ರಾಜ್ಯದಲ್ಲಿ ನವೀಕರಿಸಬಹುದಾದ ಇಂಧನ ಕ್ಷೇತ್ರದಲ್ಲಿ ಸ್ಟೆರ್ಲೈಟ್ ಪವರ್ ನಿಂದ 50,000 ಕೋಟಿ ರೂ. ಹೂಡಿಕೆ

ವೇದಾಂತ ಗ್ರೂಪ್, ಮುಂದಿನ ಐದು ವರ್ಷಗಳಲ್ಲಿ ನವೀಕರಿಸಬಹುದಾದ ಇಂಧನ ಸಾಮರ್ಥ್ಯವನ್ನು 10 ಪಟ್ಟು ಹೆಚ್ಚಿಸಲು ಯೋಜಿಸಲಾಗಿದ್ದು, ಈ ಕ್ಷೇತ್ರದಲ್ಲಿ ಸುಮಾರು ರೂ. 50,000 ಕೋಟಿ ಬಂಡವಾಳ ಹೂಡಿಕೆ ಮಾಡಲಾಗುವುದು  ಎಂದು ಸ್ಟೆರ್ಲೈಟ್ ಪವರ್ ವ್ಯವಸ್ಥಾಪಕ ನಿರ್ದೇಶಕ ಪ್ರತೀಕ್ ಅಗರ್ ವಾಲ್ ಹೇಳಿದ್ದಾರೆ.
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ
Updated on

ಬೆಂಗಳೂರು: ರಾಜ್ಯದಲ್ಲಿ ಪ್ರಸ್ತುತ ಸುಮಾರು 1,000 ಮೆಗಾ ವ್ಯಾಟ್ ಪವನ ಹಾಗೂ ಸೋಲಾರ್‌ ವಿದ್ಯುತ್‌ ಉತ್ಪಾದನ ಯೋಜನೆ ಯನ್ನು ಅಭಿವೃದ್ಧಿಪಡಿಸಿರುವ ವೇದಾಂತ ಗ್ರೂಪ್, ಮುಂದಿನ ಐದು ವರ್ಷಗಳಲ್ಲಿ ನವೀಕರಿಸಬಹುದಾದ ಇಂಧನ ಸಾಮರ್ಥ್ಯವನ್ನು 10 ಪಟ್ಟು ಹೆಚ್ಚಿಸಲು ಯೋಜಿಸಲಾಗಿದ್ದು, ಈ ಕ್ಷೇತ್ರದಲ್ಲಿ ಸುಮಾರು ರೂ. 50,000 ಕೋಟಿ ಬಂಡವಾಳ ಹೂಡಿಕೆ ಮಾಡಲಾಗುವುದು  ಎಂದು ಸ್ಟೆರ್ಲೈಟ್ ಪವರ್ ವ್ಯವಸ್ಥಾಪಕ ನಿರ್ದೇಶಕ ಪ್ರತೀಕ್ ಅಗರ್ ವಾಲ್ ಹೇಳಿದ್ದಾರೆ.  ಸ್ಟೆರ್ಲೈಟ್ ಪವರ್ ವೇದಾಂತ ಗ್ರೂಪಿನದ್ದಾಗಿದೆ. 

ಜಾಗತಿಕ ಹೂಡಿಕೆದಾರರ ಸಮಾವೇಶದಲ್ಲಿ ಮಾತನಾಡಿದ ಅಗರ್ ವಾಲ್, ಸಾರ್ವಜನಿಕ- ಖಾಸಗಿ ಸಹಭಾಗಿತ್ವದಲ್ಲಿ ಅಂತರ್ ರಾಜ್ಯ ಪ್ರಸರಣವನ್ನು ಅಳವಡಿಸಿಕೊಳ್ಳುವಂತೆ ಕರ್ನಾಟಕ ಸರ್ಕಾರವನ್ನು ಅವರು ಒತ್ತಾಯಿಸಿದರು. ವಿದ್ಯುತ್ ಬಳಕೆಯ ಸಂಖ್ಯೆ ದುಪಟ್ಟಾಗಿ ಬೆಳೆಯುತ್ತಿದದು, ರಾಜ್ಯ ಸರ್ಕಾರ ಗ್ರೀಡ್ ಗಳನ್ನು ನಿರಂತರವಾಗಿ ಬಲಪಡಿಸಬೇಕಾದ ಅಗತ್ಯವಿದೆ. ಈ ಮಾದರಿಯಲ್ಲಿ ಹಲವು ರಾಜ್ಯಗಳು ಈಗಾಗಲೇ ಯಶಸ್ವಿಯಾಗಿರುವುದಾಗಿ ಅವರು ತಿಳಿಸಿದರು. 

ನಾವು ಈಗಾಗಲೇ ಕೇಂದ್ರ ಸರ್ಕಾರದ ಪರವಾಗಿ ಎರಡು ನಿರ್ಣಾಯಕ ಪ್ರಸರಣ ಮಾರ್ಗಗಳನ್ನು ಅಭಿವೃದ್ಧಿಪಡಿಸುತ್ತಿದ್ದೇವೆ, ಒಂದು ಕರ್ನಾಟಕವನ್ನು ಕೇರಳಕ್ಕೆ ಸಂಪರ್ಕಿಸುತ್ತದೆ ಮತ್ತು ಇನ್ನೊಂದು ಗೋವಾ ಮೂಲಕ ಮಹಾರಾಷ್ಟ್ರವನ್ನು ಸಂಪರ್ಕಿಸುತ್ತದೆ. ಮುಂಬರುವ ವರ್ಷಗಳಲ್ಲಿ ನವೀಕರಿಸಬಹುದಾದ ಇಂಧನ ವಿನಿಮಯಕ್ಕೆ ಈ ಎರಡೂ ಮಾರ್ಗಗಳು ನಿರ್ಣಾಯಕವಾಗಿವೆ ಎಂದು ಅವರು ವಿವರಿಸಿದರು.

 ಜಾಗತಿಕವಾಗಿ ಬ್ರಾಂಡ್ ಇಂಡಿಯಾಗೆ ಕರ್ನಾಟಕವು ಅತಿದೊಡ್ಡ ಕೊಡುಗೆಯನ್ನು ನೀಡಿದೆ ಮತ್ತು ನಿರ್ದಿಷ್ಟವಾಗಿ ಬೆಂಗಳೂರು ಭಾರತವನ್ನು ತಂತ್ರಜ್ಞಾನದ ವಿಶ್ವ ಭೂಪಟದಲ್ಲಿ ಇರಿಸಿದೆ. ಎಲೆಕ್ಟ್ರಾನಿಕ್ಸ್ ವಸ್ತುಗಳ ಆಮದನ್ನು ಕಡಿಮೆಗೊಳಿಸುವುದು ಮುಂದಿನ ಉದ್ದೇಶವಾಗಿದೆ ಎಂದು ಅವರು ಹೇಳಿದರು. ಸೆಮಿಕಂಡಕ್ಟರ್ ಗಳ ತಯಾರಿಕೆಯನ್ನು ಆರಂಭಿಸುತ್ತೇವೆ. ಕೊರಿಯಾ ಮತ್ತು ತೈವಾನ್ ನಲ್ಲಿ ಈಗಾಗಲೇ ಪ್ರದರ್ಶನ ಗಾಜುಗಳನ್ನು ಈಗಾಗಲೇ ತಯಾರಿಸುತ್ತಿದ್ದು, ವಿಶ್ವದಲ್ಲಿ ನಾಲ್ಕನೇ ಸ್ಥಾನದಲ್ಲಿರುವುದಾಗಿ ಅವರು ತಿಳಿಸಿದರು. 

ಮುಂಬರುವ ದಿನಗಳಲ್ಲಿ ಎಲೆಕ್ಟ್ರಾನಿಕ್ ವಸ್ತು ರಫ್ತು ಮಾಡುವಲ್ಲಿ ಭಾರತ ಮುಂಚೂಣಿಗೆ ಬರುವ ಕನಸು ನನಸು ಆಗುವಲ್ಲಿ ಕರ್ನಾಟಕ ಪ್ರಮುಖ ಪಾತ್ರ ವಹಿಸಲಿದೆ ಎಂದು ಅವರು ಹೇಳಿದರು. 

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com