ಕೆರೂರು ಹಿಂಸಾಚಾರ ಮತ್ತು ಹಿಂದೂ ಜಾಗರಣ ವೇದಿಕೆ ಕಾರ್ಯಕರ್ತನ ಮೇಲೆ ಹಲ್ಲೆ ಖಂಡಿಸಿ ಇಂದು ಬಾಗಲಕೋಟೆ ಬಂದ್

ಜಿಲ್ಲೆಯ ಬಾದಾಮಿ ತಾಲ್ಲೂಕಿನ ಕೆರೂರು ಪಟ್ಟಣದಲ್ಲಿ ಹಿಂದು-ಮುಸ್ಲಿಂ ಘರ್ಷಣೆ,ಹಿಂಸಾಚಾರ ಹಾಗೂ ಹಿಂದೂ ಜಾಗರಣ ವೇದಿಕೆಯ ಸದಸ್ಯನ ಮೇಲೆ ದಾಳಿಯ ಹಿನ್ನೆಲೆಯಲ್ಲಿ ಹಲವು ಹಿಂದೂ ಸಂಘಟನೆಗಳು ಇಂದು ಸೋಮವಾರ ಬಾಗಲಕೋಟೆಗೆ ಬಂದ್ ಗೆ ಕರೆ ನೀಡಿವೆ.
ಮಸೀದಿಯ ಸುತ್ತಮುತ್ತ ಪೊಲೀಸರ ಬಿಗಿ ಬಂದೋಬಸ್ತ್
ಮಸೀದಿಯ ಸುತ್ತಮುತ್ತ ಪೊಲೀಸರ ಬಿಗಿ ಬಂದೋಬಸ್ತ್

ಬಾಗಲಕೋಟೆ: ಜಿಲ್ಲೆಯ ಬಾದಾಮಿ ತಾಲ್ಲೂಕಿನ ಕೆರೂರು ಪಟ್ಟಣದಲ್ಲಿ ಹಿಂದು-ಮುಸ್ಲಿಂ ಘರ್ಷಣೆ,ಹಿಂಸಾಚಾರ ಹಾಗೂ ಹಿಂದೂ ಜಾಗರಣ ವೇದಿಕೆಯ ಸದಸ್ಯನ ಮೇಲೆ ದಾಳಿಯ ಹಿನ್ನೆಲೆಯಲ್ಲಿ ಹಲವು ಹಿಂದೂ ಸಂಘಟನೆಗಳು ಇಂದು ಸೋಮವಾರ ಬಾಗಲಕೋಟೆಗೆ ಬಂದ್ ಗೆ ಕರೆ ನೀಡಿವೆ.

ಈ ಹಿನ್ನೆಲೆಯಲ್ಲಿ ಇಂದು ಬಾಗಲಕೋಟೆಯಾದ್ಯಂತ ರಸ್ತೆಗಳು ಬೆಳಗ್ಗೆಯಿಂದಲೇ ಜನಸಂಚಾರ, ವಾಹನ ಸಂಚಾರ, ವ್ಯಾಪಾರ, ವಹಿವಾಟುಗಳಿಲ್ಲದೆ ನಿರ್ಜನವಾಗಿವೆ. ನೀರವ ಮೌನ ಕಾಡುತ್ತಿದೆ. 

ಹಿಂದೂ ಕಾರ್ಯಕರ್ತನ ಮೇಲಿನ ಹಲ್ಲೆಯನ್ನು ಜಾಗರಣ ವೇದಿಕೆ ತೀವ್ರವಾಗಿ ಖಂಡಿಸಿದ್ದು, ತಮ್ಮ ಸಹ ಕಾರ್ಯಕರ್ತನ ಮೇಲಿನ ಹಲ್ಲೆಯಿಂದ ಉದ್ರಿಕ್ತರಾಗಿರುವ ಹಿಂದೂ ಜಾಗರಣ ವೇದಿಕೆಯ ಕಾರ್ಯಕರ್ತರು ಮೆರವಣಿಗೆ ನಡೆಸಿದ್ದಾರೆ. ನಗರದ ಎಲ್ಲಾ ಮಸೀದಿಗಳ ಸುತ್ತಮುತ್ತ ಪೊಲೀಸರು ಬಿಗಿ ಭದ್ರತೆ ಕೈಗೊಂಡಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com