ವಾರ್ಡ್ ಮರುವಿಂಗಡಣೆ: ಆನ್ ಲೈನ್ ನಲ್ಲಿ ಆಕ್ಷೇಪಣೆ ಸಲ್ಲಿಕೆಗೆ ಇಲ್ಲ ಅವಕಾಶ

ವಾರ್ಡ್ ಮರುವಿಂಗಡಣೆ ಕುರಿತು ನಾಗರಿಕರು ಸಲಹೆ, ಪ್ರತಿಕ್ರಿಯೆ ಮತ್ತು ಅಭಿಪ್ರಾಯಗಳನ್ನು ಆನ್‌ಲೈನ್‌ನಲ್ಲಿ ಸಲ್ಲಿಸಲು ಸಾಧ್ಯವಿಲ್ಲ ಎಂದು ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ಮುಖ್ಯ ಆಯುಕ್ತ ತುಷಾರ್ ಗಿರಿನಾಥ್ ತಿಳಿಸಿದ್ದಾರೆ. 
ಬಿಬಿಎಂಪಿ ಕೇಂದ್ರ ಕಚೇರಿ
ಬಿಬಿಎಂಪಿ ಕೇಂದ್ರ ಕಚೇರಿ

ಬೆಂಗಳೂರು: ವಾರ್ಡ್ ಮರುವಿಂಗಡಣೆ ಕುರಿತು ನಾಗರಿಕರು ಸಲಹೆ, ಪ್ರತಿಕ್ರಿಯೆ ಮತ್ತು ಅಭಿಪ್ರಾಯಗಳನ್ನು ಆನ್‌ಲೈನ್‌ನಲ್ಲಿ ಸಲ್ಲಿಸಲು ಸಾಧ್ಯವಿಲ್ಲ ಎಂದು ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ಮುಖ್ಯ ಆಯುಕ್ತ ತುಷಾರ್ ಗಿರಿನಾಥ್ ತಿಳಿಸಿದ್ದಾರೆ. 

ಈ ಕುರಿತು ಮಾಧ್ಯಮ ಪ್ರತಿನಿಧಿಗಳಿಗೆ ವಿವರ ನೀಡಿದ ಅವರು, ಬಿಬಿಎಂಪಿ ವೆಬ್‌ಸೈಟ್ http://bbmpdelimitation2022.com ನಲ್ಲಿ ಅಪ್‌ಲೋಡ್ ಮಾಡಲಾದ ಕರಡನ್ನು ನಾಗರಿಕರು ಆನ್‌ಲೈನ್‌ನಲ್ಲಿ ನೋಡಬಹುದು, ಆದರೆ ಭೌತಿಕವಾಗಿ ತಮ್ಮ ಅಭಿಪ್ರಾಯಗಳನ್ನು ಮತ್ತು ಪ್ರತಿಕ್ರಿಯೆಯನ್ನು ವಿಕಾಸ ಸೌಧದ 4 ನೇ ಮಹಡಿಯಲ್ಲಿರುವ ಹೆಚ್ಚುವರಿ ಮುಖ್ಯ ಕಾರ್ಯದರ್ಶಿಗಳ ಕಚೇರಿಯಲ್ಲಿ ಸಲ್ಲಿಸಬೇಕು ಎಂದರು.

ತಾಂತ್ರಿಕ ಸಮಸ್ಯೆಗಳಿಂದ ಆನ್‌ಲೈನ್ ಆಯ್ಕೆಯನ್ನು ಮುಚ್ಚಲಾಗಿದೆ: ಬಿಬಿಎಂಪಿ ಚುನಾವಣೆಗೂ, ಪಾಲಿಕೆಗೂ ಯಾವುದೇ ಸಂಬಂಧವಿಲ್ಲದ ಕಾರಣ ಪಾಲಿಕೆ ಪ್ರತಿಕ್ರಿಯೆ ಸ್ವೀಕರಿಸುತ್ತಿಲ್ಲ. ತಾಂತ್ರಿಕ ಸಮಸ್ಯೆಗಳಿಂದ ಆನ್‌ಲೈನ್ ಆಯ್ಕೆಯನ್ನು ಮುಚ್ಚಲಾಗಿದೆ  ಎಂದು ತಿಳಿಸಿದರು.

ಹೊಸ ವಾರ್ಡ್‌ಗಳ ಹೆಸರುಗಳು ಪ್ರದೇಶವನ್ನು ಆಧರಿಸಿಲ್ಲ, ಆದರೆ ರಾಜಕಾರಣಿಗಳು ಮತ್ತು ನಾಯಕರ ಹೆಸರನ್ನು ಏಕೆ ಇಡಲಾಗಿದೆ ಎಂದು ಕೇಳಿದಾಗ, ನಾಗರಿಕರು ಈ ಬಗ್ಗೆ ತಮ್ಮ ಪ್ರತಿಕ್ರಿಯೆಯನ್ನು ನೀಡಬಹುದು. ಸಮಗ್ರ ತನಿಖೆ ನಂತರ ತಿದ್ದುಪಡಿಗಳನ್ನು ಪರಿಗಣಿಸಲಾಗುವುದು ಎಂದರು.

ವಾರ್ಡ್ ಮರುವಿಂಗಡಣೆಯಲ್ಲಿ ಬಿಬಿಎಂಪಿ ವಿಶೇಷ ಆಯುಕ್ತರು, ಕಂದಾಯ, ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರದ ಆಯುಕ್ತರು ಮತ್ತು ಬೆಂಗಳೂರು ನಗರ ಡಿಸಿ ಸೇರಿದಂತೆ ನಾಲ್ವರು ಸದಸ್ಯರ ಸಮಿತಿಯಿಂದ ಮಾಡಲಾಗಿದೆ. ಆದಾಗ್ಯೂ, ವಾರ್ಡ್‌ಗಳ ಹೆಸರು ಮತ್ತು ಗಾತ್ರವನ್ನು ನಿರ್ಧರಿಸುವಲ್ಲಿ ರಾಜಕೀಯ ಮುಖಂಡರ ಅಭಿಪ್ರಾಯವಿದೆಯೇ ಎಂಬ ಮಾಧ್ಯಮ ಪ್ರತಿನಿಧಿಗಳ ಪ್ರಶ್ನೆಗೆ ಉತ್ತರಿಸಲಿಲ್ಲ. 

ವಾರ್ಡ್‌ಗಳ ಸಂಖ್ಯೆಯನ್ನು 198 ರಿಂದ 243 ಕ್ಕೆ ಹೆಚ್ಚಿಸುವುದನ್ನು ಒಳಗೊಂಡಿರುವ ವಾರ್ಡ್ ಮರುವಿಂಗಡಣೆ ಕಾರ್ಯದಲ್ಲಿ ಬೈಟರಾಯನಪುರ ಮತ್ತು ಮಹದೇವಪುರದಲ್ಲಿ ಎರಡು ಪ್ರತ್ಯೇಕಿಸಿದ ಸ್ಥಳವನ್ನು ರಚಿಸಲಾಗಿದೆ ಎಂದು ಎಂದು ಆಯುಕ್ತರು ಹೇಳಿದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com