ಪಿಎಸ್‌ಐ ನೇಮಕಾತಿ ಹಗರಣ: ಎರಡನೇ ಚಾರ್ಜ್‌ಶೀಟ್‌ನಲ್ಲಿ ಡಿವೈಎಸ್‌ಪಿ ಶಾಂತಕುಮಾರ್ ಹೆಸರು ಉಲ್ಲೇಖ

ಪೊಲೀಸ್ ಸಬ್ ಇನ್ಸ್ ಪೆಕ್ಟರ್ ನೇಮಕಾತಿ ಹಗರಣದ ಎರಡನೇ ಆರೋಪ ಪಟ್ಟಿಯನ್ನು ಸಿಐಡಿ ಬುಧವಾರ ನಗರದ ಒಂದನೇ ಎಸಿಎಂಎಂ ನ್ಯಾಯಾಲಯಕ್ಕೆ ಸಲ್ಲಿಸಿದೆ.
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ಬೆಂಗಳೂರು: ಪೊಲೀಸ್ ಸಬ್ ಇನ್ಸ್ ಪೆಕ್ಟರ್ ನೇಮಕಾತಿ ಹಗರಣದ ಎರಡನೇ ಆರೋಪ ಪಟ್ಟಿಯನ್ನು ಸಿಐಡಿ ಬುಧವಾರ ನಗರದ ಒಂದನೇ ಎಸಿಎಂಎಂ ನ್ಯಾಯಾಲಯಕ್ಕೆ ಸಲ್ಲಿಸಿದೆ.

 ಅಮಾನತುಗೊಂಡಿರುವ ನೇಮಕಾತಿ ಘಟಕದ ಡಿವೈಎಸ್‌ಪಿ ಶಾಂತಕುಮಾರ್ ಮತ್ತು ಮೂವರು ಪೊಲೀಸ್ ಅಧಿಕಾರಿಗಳು, 14 ಅಭ್ಯರ್ಥಿಗಳು ಮತ್ತು ಏಳು ಮಧ್ಯವರ್ತಿಗಳು ಸೇರಿದಂತೆ 29 ಜನರ ಹೆಸರನ್ನು ಉಲ್ಲೇಖಿಸಲಾಗಿದೆ.  ಉತ್ತರ ಪತ್ರಿಕೆಗಳನ್ನು ಇಡಲಾಗಿದ್ದ ಸ್ಟ್ರಾಂಗ್ ರೂಂ ಉಸ್ತುವಾರಿಯನ್ನು ಶಾಂತ ಕುಮಾರ್ ಕುಮಾರ್ ನೋಡಿಕೊಳ್ಳುತ್ತಿದ್ದರು.

ಸಿಐಡಿ ಪ್ರಕಾರ, ಆರೋಪಿ ಅಭ್ಯರ್ಥಿಗಳಿಂದ ದೊಡ್ಡ ಪ್ರಮಾಣದಲ್ಲಿ ಹಣ ಪಡೆದು ಒಎಂಆರ್ ಶೀಟ್‌ಗಳನ್ನು ತಿರುಚಿದ್ದಾರೆ ಎಂದು ಆರೋಪಿಸಲಾಗಿದೆ. 3,000 ಪುಟಗಳ ಚಾರ್ಜ್‌ಶೀಟ್‌ನಲ್ಲಿ ಜುಲೈ 4 ರಂದು ಬಂಧಿಸಲಾದ ಐಪಿಎಸ್ ಅಧಿಕಾರಿ ಎಡಿಜಿಪಿ ಅಮೃತ್ ಪಾಲ್ ಅವರನ್ನು ಉಲ್ಲೇಖಿಸಿಲ್ಲ.

90 ದಿನಗಳ ನಿಗದಿತ ಅವಧಿಯೊಳಗೆ ಆರೋಪಪಟ್ಟಿ ಸಲ್ಲಿಸಲು ಸಿಐಡಿಗೆ 60 ದಿನಗಳಿಗಿಂತ ಹೆಚ್ಚು ಸಮಯವಿದೆ. ಪಾಲ್ ಬೆಂಗಳೂರು ಕೇಂದ್ರ ಕಾರಾಗೃಹ, ಪರಪಣ್ಣ ಅಗ್ರಹಾರದಲ್ಲಿ ನ್ಯಾಯಾಂಗ ಬಂಧನದಲ್ಲಿದ್ದಾರೆ.
 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com