ರಾಷ್ಟ್ರ ಲಾಂಛನ ದುರ್ಬಳಕೆ: ಬಸವರಾಜ ಹೊರಟ್ಟಿ ವಿರುದ್ಧ ನೋಟಿಸ್ ಜಾರಿ
ಬಸವರಾಜ ಪಥ ಎಂಬ ಪುಸ್ತಕದ ಮುಖ ಪುಟದ ಮೇಲೆ ರಾಷ್ಟ್ರೀಯ ಲಾಂಛನ ಬಳಸಿದ ಆರೋಪ ಮತ್ತು ಪರಿಷತ್ ಸಭಾಪತಿ ಪೀಠದ ದುರ್ಬಳಕೆ ಮಾಡಿದ ಆರೋಪದ ಮೇಲೆ ಪಶ್ಚಿಮ ಶಿಕ್ಷಕರ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಬಸವರಾಜ ಹೊರಟ್ಟಿ ಅವರಿಗೆ ಬೆಳಗಾವಿ ಪ್ರಾದೇಶಿಕ ಆಯುಕ್ತರು ನೋಟಿಸ್ ಜಾರಿ ಮಾಡಿದ್ದಾರೆಂದು ತಿಳಿದುಬಂದಿದೆ.
Published: 12th June 2022 08:36 AM | Last Updated: 12th June 2022 08:36 AM | A+A A-

ಬಸವರಾಜ ಹೊರಟ್ಟಿ
ಬೆಳಗಾವಿ: ಬಸವರಾಜ ಪಥ ಎಂಬ ಪುಸ್ತಕದ ಮುಖ ಪುಟದ ಮೇಲೆ ರಾಷ್ಟ್ರೀಯ ಲಾಂಛನ ಬಳಸಿದ ಆರೋಪ ಮತ್ತು ಪರಿಷತ್ ಸಭಾಪತಿ ಪೀಠದ ದುರ್ಬಳಕೆ ಮಾಡಿದ ಆರೋಪದ ಮೇಲೆ ಪಶ್ಚಿಮ ಶಿಕ್ಷಕರ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಬಸವರಾಜ ಹೊರಟ್ಟಿ ಅವರಿಗೆ ಬೆಳಗಾವಿ ಪ್ರಾದೇಶಿಕ ಆಯುಕ್ತರು ನೋಟಿಸ್ ಜಾರಿ ಮಾಡಿದ್ದಾರೆಂದು ತಿಳಿದುಬಂದಿದೆ.
ನೋಟಿಸ್ ಕುರಿತು ಬಸವರಾಜ ಹೊರಟ್ಟಿಯವರಿಂದ ಸ್ಪಷ್ಟನೆ ಬಂದ ನಂತರ ಅವರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದು ಪ್ರಾದೇಶಿಕ ಆಯುಕ್ತ ಆಮ್ಲನ್ ಆದಿತ್ಯ ಬಿಸ್ವಾಸ್ ತಿಳಿಸಿದ್ದಾರೆ.
ಬೆಳಗಾವಿಯ ಜ್ಯೋತಿ ಕಾಲೇಜಿನಲ್ಲಿ ಶನಿವಾರ ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಪ್ರಾದೇಶಿಕ ಆಯುಕ್ತರು, ಪುಸ್ತಕದ ಮುಖಪುಟದ ಮೇಲೆ ರಾಷ್ಟ್ರ ಲಾಂಛನ ಹಾಗೂ ಪರಿಷತ್ತಿನ ಸಭಾಪತಿ ಸ್ಥಾನವನ್ನು ದುರ್ಬಳಕೆ ಮಾಡಿಕೊಂಡ ದೂರು ಹಿನ್ನೆಲೆಯಲ್ಲಿ ಹೊರಟ್ಟಿಯವರಿಗೆ ನೋಟಿಸ್ ಜಾರಪಿ ಮಾಡಲಾಗಿದೆ ಎಂದು ಹೇಳಿದರು.
“ಭಾರತದ ಲಾಂಛನ ಮತ್ತು ಪರಿಷತ್ತಿನ ಸಭಾಪತಿ ಸ್ಥಾನವನ್ನು ಪುಸ್ತಕದ ಮುಖಪುದುರ್ಬಳಕೆ ಮಾಡಿಕೊಂಡಿರುವ ದೂರಿನ ಹಿನ್ನೆಲೆಯಲ್ಲಿ ನೋಟಿಸ್ ನೀಡಲಾಗಿದೆ. ರಾಜ್ಯ ಇಂಟರ್ ಮೀಡಿಯೇಟ್ ಶಾಲಾ ನೌಕರರ ಸಂಘದಿಂದ ಕನ್ನಡದಲ್ಲಿ ಬಸವರಾಜ ಪಥವನ್ನು ಪ್ರಕಟಿಸಲಾಗಿದೆ.
ಇದಲ್ಲದೆ ವಿಧಾನ ಪರಿಷತ್ ಚುನಾವಣೆ ಹಿನ್ನೆಲೆ ನೀತಿ ಸಂಹಿತೆ ಉಲ್ಲಂಘನೆ ಸಂಬಂಧಿಸಿದಂತೆ ಮದ್ಚ, ಗಾಂಜಾ ಸೇರಿದಂತೆ ಒಟ್ಟು ರೂ.81,82,33 ಮೌಲ್ಯದ ಸ್ವತ್ತನ್ನು ಜಪ್ತಿ ಮಾಡಲಾಗಿದೆ. ಇದನ್ನು ಹೊರತುಪಡಿಸಿ ಬಾಲಕೋಟೆಯಿಂದ ಓರ್ವ ವ್ಯಕ್ತಿ ತಮಗೆ ಬೆದರಿಕೆ ಹಾಕಿದ್ದಾರೆಂದು ಪಕ್ಷೇತರ ಅಭ್ಯರ್ಥಿ ಸುಭಾಷ್ ಕೋಟೆ ಆಡಿಯೋ ಕ್ಲಿಪ್ ಕಳುಹಿಸಿದ್ದಾರೆ. ಆ ಕುರಿತು ಬಾಗಲಕೋಟೆ ಎಸ್'ಪಿಗೆ ತಿಳಿಸಿದ್ದು, ಅವರು ತನಿಖೆ ನಡೆಸಿ ಕ್ರ ಕೈಗೊಳ್ಳಲಿದ್ದಾರೆಂದರು.
ಬೆಳಗಾವಿ ಪ್ರಾದೇಶಿಕ ವಿಭಾಗದ ವ್ಯಾಪ್ತಿಯ ಜಿಲ್ಲೆಗಳಲ್ಲಿ ಮೇ.12ರಿಂದ ಜೂನ್ 10ರವರೆಗೆ ನಡೆಸಿದ ಕಾರ್ಯಾಚರಣೆಯಲ್ಲಿ ರೂ.ರೂ.3488166 ಮೌಲ್ಯದ ಮದ್ಯ, ರೂ.150167 ಮೌಲ್ಯದ 11,743 ಕೆಜಿ ಗಾಂಜಾ, ರೂ.5.27 ಲಕ್ಷ ಮೌಲ್ಯದ 15 ದ್ವಿಚಕ್ರ ವಾಹನಗಳು, ರೂ.4 ಲಕ್ಷ ಮೌಲ್ಯದ 2 ಕಾರ್, ರೂ.7 ಲಕ್ಷ ಮೌಲ್ಯದ ಎರಡು ಬುಲೇರೋ, ರೂ.4 ಲಕ್ಷ ಮೌಲ್ಯದ ಒಂದು ಮಿನಿಲಾರಿ, ರೂ.10 ಸಾವಿರ ಮೌಲ್ಯದ ಮೊಬೈಲ್, ರೂ.2,50,7000 ಮೌಲ್ಯದ ಇತರೆ ಸ್ವತ್ತು ಸೇರಿದಂತೆ ಒಟ್ಟು ರೂ.818233 ಮೌಲ್ಯದ ಸ್ವತ್ತನ್ನು ಜಪ್ತಿ ಮಾಡಲಾಗಿದೆ ಎಂದು ಮಾಹಿತಿ ನೀಡಿದರು.