ಮೊಬೈಲ್ ಟಾಯ್ಲೆಟ್ ನಿರ್ಮಿಸಿದ ಪಿಎಸ್ಐಗೆ ಬಿಬಿಎಂಪಿ ಮುಖ್ಯ ಆಯುಕ್ತ ತುಷಾರ್ ಗಿರಿನಾಥ್ ಅಭಿನಂದನೆ

ಗೊರಗುಂಟೆಪಾಳ್ಯ ಜಂಕ್ಷನ್ ನಲ್ಲಿ ಇದೇ ತಿಂಗಳ 15 ರಂದು 10 ಮೊಬೈಲ್ ಟಾಯ್ಲೆಟ್ ನಿರ್ಮಿಸಿರುವ ಸೆಂಟ್ರಲ್ ವಿಭಾಗದ ಪಿಎಸ್ ಐ ಶಾಂತಪ್ಪ ಜಡೇಮ್ಮನವರ್ ಅವರನ್ನು ಬಿಬಿಎಂಪಿ ಮುಖ್ಯ ಆಯುಕ್ತ ತುಷಾರ್ ಗಿರಿನಾಥ್ ಭೇಟಿ ಮಾಡಿದ್ದು, ಅವರ ಸಾರ್ವಜನಿಕ ಸೇವೆಗೆ ಅಭಿನಂದನೆ ಸಲ್ಲಿಸಿದ್ದಾರೆ.
ಬಿಬಿಎಂಪಿ ಮುಖ್ಯ ಆಯುಕ್ತ ತುಷಾರ್ ಗಿರಿನಾಥ್
ಬಿಬಿಎಂಪಿ ಮುಖ್ಯ ಆಯುಕ್ತ ತುಷಾರ್ ಗಿರಿನಾಥ್

ಬೆಂಗಳೂರು: ಗೊರಗುಂಟೆಪಾಳ್ಯ ಜಂಕ್ಷನ್ ನಲ್ಲಿ ಇದೇ ತಿಂಗಳ 15 ರಂದು 10 ಮೊಬೈಲ್ ಟಾಯ್ಲೆಟ್ ನಿರ್ಮಿಸಿರುವ ಸೆಂಟ್ರಲ್ ವಿಭಾಗದ ಪಿಎಸ್ ಐ ಶಾಂತಪ್ಪ ಜಡೇಮ್ಮನವರ್ ಅವರನ್ನು ಬಿಬಿಎಂಪಿ ಮುಖ್ಯ ಆಯುಕ್ತ ತುಷಾರ್ ಗಿರಿನಾಥ್ ಭೇಟಿ ಮಾಡಿದ್ದು, ಅವರ ಸಾರ್ವಜನಿಕ ಸೇವೆಗೆ ಅಭಿನಂದನೆ ಸಲ್ಲಿಸಿದ್ದಾರೆ.

ಸ್ಥಳಕ್ಕೆ ಭೇಟಿ ನೀಡಿ, ಬಿಬಿಎಂಪಿಯಿಂದ ಹೇಗೆ ಟಾಯ್ಲೆಟ್ ನಿರ್ವಹಣೆ ಮಾಡಬಹುದು ಎಂಬುದರ ಬಗ್ಗೆ ವರದಿ ಸಲ್ಲಿಸುವಂತೆ ಅಧಿಕಾರಿಗಳಿಗೆ ಗಿರಿನಾಥ್ ನಿರ್ದೇಶಿಸಿದ್ದಾರೆ.

ಬೆಂಗಳೂರು- ತುಮಕೂರು ರಾಷ್ಟ್ರೀಯ ಹೆದ್ದಾರಿಯ ತಾಜ್ ವಿವಾಂತ ಬಳಿಯ ಗೊರಗುಂಟೆಪಾಳ್ಯ ಜಂಕ್ಷನ್ ನಲ್ಲಿ ಬಸ್ಸಿಗಾಗಿ ಕಾಯುವವರಿಗಾಗಿ ಸಾರ್ವಜನಿಕ ಟಾಯ್ಲೆಟ್ ನಿರ್ಮಿಸಲು ಪಿಎಸ್ ಐ ಆನ್ ಲೈನ್ ಅಭಿಯಾನ ಆರಂಭಿಸಿದ್ದರು. 100 ದಿನ ಕಳೆದರೂ ಜನಪ್ರತಿನಿಧಿಗಳು ಅಥವಾ ಸಂಬಂಧಿಸಿದ ಅಧಿಕಾರಿಗಳಿಂದ ಸ್ಪಂದನೆ ದೊರೆಯದಿದ್ದಾಗ ತಾವೇ ಸ್ವತ: ಟಾಯ್ಲೆಟ್ ಆರಂಭಿಸಿದ್ದಾರೆ.

 ಗೃಹ ಸಚಿವ ಆರಗ ಜ್ಞಾನೇಂದ್ರ ಕೂಡ ಪಿಎಸ್‌ಐ ಅವರನ್ನು ತಮ್ಮ ಕಚೇರಿಗೆ ಕರೆಸಿ ಉತ್ತಮ ಕೆಲಸ ಮಾಡುವಂತೆ ಪ್ರೋತ್ಸಾಹಿಸಿದ್ದಾರೆ. 

ದಿ ನ್ಯೂ ಇಂಡಿಯನ್ ಎಕ್ಸ್ ಪ್ರೆಸ್ ಜೊತೆಗೆ ಮಾತನಾಡಿದ ಜಡೆಮ್ಮನವರ್, “ಬಿಬಿಎಂಪಿ ಆಯುಕ್ತರ ಕಚೇರಿಯಿಂದ ಕರೆ ಬಂದಾಗ, ಬಿಬಿಎಂಪಿಯವರ ಕೆಲಸ ಮಾಡಿದ್ದಕ್ಕೆ ನನನ್ನು ತರಾಟೆಗೆ ತೆಗೆದುಕೊಳ್ಳಬಹುದು ಎಂದು ಹೆದರುತ್ತಿದೆ. ಆದರೆ ಆಯುಕ್ತರು ನನ್ನ ಪ್ರಯತ್ನವನ್ನು ಶ್ಲಾಘಿಸಿದರು ಮತ್ತು ಸಾರ್ವಜನಿಕ ಶೌಚಾಲಯಗಳ ಕುರಿತು ಹೆಚ್ಚಿನ ವಿವರಗಳನ್ನು ಕೇಳಿದರು ಎಂದು ತಿಳಿಸಿದರು.

ಪೌರಕಾರ್ಮಿಕರ ಸಹಾಯವಿಲ್ಲದೆ ಸಾರ್ವಜನಿಕ ಶೌಚಾಲಯಗಳು ಕಾರ್ಯ ನಿರ್ವಹಿಸುವುದು ಕಷ್ಟಕರವಾಗಿದೆ ಎಂದು ವಿವರಿಸಿದರು. “ಜಂಕ್ಷನ್‌ನಲ್ಲಿ ಮತ್ತೊಂದು ಸಾರ್ವಜನಿಕ ಶೌಚಾಲಯವಿದ್ದು, ಅದು ಬಳಕೆಯಾಗದೆ ಕೆಲವು ಸಮಯದಿಂದ ಬೀಗ ಹಾಕಲಾಗಿದೆ. ಅದು ಕಾರ್ಯರೂಪಕ್ಕೆ ಬಂದರೆ, ಹೆಚ್ಚಿನ ಶೌಚಾಲಯಗಳು ಇರುತ್ತವೆ ಎಂದು ಅವರು ಹೇಳಿದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com