ಕನ್ನಡ ನಾಡು ಪುಣ್ಯದ ಬೀಡು, ಕರುನಾಡಿನಲ್ಲಿ ಹುಟ್ಟಬೇಕಾದರೆ ಏಳೇಳು ಜನ್ಮದಲ್ಲಿ ಪುಣ್ಯ ಮಾಡಿರಬೇಕು: ಸಿಎಂ ಬೊಮ್ಮಾಯಿ

ಕನ್ನಡ ನಾಡು ಪುಣ್ಯದ ಬೀಡು, ಕರುನಾಡಿನಲ್ಲಿ ಹುಟ್ಟಬೇಕಾದರೆ ಏಳೇಳು ಜನ್ಮದದಲ್ಲಿ ಪುಣ್ಯ ಮಾಡಿರಬೇಕು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಯವರು ಮಂಗಳವಾರ ಹೇಳಿದ್ದಾರೆ.
ಕಂಠೀರವ ಕ್ರೀಡಾಂಗಣದಲ್ಲಿ ಆಯೋಜಿಸಿದ್ದ 67 ನೇ ಕರ್ನಾಟಕ ರಾಜ್ಯೋತ್ಸವದ ಅಂಗವಾಗಿ ತಾಯಿ ಭುವನೇಶ್ವರಿಗೆ ಪುಷ್ಪ ನಮನ ಸಲ್ಲಿಸಿ ಧ್ವಜಾರೋಹಣ ನೆರವೇರಿಸಿದ ಸಿಎಂ ಬೊಮ್ಮಾಯಿ.
ಕಂಠೀರವ ಕ್ರೀಡಾಂಗಣದಲ್ಲಿ ಆಯೋಜಿಸಿದ್ದ 67 ನೇ ಕರ್ನಾಟಕ ರಾಜ್ಯೋತ್ಸವದ ಅಂಗವಾಗಿ ತಾಯಿ ಭುವನೇಶ್ವರಿಗೆ ಪುಷ್ಪ ನಮನ ಸಲ್ಲಿಸಿ ಧ್ವಜಾರೋಹಣ ನೆರವೇರಿಸಿದ ಸಿಎಂ ಬೊಮ್ಮಾಯಿ.

ಬೆಂಗಳೂರು: ಕನ್ನಡ ನಾಡು ಪುಣ್ಯದ ಬೀಡು, ಕರುನಾಡಿನಲ್ಲಿ ಹುಟ್ಟಬೇಕಾದರೆ ಏಳೇಳು ಜನ್ಮದದಲ್ಲಿ ಪುಣ್ಯ ಮಾಡಿರಬೇಕು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಯವರು ಮಂಗಳವಾರ ಹೇಳಿದ್ದಾರೆ.

67ನೇ ಕರ್ನಾಟಕ ರಾಜ್ಯೋತ್ಸವದ ಅಂಗವಾಗಿ ಕಂಠೀರವ ಕ್ರೀಡಾಂಗಣದಲ್ಲಿ ಆಯೋಜಿಸಿದ್ದ ಸಮಾರಂಭದಲ್ಲಿ ಸಿಎಂ ಬೊಮ್ಮಾಯಿಯವರು ಧ್ವಜಾರೋಹಣ ನೆರವೇರಿಸಿದರು.

ಈ ವೇಳೆ ಮಾತನಾಡಿದ ಅವರು, ಕನ್ನಡ ನಾಡು ಪುಣ್ಯದ ಬೀಡು. ಅತ್ಯಂತ ಸಂಪತ್ದಬರಿತ ನಾಡು ನಮ್ಮ ನಾಡು. ಈ ನಾಡಿನಲ್ಲಿ ಹುಟ್ಟ ಬೇಕಾದರೆ ಏಳೇಳು ಜನ್ಮದ ಪುಣ್ಯ ಮಾಡಿರಬೇಕು. ಕರ್ನಾಟಕದ ಏಕೀಕರಣ ಹೋರಾಟದ ಯಾರೂ ಮರೆಯುವಂತಿಲ್ಲ. ಮದ್ರಾಸ್ ಕರಾವಳಿ ಮಧ್ಯ ಕರ್ನಾಟಕ ಅಂತ ಹಂಚಿ ಹೋಗಿತ್ತು. ಆದರೆ, ಅದನ್ನ ಹಾಲೂರು ವೆಂಕಟರಾಯರು ಹೋರಾಟ ಮಾಡಿ ಕರ್ನಾಟಕ ಏಕೀಕರಣ ಮಾಡಿದರು. ಇದರಲ್ಲಿ ಹಲವಾರು ಮಹನೀಯರ ಶ್ರಮ ಇದೆ. ಇದಕ್ಕೆ ರಾಷ್ಟ್ರ ಕವಿ ಕುವೆಂಪು ಕೂಡಾ ಹಿಂಪನ್ನ ನೀಡಿದ್ದರು. ಶಿಕ್ಷಣ ಆರೋಗ್ಯ, ಉದ್ಯೋಗ ಜೊತೆ ಭಾರತದ ಭವಿಷ್ಯವನ್ನೂ ನಿರ್ಮಾಣ ಮಾಡುವ ಶಕ್ತಿ ಕರ್ನಾಟಕಕ್ಕೆ ಇದೆ ಎಂದು ಹೇಳಿದರು.

ಕನ್ನಡ ಏಕೀಕರಣಗೊಂಡು ಆರೂವರೆ ದಶಕಗಳಿಗೂ ಹೆಚ್ಚು ಸಮಯವಾಗಿದೆ. ಈಗ ಪ್ರತಿಯೊಬ್ಬ ಕನ್ನಡಿಗ ಆತ್ಮಾವಲೋಕನ ಮಾಡಿಕೊಳ್ಳಬೇಕು. ಕನ್ನಡ ನಾಡಿಗೆ ನನ್ನ ಕೊಡುಗೆ ಏನು ಅನ್ನೋದು ಅರಿಯಬೇಕು. ಕನ್ನಡ ನಾಡಿನ ಬಗ್ಗೆ ಆಲೋಚನೆ ಮಾಡಿದರೆ ವಿಶ್ವದಲ್ಲೇ ಮೊದಲ ರಾಜ್ಯ ನಮ್ಮದಾಗಲಿದೆ ಎಂದು ತಿಳಿಸಿದರು.

ಶಿಕ್ಷಣ ಸಚಿವ ನಾಗೇಶ್ ಮಾತನಾಡಿ, ಕನ್ನಡನಾಡು ನುಡಿಯ ಬಗ್ಗೆ ಮಕ್ಕಳಿಗೆ ಅಗತ್ಯ ದೇಶಪ್ರೇಮ ಬೆಳೆಸೋದು ಪೋಷಕರ ಕರ್ತವ್ಯ. ಕಲಿಕಾ ಚೇತರಿಕೆ ಕಾರ್ಯಕ್ರಮ ಯಶಸ್ವಿಯಾಗಿ ಅನುಷ್ಟಾನವಾಗಿದೆ. ಪದವಿ ಪೂರ್ವ ಕಾಲೇಜುಗಳ ಕೊಠಡಿಗಳ ಕೊರತೆ ನೀಗಿಸಲಾಗಿದೆ. ರಾಷ್ಟ್ರೀಯ ಶಿಕ್ಷಣ ನೀತಿ ಅನುಷ್ಠಾನಗೊಳಿಸಲು ಸರ್ಕಾರ‌ ಅಗತ್ಯ ಕ್ರಮ ಕೈಗೊಂಡಿದೆ ಎಂದರು.

ಕಾರ್ಯಕ್ರಮದಲ್ಲಿ ಸಂಸದ ಪಿ.ಸಿ.ಮೋಹನ್, ವಿಧಾನ ಪರಿಷತ್ ಸದಸ್ಯರಾದ  ಬಸವರಾಜ ಹೊರಟ್ಟಿ, ಗೋವಿಂದರಾಜು, ಶಾಸಕ ರಿಜ್ವಾನ್ ಅರ್ಷದ್ ಉಪಸ್ಥಿತರಿದ್ದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com