ವಿಶೇಷ ಹೂಡಿಕೆ ಪ್ರದೇಶ ಅಧಿನಿಯಮ ಜಾರಿಗೆ ರಾಜ್ಯ ಸಂಪುಟ ನಿರ್ಧಾರ!

ರಾಜ್ಯಕ್ಕೆ ಬಂಡವಾಳ ಹೂಡಿಕೆ ಆಕರ್ಷಿಸಲು ಜಾಗತಿಕ ಹೂಡಿಕೆದಾರರ ಸಮ್ಮೇಳನ ನಡೆಯುತ್ತಿರುವ ಬೆನ್ನಲ್ಲೇ ಉದ್ಯಮ ಮತ್ತು ಹೂಡಿಕೆದಾರರಿಗೆ ಮತ್ತಷ್ಟು ಅನುಕೂಲ ಮಾಡಿಕೊಡಲು 'ಕರ್ನಾಟಕ ವಿಶೇಷ ಹೂಡಿಕೆ ಪ್ರದೇಶ ಅಧಿನಿಯಮ' ಎಂಬ ಹೊಸ ಕಾಯಿದೆ ಜಾರಿಗೆ ರಾಜ್ಯ ಸಚಿವ ಸಂಪುಟ ಸಭೆ ಗುರುವಾರ ನಿರ್ಧಾರ ತೆಗೆದುಕೊಂಡಿದೆ.
ಸಚಿವ ಮಾಧುಸ್ವಾಮಿ
ಸಚಿವ ಮಾಧುಸ್ವಾಮಿ

ಬೆಂಗಳೂರು: ರಾಜ್ಯಕ್ಕೆ ಬಂಡವಾಳ ಹೂಡಿಕೆ ಆಕರ್ಷಿಸಲು ಜಾಗತಿಕ ಹೂಡಿಕೆದಾರರ ಸಮ್ಮೇಳನ ನಡೆಯುತ್ತಿರುವ ಬೆನ್ನಲ್ಲೇ ಉದ್ಯಮ ಮತ್ತು ಹೂಡಿಕೆದಾರರಿಗೆ ಮತ್ತಷ್ಟು ಅನುಕೂಲ ಮಾಡಿಕೊಡಲು 'ಕರ್ನಾಟಕ ವಿಶೇಷ ಹೂಡಿಕೆ ಪ್ರದೇಶ ಅಧಿನಿಯಮ' ಎಂಬ ಹೊಸ ಕಾಯಿದೆ ಜಾರಿಗೆ ರಾಜ್ಯ ಸಚಿವ ಸಂಪುಟ ಸಭೆ ಗುರುವಾರ ನಿರ್ಧಾರ ತೆಗೆದುಕೊಂಡಿದೆ.

ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಜೆ.ಸಿ. ಮಾಧುಸ್ವಾಮಿ ಅವರು ಗುರುವಾರ ಸಚಿವ ಸಂಪುಟ ಸಭೆಯ ಬಳಿಕ ಸುದ್ದಿಗೋಷ್ಠಿಯಲ್ಲಿ ಈ ವಿಷಯ ಪ್ರಕಟಿಸಿದರು.

''ಈ ಅಧಿನಿಯಮದಡಿ ಆರಂಭದಲ್ಲಿ ತುಮಕೂರು ಹಾಗೂ ಧಾರವಾಡ ಜಿಲ್ಲೆಗಳಲ್ಲಿ ವಿಶೇಷ ಹೂಡಿಕೆ ಪ್ರದೇಶಗಳನ್ನು ಅಧಿಸೂಚಿಸಲಾಗುವುದು'' ಎಂದು ಹೇಳಿದರು.

ಈ ಮಸೂದೆಯು ಗುಜರಾತಿನಲ್ಲಿ ಅಸ್ತಿತ್ವದಲ್ಲಿರುವ ಏಕ-ವಿಂಡೋ ಕ್ಲಿಯರೆನ್ಸ್ ಸಿಸ್ಟಮ್ ಆಗಿ ಕಾರ್ಯನಿರ್ವಹಿಸುವ ವಿಶೇಷ ಪ್ರಾಧಿಕಾರವನ್ನು ರಚಿಸಲು ಸರ್ಕಾರಕ್ಕೆ ಅವಕಾಶ ನೀಡುತ್ತದೆ ಎಂದು ತಿಳಿಸಿದರು.

ರಾಜ್ಯ ಮಟ್ಟದ ಹೂಡಿಕೆ ಪ್ರಾಧಿಕಾರ ರಚಿಸಿ ದೊಡ್ಡ ಮಟ್ಟದ ಹೂಡಿಕೆ, ಕೈಗಾರಿಕಾ ವಸಾಹತುವಿನ ಸಂಪೂರ್ಣ ಜವಾಬ್ದಾರಿಯನ್ನು ಅದಕ್ಕೆ ನೀಡಲಾಗುವುದು. ಗ್ರಾಮ ಪಂಚಾಯಿತಿ ಪರವಾನಗಿ ಸೇರಿ ಯಾವೊಂದು ಸಮಸ್ಯೆಯೂ ಹೂಡಿಕೆದಾರರಿಗೆ ಎದುರಾಗಬಾರದು. ಅದಕ್ಕಾಗಿ ಭೂಸ್ವಾಧೀನದಿಂದ ಆರಂಭವಾಗಿ ಇಡೀ ಪ್ರಕ್ರಿಯೆಯನ್ನು ಈ ರಾಜ್ಯ ಮಟ್ಟದ ಪ್ರಾಧಿಕಾರ ನಿರ್ವಹಿಸಲಿದೆ.

ಈ ಯೋಜನೆಗಳಲ್ಲಿಸಂಗ್ರಹವಾಗುವ ತೆರಿಗೆಯಲ್ಲಿ ಸ್ಥಳೀಯ ಸಂಸ್ಥೆಗಳಿಗೆ ಶೇ.30 ಪಾಲು ನೀಡಲಾಗುವುದು. ಈ ಪ್ರಾಧಿಕಾರದಲ್ಲಿಎಲ್ಲಸಂಬಂಧಿತ ಇಲಾಖೆಗಳ ಮುಖ್ಯಸ್ಥರು ನಿರ್ದೇಶಕರಾಗಿ ಇರಲಿದ್ದು, ಉದ್ದಿಮೆ ಚಟುವಟಿಕೆಗಳ ಆರಂಭಿಸುವ ಪ್ರಕ್ರಿಯೆಯಲ್ಲಿಉದ್ಯಮಿಗಳಿಗೆ ಯಾವುದೇ ತೊಡಕು ಎದುರಾಗದಂತೆ ನಿರ್ವಹಣೆ ಮಾಡಲಿದೆ ಎಂದು ವಿವರಿಸಿದರು.

ಸದ್ಯ ಕೆ- ಸ್ವಾನ್‌ ನಲ್ಲಿಡಾಟಾ ಆಧಾರಿತ ಇನ್‌ಫರ್ಮೇಷನ್‌ ಸರ್ವಿಸ್‌ ವ್ಯವಸ್ಥೆಯು ಹಳೆಯದಾಗಿದೆ. ಹೊಸ ಸಿಸ್ಟಂ ಮಾಡಿ, ನಿಯಂತ್ರಣ ಕೇಂದ್ರವನ್ನು ಉನ್ನತೀಕರಿಸಿ ಗ್ರಾಮ ಪಂಚಾಯಿತಿಗಳ ವ್ಯಾಪ್ತಿಗೆ ವಿಸ್ತರಿಸಲು ಪೂರಕವಾಗಿ ಸಂಪುಟ ಈ ತೀರ್ಮಾನ ಕೈಗೊಂಡಿದೆ ಎಂದು ತಿಳಿಸಿದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com