ಬಿಬಿಎಂಪಿ ಡಿಲಿಮಿಟೇಶನ್: ಹರಿದು ಬರುತ್ತಿವೆ ಸಾವಿರಾರು ಆಕ್ಷೇಪಣೆಗಳು!
ಡಿಲಿಮಿಟೇಶನ್ ಸಿದ್ಧಪಡಿಸಿದ್ದು ಬಿಬಿಎಂಪಿ ಅಧಿಕಾರಿಗಳಲ್ಲ, ಬಿಜೆಪಿ ಮತ್ತು ಆರ್‌ಎಸ್‌ಎಸ್ ನಾಯಕರು ಕೇಶವ ಕೃಪಾ’ದಲ್ಲಿ ಸಿದ್ದಪಡಿಸಿದ್ದಾರೆ, ಅವರು ತಮ್ಮ ಅಗತ್ಯಗಳಿಗೆ ತಕ್ಕಂತೆ ಕಾಂಗ್ರೆಸ್ ಆಳ್ವಿಕೆ ನಡೆಸಿದ ಹಲವು ವಿಧಾನಸಭೆಗಳನ್ನು ಬದಲಾಯಿಸಿದ್ದಾರೆ
Published: 29th June 2022 01:59 PM | Last Updated: 29th June 2022 02:41 PM | A+A A-

ಬಿಬಿಎಂಪಿ
ಬೆಂಗಳೂರು: ಕರ್ನಾಟಕ ಸರ್ಕಾರವು 243 ವಾರ್ಡ್‌ಗಳಿಗೆ ಕರಡು ಅಧಿಸೂಚನೆಯನ್ನು ಹೊರಡಿಸಿರುವ ಹಿನ್ನೆಲೆಯಲ್ಲಿ ನಗರಾಭಿವೃದ್ಧಿ ಇಲಾಖೆಗೆ ವಿಂಗಡಣೆಗೆ ಸಂಬಂಧಿಸಿದಂತೆ ಸಾವಿರಾರು ಆಕ್ಷೇಪಣೆಗಳು ಬಂದಿವೆ ಎಂದು ಹೇಳಲಾಗಿದೆ.
ಎಎಪಿ, ಎಸ್ ಡಿಪಿಐ ಮತ್ತು ಕಾಂಗ್ರೆಸ್ ಸೇರಿದಂತೆ ಇತರೆ ಪಕ್ಷಗಳು ಕೂಡ ಆಕ್ಷೇಪಣೆ ಕಳುಹಿಸಿವೆ ಎಂದು ಮೂಲಗಳು ತಿಳಿಸಿವೆ. ವಾರ್ಡ್ ವಿಂಗಡಣೆ ಅವೈಜ್ಞಾನಿಕ, ಅಲ್ಪಸಂಖ್ಯಾತರ ಪ್ರಾಬಲ್ಯವಿರುವ ವಾರ್ಡ್‌ಗಳಿಗೆ ವಿರುದ್ಧವಾಗಿದೆ, ಅಂತಹ ವಾರ್ಡ್‌ಗಳನ್ನು ವಿಭಜಿಸಿ ಇತರರೊಂದಿಗೆ ವಿಲೀನಗೊಳಿಸುವುದು, ಇತರ ಪಕ್ಷಗಳು ಪ್ರತಿನಿಧಿಸುವ ವಿಧಾನಸಭೆ ಮತ್ತು ವಾರ್ಡ್‌ಗಳನ್ನು ಗುರಿಯಾಗಿಸಿದೆ, ಲೇಔಟ್‌ಗಳ ವಿಭಜನೆ, ಐತಿಹಾಸಿಕ ಮಹತ್ವವುಳ್ಳ ಹೆಸರುಗಳನ್ನು ತೆಗೆದುಹಾಕುವುದು ಮತ್ತು ಒಂದು ವಿಭಾಗಕ್ಕೆ ಸರಿಹೊಂದುವಂತೆ ಮರು ನಾಮಕರಣ ಸಮಸ್ಯೆ ಎದುರಾಗುತ್ತದೆ ಎಂಬುದು ಪ್ರಮುಖ ಆಕ್ಷೇಪಣೆ.
ಇದರ ಜೊತೆಗೆ ಡಿಲಿಮಿಟೇಶನ್ ನಿಂದಾಗಿ ತೆರಿಗೆ ಕಟ್ಟುವುದು ಮತ್ತು ಸಾಲ ಪಡೆಯಲು ಸಮಸ್ಯೆ ಎದುರಾಗುತ್ತದೆ ಎಂಬುದು ಪ್ರಮುಖ ವಾದವಾಗಿದೆ, ಶುಕ್ರವಾರ, ವಾರ್ಡ್‌ಗಳ ವಿಂಗಡಣೆಯ ಅಧಿಸೂಚನೆಯನ್ನು ಸರ್ಕಾರ ಹೊರಡಿಸಿದೆ, ಸದ್ಯ ಇದ್ದ ವಾರ್ಡ್ ಸಂಖ್ಯೆಗಳನ್ನು 198 ರಿಂದ 243 ಕ್ಕೆ ಹೆಚ್ಚಿಸಿದೆ. ಆಕ್ಷೇಪಣೆಗಳನ್ನು ವಿಧಾನಸೌಧದಲ್ಲಿ ಭೌತಿಕವಾಗಿ ಮಾತ್ರ ಸಲ್ಲಿಸಬಹುದು. 15 ದಿನಗಳಲ್ಲಿ ಆನ್‌ಲೈನ್ ಮೂಲಕ ಸಲ್ಲಿಸಬಾರದು ಎಂದು ಸರ್ಕಾರ ಹಾಗೂ ಬಿಬಿಎಂಪಿ ಒತ್ತಿ ಹೇಳಿತ್ತು.
ಇದನ್ನೂ ಓದಿ: ವಾರ್ಡ್ ಮರುವಿಂಗಡಣೆ: ಆನ್ ಲೈನ್ ನಲ್ಲಿ ಆಕ್ಷೇಪಣೆ ಸಲ್ಲಿಕೆಗೆ ಇಲ್ಲ ಅವಕಾಶ
ಡಿಲಿಮಿಟೇಶನ್ ಸಿದ್ಧಪಡಿಸಿದ್ದು ಬಿಬಿಎಂಪಿ ಅಧಿಕಾರಿಗಳಲ್ಲ, ಬಿಜೆಪಿ ಮತ್ತು ಆರ್‌ಎಸ್‌ಎಸ್ ನಾಯಕರು ಕೇಶವ ಕೃಪಾ’ದಲ್ಲಿ ಸಿದ್ದಪಡಿಸಿದ್ದಾರೆ, ಅವರು ತಮ್ಮ ಅಗತ್ಯಗಳಿಗೆ ತಕ್ಕಂತೆ ಕಾಂಗ್ರೆಸ್ ಆಳ್ವಿಕೆ ನಡೆಸಿದ ಹಲವು ವಿಧಾನಸಭೆಗಳನ್ನು ಬದಲಾಯಿಸಿದ್ದಾರೆ. ಈ ಡಿಲಿಮಿಟೇಶನ್ ಅನ್ನು ನಾವು ವಿರೋಧಿಸುತ್ತೇವೆ ಎಂದು ಈ ಹಿಂದೆ, ಕೆಪಿಸಿಸಿ ಕಾರ್ಯಾಧ್ಯಕ್ಷ ಮಾಜಿ ಸಚಿವ ರಾಮಲಿಂಗಾ ರೆಡ್ಡಿ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ್ದರು.