
ಸಾಂದರ್ಭಿಕ ಚಿತ್ರ
ಮಡಿಕೇರಿ: ನಕಲಿ ವೀಸಾ ದಂಧೆಯಲ್ಲಿ ಕೋಟ್ಯಂತರ ರೂಪಾಯಿ ವಂಚಿಸಿದ್ದ ಆರೋಪಿಯನ್ನು ಮಡಿಕೇರಿ ಗ್ರಾಮಾಂತರ ಠಾಣೆ ಪೊಲೀಸರು ಮಂಗಳವಾರ ಬಂಧಿಸಿದ್ದಾರೆ.
ಕಾಸರಗೋಡು ನಿವಾಸಿ ಶ್ರೀನಾಥ್ ಬಂಧಿತ ಆರೋಪಿ. ಆರೋಪಿಯು ನಕಲಿ ವೀಸಾ ದಂಧೆಯಲ್ಲಿ 60ಕ್ಕೂ ಹೆಚ್ಚು ಗ್ರಾಹಕರಿಗೆ ವಂಚಿಸಿದ್ದಾನೆ.
ಅಕ್ಟೋಬರ್ 29 ರಂದು ಮಡಿಕೇರಿ ತಾಲೂಕಿನ ಚೆಂಬು ಗ್ರಾಮದ ನಿವಾಸಿ ಜೇಮ್ಸ್ ಜೋಸೆಫ್ ಎಂಬುವರು ಆರೋಪಿ ಶ್ರೀನಿನಾಥ್ ವಿರುದ್ಧ ಮಡಿಕೇರಿ ಗ್ರಾಮಾಂತರ ಪೊಲೀಸರಿಗೆ ದೂರು ನೀಡಿದ್ದರು.
ಇದನ್ನು ಓದಿ: ಮಡಿಕೇರಿ: ಕಣಿವೆಯ ತೂಗು ಸೇತುವೆ ಶಿಥಿಲ; ಬೇಕಿದೆ ಕಾಯಕಲ್ಪ
ಆರೋಪಿಯು 60ಕ್ಕೂ ಹೆಚ್ಚು ಗ್ರಾಹಕರಿಗೆ ವಂಚಿಸಿದ್ದು, ಗ್ರಾಹಕರಿಗೆ ವಿದೇಶದಲ್ಲಿ ಉದ್ಯೋಗ ಕೊಡಿಸುವುದಾಗಿ ಹೇಳಿ ಕೋಟ್ಯಂತರ ರೂಪಾಯಿ ವಂಚನೆ ಮಾಡಿರುವುದು ತನಿಖೆಯಿಂದ ಬೆಳಕಿಗೆ ಬಂದಿದೆ.
ಆರೋಪಿಯು ಪೋರ್ಚುಗಲ್, ಜೆಕ್ ರಿಪಬ್ಲಿಕ್, ದಕ್ಷಿಣ ಕೊರಿಯಾ ಮತ್ತು ಇತರ ದೇಶಗಳಲ್ಲಿ ಯುವಕರಿಗೆ ಉದ್ಯೋಗ ನೀಡುವುದಾಗಿ ಭರವಸೆ ನೀಡಿದ್ದಲ್ಲದೆ, ಈ ಯುವಕರಿಂದ ಲಕ್ಷಗಟ್ಟಲೆ ಹಣವನ್ನು ಸಂಗ್ರಹಿಸಿದ್ದನು. ಯುವಕರಿಗೆ ಕೌಶಲ್ಯರಹಿತ ಕಾರ್ಮಿಕ ವೀಸಾ ನೀಡುವುದಾಗಿ ಭರವಸೆ ನೀಡಿ ಅವರಿಂದ ಲಕ್ಷಗಟ್ಟಲೆ ಹಣ ವಸೂಲಿ ಮಾಡಿದ್ದರು.
ವೀಸಾಗಾಗಿ ಆರೋಪಿಗಳಿಗೆ 1.50 ಲಕ್ಷದಿಂದ 4.50 ಲಕ್ಷದವರೆಗೆ ಹಣ ವರ್ಗಾವಣೆ ಮಾಡಿದ್ದ ಜಿಲ್ಲೆಯ ಹಲವಾರು ಯುವಕರು ವೀಸಾಗಾಗಿ ಕಾಯುತ್ತಿದ್ದರೂ ಎನ್ನಲಾಗಿದೆ.
ಜೇಮ್ಸ್ ನೀಡಿದ ದೂರಿನ ಮೇರೆಗೆ ಆರೋಪಿಗಳಿಂದ ವಂಚನೆಗೆ ಒಳಗಾದ ಹಲವಾರು ಯುವಕರು ಆರೋಪಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವಂತೆ ಮಡಿಕೇರಿ ಠಾಣೆಗೆ ಭೇಟಿ ನೀಡಿ ಒತ್ತಾಯಿಸಿದ್ದಾರೆ. ಸದ್ಯ ಆರೋಪಿಯನ್ನು ವಶಕ್ಕೆ ಪಡೆಯಲಾಗಿದ್ದು, ಹೆಚ್ಚಿನ ತನಿಖೆ ಮುಂದುವರಿದಿದೆ.