44 ಅನರ್ಹ ಶಿಕ್ಷಕರನ್ನು ವಜಾ ಮಾಡಿದ ಬಿಬಿಎಂಪಿ!

ಪಾಲಿಕೆ ನಡೆಸುತ್ತಿರುವ ಸಂಸ್ಥೆಗಳಲ್ಲಿ ವಿದ್ಯಾರ್ಥಿಗಳಿಗೆ ಕಲಿಸಲು ಸಾಕಷ್ಟು ಅರ್ಹತೆ ಹೊಂದಿಲ್ಲದ ಕಾರಣಕ್ಕಾಗಿ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) 44 ಶಿಕ್ಷಕರನ್ನು ವಜಾಗೊಳಿಸಿದೆ.
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ಬೆಂಗಳೂರು: ಪಾಲಿಕೆ ನಡೆಸುತ್ತಿರುವ ಸಂಸ್ಥೆಗಳಲ್ಲಿ ವಿದ್ಯಾರ್ಥಿಗಳಿಗೆ ಕಲಿಸಲು ಸಾಕಷ್ಟು ಅರ್ಹತೆ ಹೊಂದಿಲ್ಲದ ಕಾರಣಕ್ಕಾಗಿ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) 44 ಶಿಕ್ಷಕರನ್ನು ವಜಾಗೊಳಿಸಿದೆ.

B.Ed, NET, SLET, UGC ಅಥವಾ M.Phil ಪೂರ್ಣಗೊಳಿಸದ  ಹಾಗೂ ಉತ್ತೀರ್ಣರಾಗದಸ ನೇಮಕಾತಿ ಪ್ರಕ್ರಿಯೆಯಲ್ಲಿ ವೃತ್ತಿಪರ ಮಾನದಂಡಗಳನ್ನು ಅನುಸರಿಸಲು ವಿಫಲವಾದ ಶಿಕ್ಷಕರನ್ನು ವಜಾಗೊಳಿಸಲಾಗಿದೆ ಎಂದು ಬಿಬಿಎಂಪಿ ವಿಶೇಷ ಆಯುಕ್ತ (ಕಲ್ಯಾಣ) ರಾಮ್ ಪ್ರಸಾತ್ ಮನೋಹರ್ ದಿ ನ್ಯೂ ಇಂಡಿಯನ್ ಎಕ್ಸ್ ಪ್ರೆಸ್ ಗೆ ತಿಳಿಸಿದ್ದಾರೆ.

ಸೂಕ್ತ ವಿದ್ಯಾರ್ಹತೆಯುಳ್ಳವರನ್ನು ಮಾತ್ರ ಶಿಕ್ಷಕರ ಹುದ್ದೆಗೆ ಪರಿಗಣಿಸಬೇಕೆನ್ನುವ ಆದೇಶ ಸರ್ಕಾರದಿಂದ ಆಗಿರುವಂತದ್ದು ಬಿಬಿಎಂಪಿಗೂ ಅನ್ವಯಿಸಲಿದೆ. ಹಾಗಾಗಿ ಶಿಕ್ಷಣದ ಗುಣಮಟ್ಟ ಮತ್ತು ಮಕ್ಕಳ ಶೈಕ್ಷಣಿಕ ಹಿತದೃಷ್ಟಿಯಿಂದ ಆದೇಶ ಪಾಲನೆ ಮಾಡಬೇಕಿರುವುದರಿಂದ ಸೂಕ್ತ ಡಿಗ್ರಿ ಇಲ್ಲದ ಶಿಕ್ಷಕರನ್ನು ತೆಗೆಯಲಾಗಿದೆ. ಬಿಬಿಎಂಪಿಯ ಶಾಲಾ ಕಾಲೇಜುಗಳಲ್ಲಿರುವ  ಸಾಕಷ್ಟು ಶಿಕ್ಷಕರು ಅಗತ್ಯವಿರುವ ಡಿಗ್ರಿ ಪಡೆದಿಲ್ಲ.

ಬಿಬಿಎಂಪಿಗೆ ಗುತ್ತಿಗೆ ಆಧಾರದ ಮೇಲೆ ಶಿಕ್ಷಕರನ್ನು ನಿಯೋಜಿಸುವ ಏಜೆನ್ಸಿಯಾದ ಕ್ರಿಸ್ಟಲ್ ಇನ್ಫೋಸಿಸ್ಟಮ್ ಪ್ರೈವೇಟ್ ಲಿಮಿಟೆಡ್‌ಗೆ ಮುಖ್ಯ ಆಯುಕ್ತರಿಂದ  21/07/2022 ರೊಳಗೆ ವಿವಿಧ ಪಾಲಿಕೆ ಸಂಸ್ಥೆಗಳಲ್ಲಿ ಬೋಧಿಸುತ್ತಿರುವ 44 ಶಿಕ್ಷಕರನ್ನು ಬದಲಾಯಿಸುವಂತೆ ಬಿಬಿಎಂಪಿ ನೋಟಿಸ್ ನೀಡಿದೆ.

ಇದಕ್ಕೆ ಶಿಕ್ಷಕರನ್ನು ಹೊರಗುತ್ತಿಗೆ ಮೇಲೆ ನಿಯೋಜನೆ ಮಾಡಿಕೊಂಡು ಪೂರೈಸಿದ ಕ್ರಿಸ್ಟಲ್ ಇನ್ಫೋಸಿಸ್ಟಮ್ ಸಂಸ್ಥೆಯೇ ಹೊಣೆ ಎನ್ನುವುದನ್ನು ಸ್ಪಷ್ಟಪಡಿಸಿಕೊಂಡ ಹಿನ್ನಲೆಯಲ್ಲಿ ಮುಖ್ಯ ಆಯುಕ್ತರು ಕ್ರಿಸ್ಟಲ್ ಏಜೆನ್ಸಿಗೆ ನೊಟೀಸ್ ಹೊರಡಿಸಿದ್ದಾರೆ. ಸೂಕ್ತ ಡಿಗ್ರಿಯುಳ್ಳವರನ್ನು ತಕ್ಷಣಕ್ಕೆ ಪೂರೈಸಬೇಕು. ಇಲ್ಲದಿದ್ದಲ್ಲಿ ನಿಮ್ಮ ವಿರುದ್ಧವೇ ಕ್ರಮ ಕೈಗೊಳ್ಳಬೇಕಾಗುತ್ತದೆ ಎಂದು ಎಚ್ಚರಿಸಿದ್ದಾರೆ.

ವಿದ್ಯಾರ್ಥಿಗಳ ಜೀವನದೊಂದಿಗೆ ಚೆಲ್ಲಾಟವಾಡುತ್ತಿರುವ ಬಿಬಿಎಂಪಿ ಶಿಕ್ಷಣ ಇಲಾಖೆ ವಿರುದ್ಧ ಇದೀಗ ಪ್ರಶ್ನೆಗಳು ಎದ್ದಿವೆ. ಶಿಕ್ಷಕರ ನೇಮಕಾತಿಯಲ್ಲಿ ಶಿಕ್ಷಣ ಹಕ್ಕು ಕಾಯಿದೆಯಡಿ 'ಟರ್ಮ್ ಆಫ್ ರೆಫರೆನ್ಸ್' ಅನ್ನು ಪಾಲಿಕೆ ಉಲ್ಲಂಘಿಸಿದೆ ಎಂದು ಆರೋಪಿಸಿದ ಶಿಕ್ಷಣ ತಜ್ಞ ನಿರಂಜನ್ ಆರಾಧ್ಯ, ಬಿಬಿಎಂಪಿ ಸಂಸ್ಥೆಗಳಲ್ಲಿ ಓದುತ್ತಿರುವ ಅನೇಕ ಮಕ್ಕಳ ಮೇಲೆ ಪರಿಣಾಮ ಬೀರುವುದರಿಂದ ನೇಮಕಾತಿಗೆ ಅನುಮೋದನೆ ನೀಡಿದ ಸಂಬಂಧಪಟ್ಟ ಅಧಿಕಾರಿಗಳೇ ಹೊಣೆಯಾಗಲಿದ್ದಾರೆ ಎಂದು ಹೇಳಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com