ದೆಹಲಿ ಮೂಲದ ಮಾಡೆಲ್ ಅಪಹರಣದ ವದಂತಿ: ಸತತ 12 ಗಂಟೆಗಳ ಕಾಲ ಬೆಂಗಳೂರು ಪೊಲೀಸರ ಹುಡುಕಾಟ

ದೆಹಲಿ ಮೂಲದ ರೂಪದರ್ಶಿಯೊಬ್ಬಳ ಕಿಡ್ನಾಪ್ ಆಗಿದೆ ಎಂದು ಬಂದ ದೂರಿನ ಅನ್ವಯ, ಪತ್ತೆಗೆ ತೀವ್ರವಾಗಿ ಪ್ರಯತ್ನಿಸುತ್ತಿದ್ದ ಪೂರ್ವ ವಿಭಾಗದ ಪೊಲೀಸರು ಶುಕ್ರವಾರ ಸುಮಾರು 12 ಗಂಟೆಗಳ ಕಾಲ ತೀವ್ರ ಶೋಧ ನಡೆಸಿದ್ದರು.
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ಬೆಂಗಳೂರು:  ದೆಹಲಿ ಮೂಲದ ರೂಪದರ್ಶಿಯೊಬ್ಬಳ ಕಿಡ್ನಾಪ್ ಆಗಿದೆ ಎಂದು ಬಂದ ದೂರಿನ ಅನ್ವಯ, ಪತ್ತೆಗೆ ತೀವ್ರವಾಗಿ ಪ್ರಯತ್ನಿಸುತ್ತಿದ್ದ ಪೂರ್ವ ವಿಭಾಗದ ಪೊಲೀಸರು ಶುಕ್ರವಾರ ಸುಮಾರು 12 ಗಂಟೆಗಳ ಕಾಲ ತೀವ್ರ ಶೋಧ ನಡೆಸಿದ್ದರು.

ಶುಕ್ರವಾರ ಬೆಳಗಿನ ಜಾವ 4.15ರ ಸುಮಾರಿಗೆ ಬಾಣಸವಾಡಿಯ ಸುಬ್ಬಯ್ಯನಪಾಳ್ಯ ರಸ್ತೆಯಲ್ಲಿ ಯುವತಿಯನ್ನು ಕಾರಿನಲ್ಲಿ ಕೂರಿಸಿಕೊಂಡು ಹೋಗುತ್ತಿರುವುದನ್ನು ಕಂಡ ಖಾಸಗಿ ಕಂಪನಿ ಉದ್ಯೋಗಿ ಶೇಖರ್‌ ಎಂಬುವರು ಪೊಲೀಸರಿಗೆ ದೂರು ನೀಡಿದ್ದರು.

12 ಗಂಟೆಗಳ ಸಂಪೂರ್ಣ ತಾಂತ್ರಿಕ, ವೈಜ್ಞಾನಿಕ  ತನಿಖೆಯ ನಂತರ, ಮಾಡೆಲ್ ಹಾನಿಗೊಳಗಾಗಿಲ್ಲ ಆಕೆಯನ್ನು ಅಪಹರಿಸಲಾಗಿಲ್ಲ ಎಂದು ತಿಳಿದು ಪೊಲೀಸರು ನಿರಾಳರಾದರು. ಆಕೆಯ ಶುಗರ್ ಲೆವೆಲ್ ಕಡಿಮೆಯಾದ ಕಾರಣ ತಲೆಸುತ್ತಿದ ಅನುಭವವಾಗುತ್ತಿದ್ದರಿಂದ ಆಕೆಯ ಸ್ನೇಹಿತ ಕಾರಿನೊಳಗೆ ಕೂರಲು ಸಹಾಯ ಮಾಡಿದ ಎಂಬುದಾಗಿ ತಿಳಿದು ಬಂತು.

ಅಪಹರಣ ನಡೆದಿದೆ ಎನ್ನಲಾದ ಸ್ಥಳದಲ್ಲಿ ಬಿಟ್ಟು ಹೋಗಿದ್ದ ದ್ವಿಚಕ್ರ ವಾಹನವನ್ನು ಪೊಲೀಸರು ಠಾಣೆಗೆ ತಂದಿದ್ದಾರೆ. ಶಿವಮೊಗ್ಗ ಆರ್‌ಟಿಒದಲ್ಲಿ ವಾಹನ ನೋಂದಣಿ ಮಾಡಲಾಗಿದ್ದು, ಶಿವಮೊಗ್ಗ ಪೊಲೀಸರು ಮಾಲೀಕರ ಮೊಬೈಲ್ ಫೋನ್ ನಂಬರ್ ಪಡೆಯುವಲ್ಲಿ ಯಶಸ್ವಿಯಾಗಿದ್ದಾರೆ.

 ಶಿವಮೊಗ್ಗದ ಪೊಲೀಸರ ಸಹಾಯದಿಂದ ಅಲ್ಲಿನ ಸ್ಥಳೀಯ ವಿಳಾಸದಲ್ಲಿ ಪರಿಶೀಲಿಸಿದಾಗ ಆ ಸ್ಕೂಟರ್ ಮಾಲೀಕರು ಎರಡು ವರ್ಷಗಳ ಹಿಂದೆಯೇ ಬೆಂಗಳೂರಿಗೆ ಶಿಫ್ಟ್ ಆಗಿರುವುದು ಪತ್ತೆಯಾಗಿದೆ. ಬಳಿಕ‌ ಆಕೆಯ ನಂಬರ್ ಪಡೆದು ಕರೆ ಮಾಡಿದಾಗ ಆಕೆ ಮನೆಯಲ್ಲೇ ಇರುವುದು ತಿಳಿದು ಬಂದಿದ. ಆದ್ರೆ ಅದೇ ಮನೆಯಲ್ಲಿದ್ದ ಮತ್ತೊಬ್ಬಾಕೆ ಬೆಳಿಗ್ಗೆಯೇ ಊರಿಗೆ ಹೋಗುವುದಾಗಿ ಹೊರಟಿದ್ದಳು ಎಂಬುದರ ಮಾಹಿತಿ‌ ಪಡೆದ ಪೊಲೀಸರು ಆಕೆಯ ನಂಬರ್ ಪಡೆದು ಪರಿಶೀಲನೆ ಆರಂಭಿಸಿದ್ದಾರೆ‌. ಆದ್ರೆ ಮತ್ತೊಬ್ಬಾಕೆಯೂ ಸಹ ಕಾಕ್ಸ್ ಟೌನ್ ನ ಸ್ನೇಹಿತರ ಮನೆಯಲ್ಲಿರುವುದು ಖಚಿತವಾಗಿದೆ. ಬಳಿಕ ಬರೋಬ್ಬರಿ ನೂರಕ್ಕೂ ಅಧಿಕ ಸುತ್ತಮುತ್ತಲಿನ ಏರಿಯಾಗಳ ಸಿಸಿಟಿವಿಗಳ ಪರಿಶೀಲನೆಯ ಜೊತೆ ಸುತ್ತಮುತ್ತಲಿನ ‌ಮನೆಗಳಲ್ಲಿ ಪರಿಶೀಲಿಸಿದಾಗ ಕೊನೆಗೂ ಅಸಲಿ ಯುವತಿ ಪತ್ತೆಯಾಗಿದ್ದಾಳೆ.

ಯುವತಿಯ ಹೆಸರು ಅಮೃತ, ದೆಹಲಿ ಮೂಲದ ಮಾಡೆಲ್ ಎಂಬುದು ಬೆಳಕಿಗೆ ಬಂದಿದೆ. ಅಸಲಿಗೆ ನಿನ್ನೆ ಬೆಳಿಗ್ಗೆ ಕ್ಯಾಬ್ ಬುಕ್ ಮಾಡಿಕೊಂಡು ಸ್ನೇಹಿತನ ಮನೆಯಿಂದ ಹೊರಟಿದ್ದ ಅಮೃತಾ ಲೋ ಶುಗರ್ ನಿಂದ ಬಳಲಿ ಕುಸಿದು ಬಿದ್ದಿದ್ದಾಳೆ. ತಕ್ಷಣ ಆಕೆಯ ಸ್ನೇಹಿತ ಎತ್ತಿಕೊಂಡು ಕಾರಲ್ಲಿ ಕರೆದೊಯ್ದು ಮನೆಗೆ ಬಿಟ್ಟು ಬಂದಿದ್ದಾನೆ. ಇದನ್ನ ಗಮನಿಸಿದ್ದ ಶೇಖರ್ 112 ಗೆ ಕರೆ ಮಾಡಿ ಅಪಹರಣ ಅಂತ ದೂರು ಕೊಟ್ಟಿದ್ದಾನೆ. ಏನೇ ಇದ್ರೂ ನಿರ್ಲಕ್ಷ್ಯಿಸದೇ ತ್ವರಿತ ಕಾರ್ಯಾಚರಣೆ ಕೈಗೊಂಡ ಪೊಲೀಸರು ಅಂತಿಮವಾಗಿ ನೆಮ್ಮದಿಯ ನಿಟ್ಟುಸಿರು ಬಿಟ್ಟಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com