು ನೈರುತ್ಯ ರೈಲ್ವೆಪಿಆರ್‌ಒ ಸಿ ನರೇಂದ್ರ ಹೇಳಿದರು. ಬದಲಾವಣೆಗಳ ಕುರಿತು ಹಲವಾರು ಪ್ರಕಟಣೆಗಳನ್ನು ಮಾಡಲಾಗಿದೆ ಎಂದು ಅವರು ತಿಳಿಸಿದರು. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com