
ಒತ್ತುವರಿಯಾಗಿದ್ದ ಭೂಮಿ ವಶಪಡಿಸಿಕೊಂಡ ಪಾಲಿಕೆ
ಬೆಂಗಳೂರು: ಬಿಬಿಎಂಪಿ ಅಧಿಕಾರಿಗಳು ಶುಕ್ರವಾರ ಅತಿಕ್ರಮಣ ತೆರವು ಕಾರ್ಯಾಚರಣೆ ನಡೆಸಿ 330 ಕೋಟಿ ಮೌಲ್ಯದ ಎರಡು ಪ್ರಮುಖ ಆಸ್ತಿಯನ್ನು ವಶಪಡಿಸಿಕೊಂಡಿದ್ದಾರೆ.
ಬಿಬಿಎಂಪಿ ಮುಖ್ಯ ಆಯುಕ್ತರ ಮತ್ತು ವಲಯ ಆಯುಕ್ತರ ಆದೇಶದ ಮೇರೆಗೆ ಕಾರ್ಯಾಚರಣೆ ನಡೆಸಿದ ಅಧಿಕಾರಿಗಳು ಈ ಕ್ರಮ ತೆಗೆದುಕೊಂಡಿದ್ದಾರೆ. ಚಾಮರಾಜಪೇಟೆಯಲ್ಲಿ ಪೀರ್ ಬೌಂಡರಿ ಎಂದು ಗುರುತಿಸಲಾದ 300 ಕೋಟಿ ರೂ. ಮೌಲ್ಯದ 3.22 ಎಕರೆ ಭೂಮಿ ವಶಪಡಿಸಿಕೊಳ್ಳಲಾಗಿದೆ ಎಂದು ಪಶ್ಚಿಮ ವಲಯದ ಜಂಟಿ ಆಯುಕ್ತ ಎಸ್.ಎಂ.ಶ್ರೀನಿವಾಸ ತಿಳಿಸಿದ್ದಾರೆ.
"2013 ರಲ್ಲಿ ಹೈಕೋರ್ಟ್ ಪಾಲಿಕೆ ಪರವಾಗಿ ತೀರ್ಪು ನೀಡಿತು. ಮಾಲೀಕತ್ವವನ್ನು ಸಾಬೀತುಪಡಿಸಲು ಮತ್ತು ದಾಖಲೆಗಳನ್ನು ಒದಗಿಸಲು ಸಮಯ ನೀಡಲಾಯಿತು. ಅವರು ವಿಫಲವಾದ ಕಾರಣ ಪಾಲಿಕೆ ಆಸ್ತಿಯನ್ನು ಸ್ವಾಧೀನಪಡಿಸಿಕೊಂಡು ಬೇಲಿ ಹಾಕಲಾಗಿದೆ ಎಂದು ಹೇಳಿದರು.
ಇದನ್ನೂ ಓದಿ: ಚುನಾಯಿತ ಪ್ರತಿನಿಧಿಗಳಿಲ್ಲದ ಬಿಬಿಎಂಪಿಯಲ್ಲಿ, ಸಚಿವರು, ಶಾಸಕರು ಮತ್ತು ಸಂಸದರೇ 'ಸೂಪರ್' ಕೌನ್ಸಿಲರ್ಸ್!
ಬೆಂಗಳೂರು ದಕ್ಷಿಣದ ಗಾಂಧಿ ಬಜಾರ್‌ನಲ್ಲಿ ನಿರ್ಮಿಸಲಾದ ಕಟ್ಟಡ ಸೇರಿದಂತೆ 30 ಕೋಟಿ ರು. ಮೌಲ್ಯದ 9,100 ಚದರ ಅಡಿ ಭೂಮಿಯನ್ನು ಪಾಲಿಕೆ ವಶಪಡಿಸಿಕೊಂಡಿದೆ. ಎಕ್ಸಿಕ್ಯೂಟಿವ್ ಇಂಜಿನಿಯರ್ ಯರಪ್ಪ ರೆಡ್ಡಿ ಮಾತನಾಡಿ, ಕೆಲ ವರ್ಷಗಳ ಹಿಂದೆ ಹೈಕೋರ್ಟ್ ಮತ್ತು ಸುಪ್ರೀಂ ಕೋರ್ಟ್ ಪಾಲಿಕೆ ಪರವಾಗಿ ತೀರ್ಪು ನೀಡಿತ್ತು ಎಂದು ತಿಳಿಸಿದ್ದಾರೆ.
ಶುಕ್ರವಾರ ಅಕ್ರಮ ಶೆಡ್‌ಗಳು ಮತ್ತು ಸಂಕೀರ್ಣವನ್ನು ನೆಲಸಮಗೊಳಿಸಿದ ಪಾಲಿಕೆ ಆಸ್ತಿಯನ್ನು ಮರಳಿ ಪಡೆದಿದೆ. ಬಿಬಿಎಂಪಿ ಮಾರುಕಟ್ಟೆಗೆ ಸಮೀಪದಲ್ಲಿ ಮಲ್ಟಿ-ಲೆವೆಲ್ ಕಾರ್ ಪಾರ್ಕಿಂಗ್‌ನೊಂದಿಗೆ ವ್ಯಾಪಾರಿಗಳಿಗ ಸ್ಥಳವನ್ನು ನೀಡಲಾಗುತ್ತದೆ, ವಶಪಡಿಸಿಕೊಂಡ ಆಸ್ತಿಯಲ್ಲಿ ವಸತಿ ಕಲ್ಪಿಸಲಾಗುತ್ತದೆ ಎಂದು ತಿಳಿಸಿದ್ದಾರೆ.