ಕಾರವಾರ: ಐಎನ್ಎಸ್ ಕದಂಬ ನೌಕಾನೆಲೆ ಪ್ರವೇಶಿಸಲು ಯತ್ನಿಸಿದ ನಕಲಿ ಅಧಿಕಾರಿ ಬಂಧನ

ನಾನೊಬ್ಬ ನೌಕಾಪಡೆಯ ಅಧಿಕಾರಿ ಎಂದು ಹೇಳಿಕೊಂಡು ಐಎನ್ಎಸ್ ಕದಂಬ ನೌಕಾನೆಲೆ ಪ್ರವೇಶಿಸಲು ಯತ್ನಿಸಿದ ನಕಲಿ ಅಧಿಕಾರಿಯನ್ನು ನೌಕಾದಳದ ಪೊಲೀಸರು ಬುಧವಾರ ಬಂಧಿಸಿದ್ದಾರೆ.
ನಕಲಿ ಅಧಿಕಾರಿ ಕಿರಣ್
ನಕಲಿ ಅಧಿಕಾರಿ ಕಿರಣ್

ಕಾರವಾರ: ನಾನೊಬ್ಬ ನೌಕಾಪಡೆಯ ಅಧಿಕಾರಿ ಎಂದು ಹೇಳಿಕೊಂಡು ಐಎನ್ಎಸ್ ಕದಂಬ ನೌಕಾನೆಲೆ ಪ್ರವೇಶಿಸಲು ಯತ್ನಿಸಿದ ನಕಲಿ ಅಧಿಕಾರಿಯನ್ನು ನೌಕಾದಳದ ಪೊಲೀಸರು ಬುಧವಾರ ಬಂಧಿಸಿದ್ದಾರೆ.

ಶಿವಮೊಗ್ಗದ ಗಾಜನೂರಿನವರಾದ ಕಿರಣ್ ಎಸ್ ಆರ್ ಎಂದು ಗುರುತಿಸಲಾದ ವ್ಯಕ್ತಿ, ತಾನು ಪ್ರೊಬೇಷನರಿ ಲೆಫ್ಟಿನೆಂಟ್ ಅಧಿಕಾರಿ ಎಂದು ಹೇಳಿಕೊಂಡು ನೌಕಾನೆಲೆಗೆ ಬಂದಿದ್ದರು. ತಾನು ಡಿಸೆಂಬರ್ 14, 2022 ರಂದು "ಮಾನವ ಸಂಪನ್ಮೂಲ ಮತ್ತು ಯೋಜನಾ ನಿರ್ದೇಶನಾಲಯದಿಂದ ನೇಮಕಗೊಂಡಿದ್ದು, ಅದರ ಪ್ರಕಾರ ನೌಕಾ ನೆಲೆಗೆ ವರದಿ ಮಾಡಿಕೊಳ್ಳುತ್ತಿರುವುದಾಗಿ ಹೇಳಿದ್ದಾರೆ.

ತಾನೇ ಕ್ರಿಯೇಟ್ ಮಾಡಿದ್ದ ನಂಬರ್ ಹೊಂದಿದ್ದ ಗುರುತಿನ ಚೀಟಿಯನ್ನು ಸಹ ಈ ವ್ಯಕ್ತಿ ನೀಡಿದ್ದು, ಮುಖ್ಯ ಗೇಟ್ ನಲ್ಲಿ ಎಲ್ಲ ದಾಖಲೆಗಳನ್ನು ಹಾಜರುಪಡಿಸಿದ್ದರು. ಇದು ಅನುಮಾನಕ್ಕೆ ಕಾರಣವಾಗಿದೆ. ಇದೀಗ ಆತನನ್ನು ಬಂಧಿಸಲಾಗಿದೆ ಎಂದು ಮೂಲಗಳು ತಿಳಿಸಿವೆ.

ಸಲ್ಲಿಸಿದ ದಾಖಲೆಗಳನ್ನು ಪರಿಶೀಲನೆ ನಡೆಸಿದಾಗ ಅವು ನಕಲಿ ದಾಖಲೆಗಳು ಎಂಬುದು ಪತ್ತೆಯಾಗಿದೆ ಎಂದು ಮೂಲಗಳು ತಿಳಿಸಿವೆ.

ಆದಾಗ್ಯೂ, ನೌಕಾಪಡೆಯ ಅಧಿಕಾರಿಗಳು ಈ ಬಗ್ಗೆ ತಮಗೆ ಯಾವುದೇ ಮಾಹಿತಿ ಇಲ್ಲ ಎಂದು ಹೇಳಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com