ಬಿಬಿಎಂಪಿ ವಾರ್ಡ್ ಗಳ ಪುನರ್ ವಿಂಗಡಣೆ ಕರಡು ಅಧಿಸೂಚನೆ; ವಿಶೇಷ ರಾಜ್ಯಪತ್ರದಲ್ಲಿ ಪ್ರಕಟ
ನಿರೀಕ್ಷೆಯಂತೆಯೇ ಬೃಹತ್ ಬೆಂಗಳೂರು ವಾರ್ಡ್ ಗಳ ಪುನರ್ ವಿಂಗಡಣೆ ಕರಡಿಗೆ ರಾಜ್ಯ ಸರ್ಕಾರ ಅಧಿಸೂಚನೆ ಹೊರಡಿಸಿದ್ದು, ಈ ಕುರಿತು ವಿಶೇಷ ರಾಜ್ಯಪತ್ರದಲ್ಲಿ ಪ್ರಕಟಣೆಯನ್ನು ಕೂಡ ಹೊರಡಿಸಿದೆ.
Published: 24th June 2022 12:28 AM | Last Updated: 25th June 2022 01:27 AM | A+A A-

ಬಿಬಿಎಂಪಿ
ಬೆಂಗಳೂರು: ನಿರೀಕ್ಷೆಯಂತೆಯೇ ಬೃಹತ್ ಬೆಂಗಳೂರು ವಾರ್ಡ್ ಗಳ ಪುನರ್ ವಿಂಗಡಣೆ ಕರಡಿಗೆ ರಾಜ್ಯ ಸರ್ಕಾರ ಅಧಿಸೂಚನೆ ಹೊರಡಿಸಿದ್ದು, ಈ ಕುರಿತು ವಿಶೇಷ ರಾಜ್ಯಪತ್ರದಲ್ಲಿ ಪ್ರಕಟಣೆಯನ್ನು ಕೂಡ ಹೊರಡಿಸಿದೆ.
http://bbmpdelimitation2022.com/
ಬಿಬಿಎಂಪಿಯ 243 ವಾರ್ಡ್‌ಗಳ ಕರಡು ಅಧಿಸೂಚನೆಯನ್ನು ಕರ್ನಾಟಕ ಸರ್ಕಾರ ಬಿಡುಗಡೆ ಮಾಡಿದೆ. ವಾರ್ಡ್‌ಗಳ ವಿಂಗಡಣೆ ಮತ್ತು ಒಬಿಸಿ ಮೀಸಲಾತಿ ಪ್ರಕ್ರಿಯೆಯನ್ನು 8 ವಾರಗಳಲ್ಲಿ ಪೂರ್ಣಗೊಳಿಸುವಂತೆ ಸುಪ್ರೀಂ ಕೋರ್ಟ್ ರಾಜ್ಯ ಸರ್ಕಾರಕ್ಕೆ ನಿರ್ದೇಶನ ನೀಡಿದ ನಂತರ, ರಾಜ್ಯ ಸರ್ಕಾರವು ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯ 243 ವಾರ್ಡ್‌ಗಳ ವಿಂಗಡಣೆಯ ಕರಡು ಅಧಿಸೂಚನೆಯನ್ನು ಹೊರಡಿಸಿದೆ.
BBMP releases new map of #Bengaluru after the delimitation gazette notification was released@NewIndianXpress @XpressBengaluru @KannadaPrabha @Cloudnirad @NammaBengaluroo @NammaKarnataka_ @namma_BTM @Namma_ORRCA @KoramangalaRWA @IChangeMyCity @icindngr @_kanakapuraroad @BBMPCOMM pic.twitter.com/6GS7dw3ZNT
— Bosky Khanna (@BoskyKhanna) June 23, 2022
ವಾರ್ಡ್‌ಗಳ ವಿಂಗಡಣೆಗೆ ಸಂಬಂಧಿಸಿದಂತೆ ಬಿಬಿಎಂಪಿಯಲ್ಲಿ ಸಾರ್ವಜನಿಕರು ತಮ್ಮ ಆಕ್ಷೇಪಣೆಗಳನ್ನು ಸಲ್ಲಿಸಲು ಇಲಾಖೆಯು 15 ದಿನಗಳ ಕಾಲಾವಕಾಶವನ್ನು ನೀಡಿದೆ. ಅಧಿಸೂಚನೆಯ ಪ್ರಕಾರ, ಪ್ರಸ್ತಾವನೆಗೆ ಆಕ್ಷೇಪಣೆಗಳು, ಸಲಹೆಗಳನ್ನು ಹೊಂದಿರುವ ಎಲ್ಲಾ ವ್ಯಕ್ತಿಗಳು/ಸಂಸ್ಥೆಗಳು ಕರಡು ಅಧಿಸೂಚನೆಯನ್ನು ಪ್ರಕಟಿಸಿದ 15 ದಿನಗಳ ಒಳಗಾಗಿ UDD ಯ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ, ವಿಕಾಸ ಸೌಧದಲ್ಲಿ ಸಲ್ಲಿಸಬೇಕಾಗುತ್ತದೆ.
ಇದನ್ನೂ ಓದಿ: ಬೆಂಗಳೂರು ಪ್ರಜ್ವಲ ಭವಿಷ್ಯಕ್ಕೆ ಬಲಿಷ್ಠ ಬಿಬಿಎಂಪಿ ಬೇಕು... ಮೊದಲ ಬಾರಿ ಮತದಾನಕ್ಕೆ ಯುವಕರು ಉತ್ಸುಕ!
ಶಾಸಕ ಎಸ್.ರಘು ನೇತೃತ್ವದ ಜಂಟಿ ಸದನ ಸಮಿತಿಯು 2011ರ ಜನಸಂಖ್ಯೆಯ ಆಧಾರದ ಮೇಲೆ ಡಿಲಿಮಿಟೇಶನ್ ಅನ್ನು ತೆಗೆದುಕೊಂಡಿದೆ ಮತ್ತು ಬಿಬಿಎಂಪಿ ಕಳೆದ ವಾರ ಯುಡಿಡಿಗೆ ಕಳುಹಿಸಿದೆ. ಜನಸಂಖ್ಯೆಯ ಏಕರೂಪತೆಯನ್ನು ಸಾಧಿಸುವ ಸಲುವಾಗಿ 243 ವಾರ್ಡುಗಳ ಸೀಮಾರೇಖೆಯನ್ನು ಗುರುತಿಸುವ (delimiting the ward boundary) ಕಾರ್ಯ ನಿರ್ವಹಿಸಲು ಕರ್ನಾಟಕ ಸರ್ಕಾರವು ಪುನರ್ವಿಂಗಡಣಾ ಸಮಿತಿಯನ್ನು ರಚಿಸಿತ್ತು. ಈ ಸಮಿತಿಯು BBMP Act 2020 (KARNATAKA ACT NO. 53 OF 2020 THE BRUHAT BENGALURU MAHANAGARA PALIKE ACT, 2020 FT PAR: G.O. No UDD 4 MLR 2014 dt.215.02.2014) ರಲ್ಲಿನ ಮಾನದಂಡಗಳನ್ನು ಅನುಸರಿಸಿ, 2011ರ ಜನಸಂಖ್ಯೆಯನ್ನು ಆಧಾರವಾಗಿಟ್ಟುಕೊಂಡು ಬಿಬಿಎಂಪಿ ವ್ಯಾಪ್ತಿಯಲ್ಲಿ 243 ವಾರ್ಡುಗಳ ವಿಂಗಡಣೆ ಮಾಡಿ ಪ್ರತೀ ವಾರ್ಡಿನ ಗಡಿಗಳನ್ನು ಗುರುತಿಸಿದೆ.
ಇದನ್ನೂ ಓದಿ: ಸೋಷಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿರುವುದು ನಕಲಿ ಡಿಲಿಮಿಟೇಶನ್ ಕರಡು: ಬಿಬಿಎಂಪಿ
ಬೆಂಗಳೂರು ನಗರವು ಅತೀ ವೇಗದಲ್ಲಿ ಅಭಿವೃದ್ಧಿ ಹೊಂದುತ್ತಿದ್ದು 2001-2011ರ ಅವಧಿಯಲ್ಲಿ ಜನಸಂಖ್ಯೆಯ ಹೆಚ್ಚಳವು ಶೇ. 44ಕ್ಕಿಂತಲೂ ಮೀರಿ ದಾಖಲೆಯಾಗಿದೆ. 2011ರ ಜನಗಣತಿಯ ಪ್ರಕಾರ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯ (ಬಿಬಿಎಂಪಿ) ಪ್ರದೇಶದಲ್ಲಿನ ಜನಸಂಖ್ಯೆ 84,43,675 ಇತ್ತೆಂದು ನಿಗದಿತವಾಗಿದೆ. ಬಿಬಿಎಂಪಿ ವ್ಯಾಪ್ತಿಯಲ್ಲಿರುವ 198 ವಾರ್ಡುಗಳ ಜನಸಂಖ್ಯೆಯಲ್ಲಿ ಅಸಮಾನತೆ ಸೃಷ್ಟಿಯಾದ ಪರಿಸ್ಥಿತಿಯನ್ನು ಗಮನದಲ್ಲಿಟ್ಟುಕೊಂಡು, ಕರ್ನಾಟಕ ಸರ್ಕಾರವು ಬಿಬಿಎಂಪಿಯ ವಾರ್ಡುಗಳನ್ನು 198 ರಿಂದ 243ಕ್ಕೆ ಹೆಚ್ಚಿಸಿದೆ.
ಇದನ್ನೂ ಓದಿ: ರಾಜ್ಯಸಭೆ ಗೆಲುವು ಬಳಿಕ ಬಿಬಿಎಂಪಿ ಚುನಾವಣೆಗೆ ಬಿಜೆಪಿ ಸಿದ್ಧತೆ!
ವಾರ್ಡಿನ ಜನಸಂಖ್ಯೆ ಸ್ಪಷ್ಟವಾದ ಗಡಿ, ವಿಧಾನಸಭಾ ಕ್ಷೇತ್ರ ಮತ್ತು ವಾರ್ಡಿನ ವಿಸ್ತೀರ್ಣ, ವಸತಿ ಪ್ರದೇಶಗಳ ಸಾಮೀಪ್ಯತೆ(Contiguity), ಸೇವೆ-ಸೌಲಭ್ಯಗಳ ನಿರ್ವಹಣೆ ಹಾಗೂ ಸರಳ ಆಡಳಿತಾತ್ಮಕ ಅನುಕೂಲತೆ ಇತ್ಯಾದಿ ಅಂಶಗಳನ್ನು ಗಮನದಲ್ಲಿಟ್ಟುಕೊಂಡು 243 ವಾರ್ಡುಗಳ ವಿಂಗಡಣೆ ಮಾಡಲಾಗಿದೆ. ಬಿಬಿಎಂಪಿ ವ್ಯಾಪ್ತಿಯಲ್ಲಿರುವ ವಿವಿಧ ವಿಧಾನಸಭಾ ಕ್ಷೇತ್ರಗಳ ವ್ಯಾಪ್ತಿಗೆ ಸೀಮಿತವಾಗಿರುವಂತೆ ವಾರ್ಡುಗಳನ್ನು ಗುರುತಿಸಲಾಗಿದ್ದು, ಈ ಪ್ರಕ್ರಿಯೆಯಿಂದಾಗಿ ವಾರ್ಡುಗಳ ಸಂಖ್ಯೆಯಲ್ಲಿ ವ್ಯತ್ಯಾಸಗಳು ಕಂಡುಬಂದರೂ ವಿಂಗಡಣೆಯಾದ ಎಲ್ಲ ವಾರ್ಡುಗಳು ಪಾಲಿಕೆಯ ವ್ಯಾಪ್ತಿಗೆ ಸೇರಿವೆ.