ಕಾಂಗ್ರೆಸ್ ಆರೋಪದ ಬಳಿಕ ಮೈಸೂರು ದಸರಾ ಖರ್ಚು-ವೆಚ್ಚದ ಮಾಹಿತಿ ನೀಡಿದ ರಾಜ್ಯ ಸರ್ಕಾರ!

ವಿಶ್ವವಿಖ್ಯಾತ ಮೈಸೂರು ದಸರಾ ಉತ್ಸವದ ಖರ್ಚುವೆಚ್ಚಗಳನ್ನು ಸರ್ಕಾರ ಮುಚ್ಚಿಡುತ್ತಿದೆ ಎಂದು ಕಾಂಗ್ರೆಸ್ ಆರೋಪ ಮಾಡಿದ ಬೆನ್ನಲ್ಲೇ ರಾಜ್ಯ ಸರ್ಕಾರ ಉತ್ಸವದ ಖರ್ಚುವೆಚ್ಚದ ಮಾಹಿತಿಗಳನ್ನು ಮಂಗಳವಾರ ಸರ್ಕಾರ ನೀಡಿದೆ.
ಸಚಿವ ಸೋಮಶೇಖರ್
ಸಚಿವ ಸೋಮಶೇಖರ್

ಮೈಸೂರು: ವಿಶ್ವವಿಖ್ಯಾತ ಮೈಸೂರು ದಸರಾ ಉತ್ಸವದ ಖರ್ಚುವೆಚ್ಚಗಳನ್ನು ಸರ್ಕಾರ ಮುಚ್ಚಿಡುತ್ತಿದೆ ಎಂದು ಕಾಂಗ್ರೆಸ್ ಆರೋಪ ಮಾಡಿದ ಬೆನ್ನಲ್ಲೇ ರಾಜ್ಯ ಸರ್ಕಾರ ಉತ್ಸವದ ಖರ್ಚುವೆಚ್ಚದ ಮಾಹಿತಿಗಳನ್ನು ಮಂಗಳವಾರ ಸರ್ಕಾರ ನೀಡಿದೆ.

2022 ನೇ ಸಾಲಿನ ದಸರಾ ಮಹೋತ್ಸವದ ಖರ್ಚು, ವೆಚ್ಚದ ಲೆಕ್ಕವನ್ನ ಜಿಲ್ಲಾ ಉಸ್ತುವಾರಿ ಸಚಿವ ಎಸ್.ಟಿ ಸೋಮಶೇಖರ್ ಅವರು ಮಂಗಳವಾರ ಮಂಡಿಸಿದರು.

ಮೂಡಾದಿಂದ 10 ಕೋಟಿ, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯಿಂದ 15 ಕೋಟಿ, ಅರಮನೆ ಆಡಳಿತ ಮಂಡಳಿಯಿಂದ 5 ಕೋಟಿ, ಪ್ರಾಯೋಜಕತ್ವದಿಂದ 32 ಲಕ್ಷದ 50 ಸಾವಿರ, ಟಿಕೆಟ್ ಮತ್ತು ಗೋಲ್ಡ್ ಕಾರ್ಡ್ ಮಾರಾಟದಿಂದ 76 ಲಕ್ಷ ಸೇರಿದಂತೆ ಒಟ್ಟು 31 ಕೋಟಿ, 8 ಲಕ್ಷದ 88 ಸಾವಿರದ 819 ರೂ. ಸಂಗ್ರಹವಾಗಿದೆ.

ಮೈಸೂರು ದಸರಾ ಮಹೋತ್ಸವಕ್ಕೆ ಒಟ್ಟು ಖರ್ಚು 26 ಕೋಟಿ, 54 ಲಕ್ಷದ 49 ಸಾವಿರದ 58 ರೂಗಳು. ಮಂಡ್ಯ, ಚಾಮರಾಜನಗರ ಮತ್ತು ಹಾಸನ ದಸರಾಕ್ಕೆ ಒಟ್ಟು ಖರ್ಚು 2 ಕೋಟಿ 20 ಲಕ್ಷ ಖರ್ಚಾಗಿದೆ. ಒಟ್ಟಾರೆ ಖರ್ಚು 28 ಕೋಟಿ, 74 ಲಕ್ಷದ 49 ಸಾವಿರದ 58 ರೂಗಳಾಗಿದೆ. ಉಳಿಕೆ ಹಣ ಒಟ್ಟು 2 ಕೋಟಿ, 34 ಲಕ್ಷದ 39 ಸಾವಿರದ 761 ರೂಗಳು ಉಳಿಕೆಯಾಗಿದೆ ಎಂದು ಮಾಹಿತಿ ನೀಡಿದರು.

ಹಾಗೆಯೇ ಮತ್ತೆ ಜಿಲ್ಲಾಧಿಕಾರಿಗಳ ನೇತೃತ್ವದಲ್ಲಿ ಪರಿಶೀಲನೆ ಮಾಡಲು ಜಿಲ್ಲಾಧಿಕಾರಿಗಳಿಗೆ ಜಿಲ್ಲಾ ಉಸ್ತುವಾರಿ ಸಚಿವ ಎಸ್.ಟಿ ಸೋಮಶೇಖರ್ ಸೂಚನೆ ನೀಡಿದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com