ಎಂಎಲ್ಎಲ್ಯಾಡ್ ಅಡಿ ಸರ್ಕಾರಿ ಶಾಲೆಗಳಿಗೆ ಸಿಗಲಿವೆ ಬಸ್! 

ಸರ್ಕಾರಿ ಶಾಲೆಯಲ್ಲಿ ಓದುತ್ತಿರುವ ವಿದ್ಯಾರ್ಥಿಗಳಿಗೆ ವರದಾನವಾಗುವಂತಹ ನಿರ್ಧಾರವನ್ನು ರಾಜ್ಯ ಸರ್ಕಾರ ಕೈಗೊಂಡಿದೆ.
ಶಾಲಾ ಬಸ್(ಸಂಗ್ರಹ ಚಿತ್ರ)
ಶಾಲಾ ಬಸ್(ಸಂಗ್ರಹ ಚಿತ್ರ)

ಬೆಂಗಳೂರು: ಸರ್ಕಾರಿ ಶಾಲೆಯಲ್ಲಿ ಓದುತ್ತಿರುವ ವಿದ್ಯಾರ್ಥಿಗಳಿಗೆ ವರದಾನವಾಗುವಂತಹ ನಿರ್ಧಾರವನ್ನು ರಾಜ್ಯ ಸರ್ಕಾರ ಕೈಗೊಂಡಿದ್ದು, ಶಾಸಕರ ಸ್ಥಳೀಯ ಪ್ರದೇಶಾಭಿವೃದ್ಧಿ ನಿಧಿಯ (ಎಂಎಲ್ಎಲ್ಯಾಡ್‌) ಅಡಿಯಲ್ಲಿ ಸರ್ಕಾರಿ ಶಾಲೆಗಳಿಗೆ ಬಸ್ ಖರೀದಿಸಲು ಸೌಲಭ್ಯವನ್ನು ಕಲ್ಪಿಸಿದೆ. 

ಶಾಸಕರ ಸ್ಥಳೀಯ ಪ್ರದೇಶಾಭಿವೃದ್ಧಿ ನಿಧಿಯನ್ನು (ಎಂಎಲ್ಎಲ್ಯಾಡ್‌) ಯಲ್ಲಿನ ಪರಿಷ್ಕರಣೆಯ ಫಲವಾಗಿ ಖರೀದಿಸಲಾಗುವ ಸರ್ಕಾರಿ ಶಾಲಾ ಬಸ್ ಗಳಲ್ಲಿ ವಿದ್ಯಾರ್ಥಿಗಳು ಉಚಿತವಾಗಿ ಮನೆ-ಶಾಲೆಗಳ ನಡುವೆ ಸಂಚರಿಸಬಹುದಾಗಿದೆ.

ಸರ್ಕಾರದ ಯೋಜನೆ ಹಾಗೂ ಸಾಂಖ್ಯಿಕ ಇಲಾಖೆಯ ಅಧಿಸೂಚನೆಯ ಪ್ರಕಾರ, ಪೆಟ್ರೋಲ್ ಖರ್ಚು ಸೇರಿದಂತೆ, ಶಾಲೆಗಳ ಬಸ್ ಗಳ ನಿರ್ವಹಣೆಯ ಎಲ್ಲಾ ಹೊಣೆಗಾರಿಕೆಯನ್ನು ಶಾಲಾ ಅಭಿವೃದ್ಧಿ ಹಾಗೂ ನಿಗಾ ಸಮಿತಿಗೆ ವಹಿಸಲಾಗಿದೆ. 

ಎಲ್ಲಾ ಸರ್ಕಾರಿ ಶಾಲೆಗಳಿಗೂ ಬಸ್ ಖರೀದಿಗೆ ಅನುದಾನ ನೀಡುವಷ್ಟು ಆರ್ಥಿಕ ಅನುಕೂಲತೆ ಇಲ್ಲದೇ ಇರುವ ಹಿನ್ನೆಲೆಯಲ್ಲಿ ನೆರೆ ಗ್ರಾಮ ಅಥವಾ ವಿಧಾನಸಭಾ ಕ್ಷೇತ್ರಗಳ ಮಕ್ಕಳಿಗೂ ಶಿಕ್ಷಣ ನೀಡುತ್ತಿರುವಂತಹ ಹೆಚ್ಚಿನ ಸರ್ಕಾರಿ ಶಾಲೆಗಳಿಗೆ ಬಸ್ ಖರೀದಿಸಲು ಸಾಧ್ಯವಾಗಲಿದೆ.  ಮೇ ತಿಂಗಳಲ್ಲಿ ನಡೆದ ಸಭೆಯಲ್ಲಿ ಸಿಎಂ ಬಸವರಾಜ ಬೊಮ್ಮಾಯಿ ಅವರು ಈ ಕ್ರಮದ ಬಗ್ಗೆ ಪ್ರಸ್ತಾಪಿಸಿದ್ದರು.
 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com