ಗಮನ ಸೆಳೆಯಲು ಯತ್ನ: 'ಕೋಮು ಹಲ್ಲೆ'ಯ ಸುಳ್ಳು ಕಥೆ ಸೃಷ್ಟಿಸಿದ 13 ವರ್ಷದ ಬಾಲಕ

ಸುರತ್ಕಲ್‌ನ ಮದರಸಾದಿಂದ ಕಳೆದ ಸೋಮವಾರ ಹಿಂದಿರುಗುತ್ತಿದ್ದ ವೇಳೆ ಅನ್ಯ ಧರ್ಮದ ಇಬ್ಬರಿಂದ ತಾನು ಹಲ್ಲೆಗೊಳಗಾದೆ ಎಂದು 13 ವರ್ಷದ ಬಾಲಕ ಹೇಳಿಕೊಂಡಿದ್ದಾನೆ.
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ಮಂಗಳೂರು: ಸುರತ್ಕಲ್‌ನ ಮದರಸಾದಿಂದ ಕಳೆದ ಸೋಮವಾರ ಹಿಂದಿರುಗುತ್ತಿದ್ದ ವೇಳೆ ಅನ್ಯ ಧರ್ಮದ ಇಬ್ಬರಿಂದ ತಾನು ಹಲ್ಲೆಗೊಳಗಾದೆ ಎಂದು 13 ವರ್ಷದ ಬಾಲಕ ಹೇಳಿಕೊಂಡಿದ್ದಾನೆ.

ಆದರೆ ಪೊಲೀಸರು ಹೇಳುವ ಪ್ರಕಾರ, ತನಗೆ ಮನೆಯಲ್ಲಿ ಮತ್ತು ಶಾಲೆಯಲ್ಲಿ ಸರಿಯಾದ ಗಮನ ಸಿಗದ ಕಾರಣ ಬಾಲಕ ಹೆಣೆದ ಕಥೆಯಿದು ಎನ್ನುತ್ತಾರೆ, ಕೊನೆಗೆ ನಿನ್ನೆಗುರುವಾರ ಪೊಲೀಸರ ಮುಂದೆ ಬಾಲಕ ತಪ್ಪೊಪ್ಪಿಕೊಂಡಿದ್ದಾನೆ. ಬಾಲಕ ಪೆನ್ನಿನಿಂದ ತನ್ನ ಶರ್ಟ್ ನ್ನು ತಾನೇ ಹರಿದುಕೊಂಡಿದ್ದಾನೆ ಎಂದು ಮಂಗಳೂರು ನಗರ ಪೊಲೀಸ್ ಆಯುಕ್ತ ಎನ್ ಶಶಿಕುಮಾರ್ ತಿಳಿಸಿದ್ದಾರೆ.

ಬಾಲಕನ ಆರಂಭಿಕ ಹೇಳಿಕೆ, ಸಿಸಿಟಿವಿ ಕ್ಯಾಮೆರಾ ದೃಶ್ಯಗಳು ಮತ್ತು ಇತರ ಸಾಂದರ್ಭಿಕ ಪುರಾವೆಗಳ ಆಧಾರದ ಮೇಲೆ ಪೊಲೀಸರು ನಿನ್ನೆ ಅವರನ್ನು ಮತ್ತೆ ವಿಚಾರಣೆಗೆ ಕರೆಯಲಾಯಿತು. ಹುಡುಗ ಬಡ ಕುಟುಂಬದಿಂದ ಬಂದಿದ್ದು, ಅಧ್ಯಯನದಲ್ಲಿ ಹಿಂದುಳಿದಿದ್ದರಿಂದ ಸ್ವಾಭಿಮಾನ ಕೊರತೆಯಿಂದ ಬಳಲುತ್ತಿದ್ದಾನೆ. 

ಮಕ್ಕಳ ಕಲ್ಯಾಣ ಸಮಿತಿ ಹಾಗೂ ವೈದ್ಯರ ಮುಂದೆ ಪೊಲೀಸರು ಮತ್ತೊಮ್ಮೆ ಹೇಳಿಕೆ ದಾಖಲಿಸಿಕೊಳ್ಳಲಿದ್ದಾರೆ. ಈ ಹಿನ್ನೆಲೆಯಲ್ಲಿ ಪೊಲೀಸರು ಬಾಲಕರ ಪಾಲಕರು ಹಾಗೂ ಸಮಾಜದ ಮುಖಂಡರನ್ನು ಕರೆಸಿ ಸಮಸ್ಯೆ ಕುರಿತು ಚರ್ಚಿಸಿದರು. ಈ ವಿಷಯ ಸುರತ್ಕಲ್ ಮತ್ತು ಸುತ್ತಮುತ್ತಲಿನ ಪ್ರದೇಶಗಳಲ್ಲಿ ಉದ್ವಿಗ್ನತೆಯನ್ನು ಉಂಟುಮಾಡಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com