ಹುಬ್ಬಳ್ಳಿ ಕ್ಯಾಂಪಸ್ ಕಾರ್ಯಾರಂಭಕ್ಕೆ ಒತ್ತಾಯಿಸಿ ಇನ್ಫೋಸಿಸ್'ಗೆ ಐಟಿ ವೃತ್ತಿಪರರ ಆನ್‌ಲೈನ್‌ ಅಭಿಯಾನ!

ಐಟಿ ಕ್ಷೇತ್ರದ ದೈತ್ಯ ಸಂಸ್ಧೆ ಇನ್ಫೋಸಿಸ್ ತನ್ನ ಹುಬ್ಬಳ್ಳಿ ಕ್ಯಾಂಪಸ್ ಅನ್ನು ಪ್ರಾರಂಭಿಸುವಂತೆ ಈ ಭಾಗದ ಜನರು ಆನ್‌ಲೈನ್ ಅಭಿಯಾನ ಪ್ರಾರಂಭಿಸಿದ್ದಾರೆ.
ಇನ್ಫೋಸಿಸ್
ಇನ್ಫೋಸಿಸ್

ಹುಬ್ಬಳ್ಳಿ: ಐಟಿ ಕ್ಷೇತ್ರದ ದೈತ್ಯ ಸಂಸ್ಧೆ ಇನ್ಫೋಸಿಸ್ ತನ್ನ ಹುಬ್ಬಳ್ಳಿ ಕ್ಯಾಂಪಸ್ ಅನ್ನು ಪ್ರಾರಂಭಿಸುವಂತೆ ಈ ಭಾಗದ ಜನರು ಆನ್‌ಲೈನ್ ಅಭಿಯಾನ ಪ್ರಾರಂಭಿಸಿದ್ದಾರೆ.

ಸ್ಥಳೀಯ ಪ್ರತಿಭೆಗಳಿಗೆ ಅನುಕೂಲವಾಗುವಂತೆ ಇನ್ಫೋಸಿಸ್ ಅವಳಿ ನಗರ ಹುಬ್ಬಳ್ಳಿಯಲ್ಲಿ ತನ್ನ ಕ್ಯಾಂಪಸ್ ಅನ್ನು ಪ್ರಾರಂಭಿಸಲು ಬಯಸಿತ್ತು. ಇದಕ್ಕಾಗಿ ಕರ್ನಾಟಕ ಕೈಗಾರಿಕಾ ಪ್ರದೇಶಗಳ ಅಭಿವೃದ್ಧಿ ಮಂಡಳಿಯು ವಿಶೇಷ ಆರ್ಥಿಕ ವಲಯ (ಎಸ್ ಇಝಡ್) ವರ್ಗದಡಿ 43.05 ಎಕರೆ ಭೂಮಿಯನ್ನು ಮಂಜೂರು ಮಾಡಿತ್ತು. ಮೊದಲ ಹಂತದಲ್ಲಿ ಕಂಪನಿಯು 2018ರ ವೇಳೆಗೆ 3.64 ಲಕ್ಷ ಚದರ ಅಡಿಯಲ್ಲಿ ಕ್ಯಾಂಪಸ್ ಅನ್ನು ಅಭಿವೃದ್ಧಿಪಡಿಸಿತು. ಇನ್ನು ಇಲ್ಲಿ 1400 ಉದ್ಯೋಗಿಗಳು ಕೆಲಸ ಮಾಡಲು ಸ್ಥಳಾವಕಾಶವಿದೆ. ಇನ್ನು ನಾಲ್ಕು ವರ್ಷ ಕಳೆದರೂ ಇದು ಕಾರ್ಯಾರಂಭ ಮಾಡಿರಲಿಲ್ಲ.

ಹುಬ್ಬಳ್ಳಿ ಕ್ಯಾಂಪಸ್ ಅನ್ನು ಪ್ರಾರಂಭಿಸಲು ಎಲ್ಲಾ ಬೆಂಬಲವನ್ನು ನೀಡುವುದಾಗಿ ಸರ್ಕಾರ ಭರವಸೆ ನೀಡಿದ್ದರೂ, ಇನ್ಫೋಸಿಸ್ ಇನ್ನೂ ಅದರ ಬಗ್ಗೆ ನಿರ್ಧರಿಸಿಲ್ಲ. ಆದರೆ ಇತ್ತೀಚೆಗೆ ವೈಜಾಗ್, ಕೋಲ್ಕತ್ತಾ, ಇಂದೋರ್ ಮತ್ತು ಇತರ ನಗರಗಳಲ್ಲಿ ತನ್ನ ಕ್ಯಾಂಪಸ್‌ಗಳನ್ನು ತೆರೆಯುವುದಾಗಿ ಘೋಷಿಸಿತು. ಆದ್ದರಿಂದ ಹುಬ್ಬಳ್ಳಿ ನಗರ ಮತ್ತು ಉತ್ತರ ಕರ್ನಾಟಕ ಭಾಗದ ಜನರು www.change.org ನಲ್ಲಿ ಆನ್‌ಲೈನ್ ಅಭಿಯಾನ ಆರಂಭಿಸಿದ್ದು ಅರ್ಜಿಗೆ ಸಹಿ ಮಾಡಿದ್ದಾರೆ.

ಹುಬ್ಬಳ್ಳಿಯಲ್ಲಿ ಒಂದು ತಂಡ ಆನ್ ಲೈನ್ ಮೂಲಕ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಐಟಿ ಮತ್ತು ಬಿಟಿ ಸಚಿವ ಸಿ ಎಸ್ ಅಶ್ವಥ್ ನಾರಾಯಣ್, ಇನ್ಫೋಸಿಸ್ ನಿರ್ದೇಶಕರ ಮಂಡಳಿ ಅಧ್ಯಕ್ಷ ನಂದನ್ ನಿಲೇಕಣಿ ಮತ್ತು ಇತರರಿಗೆ ಮನವಿ ಮಾಡುತ್ತಿದ್ದು ಕಳೆದ ಕೆಲವು ದಿನಗಳಲ್ಲಿ 2,300ಕ್ಕೂ ಹೆಚ್ಚು ಮಂದಿ ಅರ್ಜಿಗೆ ಸಹಿ ಹಾಕಿದ್ದಾರೆ.

ಈ ಆನ್ ಲೈನ್ ಅಭಿಯಾನದಲ್ಲಿ ವಿವಿಧ ಸ್ಥಳಗಳಿಂದ ಜನರು ಚರ್ಚೆಗೆ ಸೇರುತ್ತಿದ್ದಾರೆ. ಗುರುವಾರ ಸಂಜೆ ನಡೆದ ವರ್ಚುವಲ್ ಸಭೆಯಲ್ಲಿ ಇನ್ಫೋಸಿಸ್, ಒರಾಕಲ್ ಮತ್ತು ಇತರ ಸಂಸ್ಥೆಗಳ ಐಟಿ ವೃತ್ತಿಪರರು ಮತ್ತು ಐಟಿಯೇತರ ವಲಯಗಳ ವೃತ್ತಿಪರರು ಕೂಡ ಸೇರಿಕೊಂಡಿದ್ದರು. ಇನ್ಫೋಸಿಸ್ ತನ್ನ ಕ್ಯಾಂಪಸ್ ಪ್ರಾರಂಭಿಸಲು ಬೇರೆ ಸ್ಥಳಗಳಲ್ಲಿ ಹೂಡಿಕೆ ಮಾಡುವ ಬದಲು ಹುಬ್ಬಳ್ಳಿಯಲ್ಲಿ ಈಗಾಗಲೇ ಹೂಡಿಕೆ ಮಾಡಿರುವ ಕ್ಯಾಂಪಸ್ ಅನ್ನು ಬಳಸಿಕೊಳ್ಳಬೇಕು ಎಂಬ ಅಭಿಪ್ರಾಯ ವ್ಯಕ್ತವಾಗುತ್ತಿದೆ. ನಗರಕ್ಕೆ ವಿಮಾನ, ರೈಲು ಮತ್ತು ರಸ್ತೆಯ ಮೂಲಕ ಉತ್ತಮ ಸಂಪರ್ಕವನ್ನು ಹೊಂದಿದೆ. ಉತ್ತರ ಕರ್ನಾಟಕ ಭಾಗದ ಬಹುತೇಕ ಪ್ರತಿಭೆಗಳು ಹುಬ್ಬಳ್ಳಿಗೆ ತೆರಳಲು ಸಿದ್ಧರಾಗಿದ್ದಾರೆ. ಏಕೆಂದರೆ ಇದು ಸ್ಥಳೀಯರಿಗೆ ಹತ್ತಿರವಾಗುತ್ತದೆ. 

ಇನ್ನು ಮನರಂಜನಾ ಚಟುವಟಿಕೆಗಳಿಗಾಗಿ, ಹುಬ್ಬಳ್ಳಿಯು ಅನೇಕ ಪ್ರವಾಸಿ ಸ್ಥಳಗಳಾದ ಹಂಪಿ, ಬಡವಿ ಗುಹೆಗಳು, ಪಟ್ಟದಕಲ್ಲು, ಕೂಡಲಸಂಗಮ, ದಾಂಡೇಲಿ, ಅನೇಕ ಜಲಪಾತಗಳಿವೆ. ಕೇವಲ 150 ಕಿಮೀ ದೂರದಲ್ಲಿರುವ ಗೋವವಿದೆ. 'ಇನ್ಫೋಸಿಸ್ ತನ್ನ ಸಿಬ್ಬಂದಿಯನ್ನು ಬೆಂಗಳೂರಿನಿಂದ ಸ್ಥಳಾಂತರಿಸಲು ಬಯಸದಿದ್ದರೆ, ಅದು ಕೆಲವು ವ್ಯವಸ್ಥಾಪಕರನ್ನು ಸ್ಥಳಾಂತರಿಸಬಹುದು. ಅವರು ಹುಬ್ಬಳ್ಳಿ ಕ್ಯಾಂಪಸ್ ಪ್ರಾರಂಭಿಸಲು ಹೊಸ ಸಿಬ್ಬಂದಿಯನ್ನು ನೇಮಿಸಿಕೊಳ್ಳಬಹುದು ಎಂದು ಅವರು ಸಲಹೆ ನೀಡಿದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com