ಚುನಾಯಿತ ಪ್ರತಿನಿಧಿಗಳಿಲ್ಲದ ಬಿಬಿಎಂಪಿಯಲ್ಲಿ, ಸಚಿವರು, ಶಾಸಕರು ಮತ್ತು ಸಂಸದರೇ 'ಸೂಪರ್' ಕೌನ್ಸಿಲರ್ಸ್!
ಸಿಲಿಕಾನ್ ಸಿಟಿಯಲ್ಲಿ ಬೆಂಗಳೂರು ಮಳೆರಾಯನ ಆರ್ಭಟಕ್ಕೆ ತತ್ತರಿಸಿದೆ. ಹೀಗಿರುವಾಗ ನಾಗರಿಕರು ಕೇವಲ ಕಾಲ್ ಸೆಂಟರ್ ಮೂಲಕ ಬಿಬಿಎಂಪಿಯನ್ನು ಸಂಪರ್ಕಿಸಲು ಸಾಧ್ಯ. ಕಳೆದ ಮೂರು ವರ್ಷಗಳಿಂದ ಚುನಾಯಿತ ಪ್ರತಿನಿಧಿಗಳಿಲ್ಲದೇ ಬಿಬಿಎಂಪಿ ಕೌನ್ಸಿಲ್ ಸಮಸ್ಯೆ ಎದುರಿಸುತ್ತಿದೆ.
Published: 22nd July 2022 01:32 PM | Last Updated: 22nd July 2022 01:52 PM | A+A A-

ಬಿಬಿಎಂಪಿ ಕಚೇರಿ
ಬೆಂಗಳೂರು: ಸಿಲಿಕಾನ್ ಸಿಟಿಯಲ್ಲಿ ಬೆಂಗಳೂರು ಮಳೆರಾಯನ ಆರ್ಭಟಕ್ಕೆ ತತ್ತರಿಸಿದೆ. ಹೀಗಿರುವಾಗ ನಾಗರಿಕರು ಕೇವಲ ಕಾಲ್ ಸೆಂಟರ್ ಮೂಲಕ ಬಿಬಿಎಂಪಿಯನ್ನು ಸಂಪರ್ಕಿಸಲು ಸಾಧ್ಯ. ಕಳೆದ ಮೂರು ವರ್ಷಗಳಿಂದ ಚುನಾಯಿತ ಪ್ರತಿನಿಧಿಗಳಿಲ್ಲದೇ ಬಿಬಿಎಂಪಿ ಕೌನ್ಸಿಲ್ ಸಮಸ್ಯೆ ಎದುರಿಸುತ್ತಿದೆ.
ಬಿಬಿಎಂಪಿ ಚುನಾವಣೆಗೆ ಸಂಬಂಧಿಸಿದಂತೆ ಸುಪ್ರೀಂ ಕೋರ್ಟ್‌ನಲ್ಲಿ ಶುಕ್ರವಾರ (ಜುಲೈ 22ರಂದು) ವಿಚಾರಣೆ ನಡೆಯಲಿದ್ದು, ಈ ವೇಳೆ ಪ್ರಮಾಣಪತ್ರ ಸಲ್ಲಿಸಲು ಕರ್ನಾಟಕ ಸರ್ಕಾರ ಸಿದ್ಧತೆ ಮಾಡಿಕೊಂಡಿದೆ.
‘ಸ್ಥಳೀಯ ಸಂಸ್ಥೆಗಳಲ್ಲಿ ಹಿಂದುಳಿದ ವರ್ಗಗಳಿಗೆ ರಾಜಕೀಯ ಪ್ರಾತಿನಿಧ್ಯ ಕಲ್ಪಿಸುವ ಸಂಬಂಧ ರಚಿಸಿರುವ ನ್ಯಾಯಮೂರ್ತಿ ಕೆ. ಭಕ್ತವತ್ಸಲ ನೇತೃತ್ವದ ಸಮಿತಿ ಗುರುವಾರವಷ್ಟೇ ವರದಿ ಸಲ್ಲಿಸಿದೆ. ಈ ವರದಿಯನ್ನು ರಾಜ್ಯ ಸರ್ಕಾರ ಪರಿಶೀಲಿಸಬೇಕಿದೆ.
ಬಿಬಿಎಂಪಿ ಚುನಾವಣೆ ನಡೆಸಲು ರಾಜ್ಯಸರ್ಕಾರಕ್ಕೆ ರಾಜಕೀಯ ಇಚ್ಚಾಶಕ್ತಿಯಿಲ್ಲ, ಬಿಬಿಎಂಪಿ ಚುನಾವಣೆ ನಡೆಸದಿರುವುದು ಇದೇ ಮೊದಲಲ್ಲ, 2007 ರಿಂದ 2010 ರವೆರೆಗೂ ಇದೇ ಪರಿಸ್ಥಿತಿ ಇತ್ತು, ಚುನಾಯಿತ ಸಂಸ್ಥೆಯು ನಗರ ಸ್ಥಳೀಯ ಸಂಸ್ಥೆಯಲ್ಲಿ ಪ್ರಜಾಪ್ರಭುತ್ವದಲ್ಲಿ ನಮ್ಮ ನಂಬಿಕೆಯನ್ನು ಪ್ರತಿನಿಧಿಸುತ್ತದೆ ಎಂದು ಬಿಬಿಎಂಪಿ ಪುನರ್ ವಿಂಗಡನಾ ಸಮಿತಿಯ ಭಾಗವಾಗಿದ್ದ ವಿ ರವಿಚಂದರ್ ಹೇಳಿದ್ದಾರೆ.
ಎರಡು ಅಥವಾ ಮೂರು ವರ್ಷಗಳ ಕಾಲ ಶಾಸಕರು ಅಥವಾ ಸಂಸದರು ಇಲ್ಲದ ರಾಜ್ಯ ಅಥವಾ ನಗರವನ್ನು ನಾವು ಕಲ್ಪಿಸಿಕೊಳ್ಳಬಹುದೇ? ಕೌನ್ಸಿಲರ್‌ಗಳು ನಾಗರಿಕರನ್ನು ಪ್ರತಿನಿಧಿಸುತ್ತಾರೆ. ಕೌನ್ಸಿಲ್ ನಲ್ಲಿ ನಮ್ಮ ಧ್ವನಿ ಕೇಳುವುದಿಲ್ಲ, ಆದರೆ ಅನುಮೋದನೆ ಪಡೆಯುತ್ತದೆ. ಚರ್ಚೆಯಾಗಬೇಕಾದ ಹಲವು ವಿಚಾರಗಳಿವೆ. ಸರ್ಕಾರವು ಹಿಡಿತವನ್ನು ಹೊಂದಲು ಬಯಸುತ್ತದೆ ಮತ್ತು ಮುಖ್ಯಮಂತ್ರಿ (ಅಥವಾ ಮಂತ್ರಿಗಳು) ಸೂಪರ್-ಮೇಯರ್ ಆಗಲು ಬಯಸುತ್ತಿದ್ದಾರೆ ಎಂದು ಶ್ರೀನಿವಾಸ್ ಅಲವಿಲ್ಲಿ ಹೇಳಿದ್ದಾರೆ.
ಇದನ್ನೂ ಓದಿ: ಮುಂದಿನ ತಿಂಗಳಿನಿಂದ ಬೆಂಗಳೂರಿನ 243 ವಾರ್ಡ್‍ಗಳಲ್ಲಿ ‘ನಮ್ಮ ಕ್ಲೀನಿಕ್’ ಸೇವೆ ಪ್ರಾರಂಭ: ಸಿಎಂ ಬಸವರಾಜ ಬೊಮ್ಮಾಯಿ
ಶಾಸಕರು ಮತ್ತು ಸಂಸದರ ಪಾತ್ರ ಮತ್ತು ಜವಾಬ್ದಾರಿಗಳು ಕೌನ್ಸಿಲರ್‌ಗಳಿಗಿಂತ ಭಿನ್ನವಾಗಿವೆ, ಆದರೆ ಶಾಸಕರು ಸೂಪರ್ ಕೌನ್ಸಿಲರ್‌ಗಳಂತೆ ವರ್ತಿಸುತ್ತಿದ್ದಾರೆ ಎಂದು ಅಲವಿಲ್ಲಿ ಹೇಳಿದರು. ನಾಗರಿಕ ಸಮಸ್ಯೆಗಳನ್ನು ಪರಿಹರಿಸಲು ನಾವು ಶಾಸಕರು ಅಥವಾ ಸಂಸದರ ಬಳಿ ಹೋಗಲು ಸಾಧ್ಯವಿಲ್ಲ ಎಂದು ಅವರು ಹೇಳಿದರು.
ಸಂವಿಧಾನದ 243 ಯು ಪ್ರಕಾರ, ರಾಜ್ಯ ಸರ್ಕಾರ ಮತ್ತು ರಾಜ್ಯ ಚುನಾವಣಾ ಆಯೋಗವು ತನ್ನ ಅವಧಿ ಮುಗಿಯುವ ಮೊದಲು ಸ್ಥಳೀಯ ಸಂಸ್ಥೆ ಚುನಾವಣೆಗಳನ್ನು ನಡೆಸಬೇಕು.
ಸರ್ಕಾರವು 243 ವಾರ್ಡ್‌ಗಳನ್ನು ಶಿಫಾರಸು ಮಾಡಿದ ಜಂಟಿ ಆಯ್ಕೆ ಸಮಿತಿಯನ್ನು ರಚಿಸಿತು. ಬಿಬಿಎಂಪಿ ಮಸೂದೆಯನ್ನು ಡಿಸೆಂಬರ್ 2020 ರಲ್ಲಿ ಅಂಗೀಕರಿಸಲಾಯಿತು. ಕಳೆದ ವರ್ಷದಿಂದ ಡಿಲಿಮಿಟೇಶನ್ ಪ್ರಕ್ರಿಯೆಯು ಪ್ರಾರಂಭವಾಯಿತು.
ಪಾಲಿಕೆ ಚುನಾವಣೆ ವಿಳಂಬವನ್ನು ಪ್ರಶ್ನಿಸಿ, ಮಾಜಿ ಕೌನ್ಸಿಲರ್‌ಗಳು ಹೈಕೋರ್ಟ್‌ಗೆ ಹೋಗಿದ್ದರು, ಶೀಘ್ರವಾಗಿ ಚುನಾವಣೆ ನಡೆಸುವಂತೆ ರಾಜ್ಯ ಸರ್ಕಾರಕ್ಕೆ ಸೂಚಿಸಿತ್ತು. ಆದರೆ ರಾಜ್ಯ ಸರ್ಕಾರ ಸುಪ್ರೀಂ ಕೋರ್ಟ್‌ನ ಮೊರೆ ಹೋಗಿತ್ತು. ಅಂದಿನಿಂದ, ನ್ಯಾಯಾಲಯವು ಆದೇಶಗಳನ್ನು ನೀಡುತ್ತಿದೆ, ಎಂಟು ವಾರಗಳಲ್ಲಿ ಬಿಬಿಎಂಪಿ ವಾರ್ಡ್‌ಗಳ ವಿಂಗಡಣೆಯ ಕುರಿತು ಅಧಿಸೂಚನೆಯನ್ನು ಹೊರಡಿಸಬೇಕು ಎಂದು ಮೇ ತಿಂಗಳಲ್ಲಿ ಆದೇಶಿಸಿತ್ತು ಎಂದು ತಿಳಿಸಿದ್ದಾರೆ.
ಇದನ್ನೂ ಓದಿ: ಬಿಬಿಎಂಪಿ ಡಿಲಿಮಿಟೇಶನ್: ಹರಿದು ಬರುತ್ತಿವೆ ಸಾವಿರಾರು ಆಕ್ಷೇಪಣೆಗಳು!
ಯಾವುದೇ ಸಮಯದಲ್ಲಿ ಚುನಾವಣೆ ನಡೆಸಲು ಸಿದ್ಧ ಎಂದು ಕರ್ನಾಟಕ ರಾಜ್ಯ ಚುನಾವಣಾ ಆಯೋಗದ ಆಯುಕ್ತ ಎಸ್ ಬಸವರಾಜ್ ಹೇಳಿದ್ದಾರೆ.
ಸಮಿತಿಯ ಶಿಫಾರಸುಗಳನ್ನು ಅಂಗೀಕರಿಸಿದ ನಂತರ, ಕ್ಷೇತ್ರ/ವಾರ್ಡ್ ಆಧಾರಿತ ಮೀಸಲಾತಿ ಪಟ್ಟಿಯನ್ನು ಪ್ರಕಟಿಸಲಾಗುವುದು, ಆದರೆ ಅದು ಯಾವುದೇ ಕಾನೂನು ಅಡಚಣೆಗಳು ಉಂಟಾದರೆ ಮತ್ತಷ್ಟು ವಿಳಂಬವಾಗಬಹುದು. 198 ವಾರ್ಡ್‌ಗಳಿಗೆ ಚುನಾವಣಾ ಪಟ್ಟಿ ಸಿದ್ಧಪಡಿಸಿದ್ದು, 243 ವಾರ್ಡ್‌ಗಳಿಗೆ ಪಟ್ಟಿ ಮಾಡಲು ಒಂದು ತಿಂಗಳ ಕಾಲಾವಕಾಶ ಬೇಕು ಎಂದು ಹೇಳಿದರು. ಕುತೂಹಲದ ಸಂಗತಿಯೆಂದರೆ, ಶಾಸಕರು ಮತ್ತು ಸಂಸದರು ಬಿಬಿಎಂಪಿ ಚುನಾವಣೆಯತ್ತ ಚಿತ್ತ ಹರಿಸಿಲ್ಲ. 2023 ರ ವಿಧಾನಸಭಾ ಚುನಾವಣೆ ಮತ್ತು 2024 ರ ಲೋಕಸಭೆ ಚುನಾವಣೆಗಳ ಮೇಲೆ ಕೇಂದ್ರೀಕರಿಸಿದ್ದಾರೆ ಎಂದು ಬಿಜೆಪಿಯ ಹಿರಿಯ ನಾಯಕರೊಬ್ಬರು ಹೇಳಿದ್ದಾರೆ.