ಪ್ರಧಾನಿ ಮೋದಿ ಬರುವ ಹಾದಿಯಲ್ಲಿ...: ರಸ್ತೆ ಸಂಚಾರ ನಿರ್ಬಂಧ ಎಲ್ಲೆಲ್ಲಿ? ಇಲ್ಲಿದೆ ಸಂಪೂರ್ಣ ಮಾಹಿತಿ

ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು ನ. 11ರಂದು ನಗರಕ್ಕೆ ಆಗಮಿಸಲಿದ್ದು, ಅವರ ಸಂಚಾರಕ್ಕೆ ಅನುಕೂಲ ಕಲ್ಪಿಸುವುದಕ್ಕಾಗಿ ಪ್ರಮುಖ ರಸ್ತೆಗಳಲ್ಲಿ ಸಾರ್ವಜನಿಕರ ವಾಹನಗಳ ಓಡಾಟ ನಿರ್ಬಂಧಿಸಲಾಗಿದೆ.
ವಿಧಾನಸೌಧ
ವಿಧಾನಸೌಧ

ಬೆಂಗಳೂರು: ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು ನ. 11ರಂದು ನಗರಕ್ಕೆ ಆಗಮಿಸಲಿದ್ದು, ಅವರ ಸಂಚಾರಕ್ಕೆ ಅನುಕೂಲ ಕಲ್ಪಿಸುವುದಕ್ಕಾಗಿ ಪ್ರಮುಖ ರಸ್ತೆಗಳಲ್ಲಿ ಸಾರ್ವಜನಿಕರ ವಾಹನಗಳ ಓಡಾಟ ನಿರ್ಬಂಧಿಸಲಾಗಿದೆ.

ಸಿಟಿಒ ಜಂಕ್ಷನ್, ಪೊಲೀಸ್ ತಿಮ್ಮಯ್ಯ ಜಂಕ್ಷನ್, ರಾಜಭವನ ರಸ್ತೆ, ಬಸವೇಶ್ವರ ವೃತ್ತ, ಅರಮನೆ ರಸ್ತೆ, ರೇಸ್ ಕೋರ್ಸ್ ರಸ್ತೆ, ಸ್ಯಾಂಕಿ ರಸ್ತೆ, ಕ್ವೀನ್ಸ್ ರಸ್ತೆ, ಬಳ್ಳಾರಿ ರಸ್ತೆ, ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಎಲಿವೇಟೆಡ್ ಕಾರಿಡಾರ್, ಶೇಷಾದ್ರಿ ರಸ್ತೆ (ಮಹಾರಾಣಿ ಕಾಲೇಜು ಸೇತುವೆಯಿಂದ ರೈಲು ನಿಲ್ದಾಣದವರೆಗೆ), ಕೆ.ಜಿ. ಶಾಂತಲಾ ಜಂಕ್ಷನ್‌ನಿಂದ ಮೈಸೂರು ಬ್ಯಾಂಕ್ ವೃತ್ತ), ವಾಟಾಳ್ ನಾಗರಾಜ್ ರಸ್ತೆ (ಖೋಡೆ ಅಂಡರ್‌ಪಾಸ್‌ನಿಂದ ಪಿಎಫ್‌ಗೆ) ಮತ್ತು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಸುತ್ತಲಿನ ರಸ್ತೆಗಳಲ್ಲಿ ಶುಕ್ರವಾರ ಬೆಳಗ್ಗೆ 8 ರಿಂದ ಮಧ್ಯಾಹ್ನ 2 ಗಂಟೆಯವರೆಗೆ ಈ ಕೆಳಗಿನ ರಸ್ತೆಗಳಲ್ಲಿ ವಾಹನಗಳ ಸಂಚಾರವನ್ನು ನಿಷೇಧಿಸಲಾಗಿದ್ದು, ಸಾರ್ವಜನಿಕರು ಪರ್ಯಾಯ ಮಾರ್ಗಗಳಲ್ಲಿ ಸಂಚರಿಸುವಂತೆ ಸೂಚಿಸಲಾಗಿದೆ.

‘ವಿಧಾನಸೌಧ, ರೈಲು ನಿಲ್ದಾಣ ಹಾಗೂ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ ಕಾರ್ಯಕ್ರಮಗಳಲ್ಲಿ ಪ್ರಧಾನ ಮಂತ್ರಿ ಪಾಲ್ಗೊಳ್ಳಲಿದ್ದಾರೆ. ಅವರ ಭದ್ರತೆ ದೃಷ್ಟಿಯಿಂದ ಸಾರ್ವಜನಿಕರ ವಾಹನಗಳಿಗೆ ನಿರ್ಬಂಧ ವಿಧಿಸಲಾಗಿದೆ. ಸಾರ್ವಜನಿಕರು ಬದಲಿ ಮಾರ್ಗದಲ್ಲಿ ಸಂಚರಿಸಬೇಕು. ಪ್ರತಿಯೊಂದು ರಸ್ತೆಯಲ್ಲೂ ಪೊಲೀಸರನ್ನು ಕರ್ತವ್ಯಕ್ಕೆ ನಿಯೋಜಿಸಲಾಗಿದೆ’ ಎಂದು ಪೊಲೀಸರು ತಿಳಿಸಿದ್ದಾರೆ.

‘ಬೆಳಿಗ್ಗೆ 7ರಿಂದ ಮಧ್ಯಾಹ್ನ 3ಗಂಟೆವರೆಗೆ ನಗರದಲ್ಲಿ ಭಾರಿ ವಾಹನಗಳ ಸಂಚಾರವನ್ನು ನಿಷೇಧಿಸಲಾಗಿದೆ. ಹಲವೆಡೆ ದಟ್ಟಣೆ ಉಂಟಾಗುವ ಸಾಧ್ಯತೆಯೂ ಇದೆ’ ಎಂದಿದ್ದಾರೆ.

ಕೆಆರ್ ಪುರಂ, ರಿಂಗ್ ರಸ್ತೆಯಿಂದ ಟಿನ್ ಫ್ಯಾಕ್ಟರಿ, ರಾಮಮೂರ್ತಿ ನಗರ, ಹೆಣ್ಣೂರು ಮುಖ್ಯರಸ್ತೆ, ಬೈರತಿ ಕ್ರಾಸ್, ಹೊಸೂರು ಬಂಡೆ, ಬಾಗಲೂರು ಬಸ್ ನಿಲ್ದಾಣ, ಮೈಲನಹಳ್ಳಿ ಕ್ರಾಸ್ ಮೂಲಕ ಬೇಗೂರು ಬ್ಯಾಕ್ ಗೇಟ್ ಮೂಲಕ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ತಲುಪಬಹುದಾಗಿದೆ.

ಕಂಟೋನ್ಮೆಂಟ್ ಪ್ರದೇಶದಿಂದ, ಜೆ.ಸಿ.ನಗರ, ಆರ್.ಟಿ.ನಗರ: ಜಯಮಹಲ್ ರಸ್ತೆ, ಸಿಕ್ಯೂಎಎಲ್ ಕ್ರಾಸ್, ವಾಟರ್ ಟ್ಯಾಂಕ್ ಜಂಕ್ಷನ್, ಪಿಆರ್‌ಟಿಸಿ ಜಂಕ್ಷನ್, ದೇವೇಗೌಡ ರಸ್ತೆ, ದಿನ್ನೂರು ಜಂಕ್ಷನ್, ಕಾವಲ್ ಬೈರಸಂದ್ರ ರಸ್ತೆ, ನಾಗವಾರ ಜಂಕ್ಷನ್, ಹೆಣ್ಣೂರು ಕ್ರಾಸ್, ಕೊತ್ತನೂರು, ಕಣ್ಣೂರು, ಬಾಗಲೂರು ವೃತ್ತ, ಹೂವಿನನಾಯಕನಹಳ್ಳಿ ಕ್ರಾಸ್, ಬಂಡಿನಾಯಕನಹಳ್ಳಿ ಕ್ರಾಸ್, ಬಂಡಿನಹಳ್ಳಿ ರಸ್ತೆ ಮೈಲನಹಳ್ಳಿ ಕ್ರಾಸ್, ಬೇಗೂರು ಹಿಂದಿನ ಗೇಟ್ ಗೆ ತಲುಪಬಹುದಾಗಿದೆ.

ತುಮಕೂರು ರಸ್ತೆಯಿಂದ  ರಿಂಗ್ ರೋಡ್: ಗೊರಗುಂಟೆಪಾಳ್ಯ, ಬಿಇಎಲ್ ಜಂಕ್ಷನ್, ಗಂಗಮ್ಮನಗುಡಿ ವೃತ್ತ, ಎಂಎಸ್ ಪಾಳ್ಯ, ಯಲಹಂಕ ಮದರ್ ಡೈರಿ ಜಂಕ್ಷನ್, ಮೇಜರ್ ಸಂದೀಪ್ ಉಣ್ಣಿಕೃಷ್ಣನ್ ಜಂಕ್ಷನ್, ನಾಗೇನಹಳ್ಳಿ ಗೇಟ್, ಸಿಂಗನಾಯನಕನಹಳ್ಳಿ, ರಾಜಾನುಕುಂಟೆ, ಎಂವಿಐಟಿ ಜಂಕ್ಷನ್, ವಿದ್ಯಾನಗರ ಅಂಡರ್‌ಪಾಸ್, ಉತ್ತನಹಳ್ಳಿ,  ಬಗಲನೂರು ರಸ್ತೆ, ಬಂಡಿಕೊಡಿಗೆಹಳ್ಳಿ, ಮೈಲನಹಳ್ಳಿ, ಗಾಲಮ್ಮ ಕ್ರಾಸ್, ವಿಮಾನ ನಿಲ್ದಾಣದ ಹಿಂದಿನ ಗೇಟ್ ತಲುಪಬಹುದಾಗಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com