ಯಾವುದೇ ತಪ್ಪಿಲ್ಲದಿದ್ದರೂ ಮೆಮೋ: ಬೆಂಗಳೂರು ಸಂಚಾರಿ ಪೊಲೀಸರ ಅಳಲು

ಸಂಚಾರಿ ನಿಯಮ ಉಲ್ಲಂಘಿಸಿದ ವಾಹನಗಳ ಫೋಟೋ ತೆಗೆಯುವ ವಿಚಾರಕ್ಕೆ ಸಂಬಂಧಿಸಿದಂತೆ ಯಾವುದೇ ತಪ್ಪಿಲ್ಲದಿದ್ದರೂ ಮೆಮೋ ಪಡೆಯುತ್ತಿರುವುದರಿಂದ ನಗರದ ಸಂಚಾರಿ ಪೊಲೀಸರು ಅಸಮಾಧಾನಗೊಂಡಿದ್ದು, ತಮ್ಮ ಸಂಕಟವನ್ನು ಇಲಾಖೆ ಮುಖ್ಯಸ್ಥರಾದ ಎಂ.ಎ ಸಲೀಂ ಅವರು ಅರ್ಥ ಮಾಡಿಕೊಳ್ಳಬೇಕಾಗಿದೆ ಎಂದು ಮನವಿ ಮಾಡಿದ್ದಾರೆ. 
ಟ್ರಾಫಿಕ್ ಉಲ್ಲಂಘನೆಯಲ್ಲಿ ಭಾಗಿಯಾಗದ ವ್ಯಕ್ತಿಗೆ ನೋಟಿಸ್ ಕಳುಹಿಸಲು ಕಾರಣವಾಗುವ ಬೈಕ್ ಮತ್ತು ಸ್ಕೂಟರ್‌ನ ಟ್ಯಾಂಪರ್ಡ್ ಲೈಸೆನ್ಸ್ ಪ್ಲೇಟ್‌ಗಳು
ಟ್ರಾಫಿಕ್ ಉಲ್ಲಂಘನೆಯಲ್ಲಿ ಭಾಗಿಯಾಗದ ವ್ಯಕ್ತಿಗೆ ನೋಟಿಸ್ ಕಳುಹಿಸಲು ಕಾರಣವಾಗುವ ಬೈಕ್ ಮತ್ತು ಸ್ಕೂಟರ್‌ನ ಟ್ಯಾಂಪರ್ಡ್ ಲೈಸೆನ್ಸ್ ಪ್ಲೇಟ್‌ಗಳು

ಬೆಂಗಳೂರು: ಸಂಚಾರಿ ನಿಯಮ ಉಲ್ಲಂಘಿಸಿದ ವಾಹನಗಳ ಫೋಟೋ ತೆಗೆಯುವ ವಿಚಾರಕ್ಕೆ ಸಂಬಂಧಿಸಿದಂತೆ ಯಾವುದೇ ತಪ್ಪಿಲ್ಲದಿದ್ದರೂ ಮೆಮೋ ಪಡೆಯುತ್ತಿರುವುದರಿಂದ ನಗರದ ಸಂಚಾರಿ ಪೊಲೀಸರು ಅಸಮಾಧಾನಗೊಂಡಿದ್ದು, ತಮ್ಮ ಸಂಕಟವನ್ನು ಇಲಾಖೆ ಮುಖ್ಯಸ್ಥರಾದ ಎಂ.ಎ ಸಲೀಂ ಅವರು ಅರ್ಥ ಮಾಡಿಕೊಳ್ಳಬೇಕಾಗಿದೆ ಎಂದು ಮನವಿ ಮಾಡಿದ್ದಾರೆ. 

ಕರ್ತವ್ಯ ನಿರತ ಪೊಲೀಸ್ ಅಧಿಕಾರಿಗಳು ನಿಯಮ ಉಲ್ಲಂಘಿಸುತ್ತಿರುವ ವಾಹನವನ್ನು ಗಮನಿಸಿದಾಗ ತಿದ್ದಿರುವ ನಂಬರ್ ಪ್ಲೇಟ್ ತಿಳಿಯದೆ  ಅದರ ಚಿತ್ರವನ್ನು ಕ್ಲಿಕ್ ಮಾಡಿ ಅದನ್ನು ಇಲಾಖೆಯ ವೆಬ್‌ಸೈಟ್‌ಗೆ ಅಪ್‌ಲೋಡ್  ಮಾಡಲಾಗುತ್ತದೆ. ಒಂದು ವೇಳೆ ನಂಬರ್ ಪ್ಲೇಟ್ ತಿದ್ದುಪಡಿ ಮಾಡಿದಾಗ ಅಪರಾಧದಲ್ಲಿ ಭಾಗಿಯಾಗದ ವ್ಯಕ್ತಿಯು ನೋಟಿಸ್ ಪಡೆಯುತ್ತಾನೆ. ಆಗ ಆ ವ್ಯಕ್ತಿ ನೋಟಿಸ್ ನ್ನು ಪ್ರಶ್ನಿಸಿದಾಗ ಯಾವುದೇ ತಪ್ಪಿಲ್ಲದಿದ್ದರೂ ಫೋಟೋವನ್ನು ಅಪ್ ಲೋಡ್ ಮಾಡಿದ ಪೊಲೀಸರಿಗೆ ಮೆಮೋ ನೀಡಲಾಗುತ್ತಿದೆ ಎಂದು ಬ್ಯಾಟರಾಯನಪುರ ಸಂಚಾರಿ ಠಾಣೆ ಪೊಲೀಸರೊಬ್ಬರು ಹೇಳಿದರು. 

'ಯಾವುದೇ ಉಲ್ಲಂಘನೆ ಮಾಡದಿದ್ದರೂ ನೋಟಿಸ್ ಪಡೆದಿದ್ದೇನೆ. ವಾಹನಗಳ ಮಾಲೀಕರು ನಂಬರ್ ಪ್ಲೇಟ್ ಮುಚ್ಚಿದಾಗ ಅಥವಾ ಅದನ್ನು ತಿದ್ದುಪಡಿ ಮಾಡಿದಾಗ ಸಂಚಾರಿ ನಿಯಮ ಉಲ್ಲಂಘನೆಯಾಗುತ್ತದೆ. ಕೆಲವೊಂದು ವಾಹನಗಳ ಫೋಟೋ ತೆಗೆದು ವೆಬ್ ಸೈಟ್ ನಲ್ಲಿ ಅಪ್ ಲೋಡ್ ಮಾಡಿದ್ದೇನೆ.  ಆದರೆ ಅಪರಾಧಿ ಮಾಡಿದ ಕೃತ್ಯದಿಂದಾಗಿ ಪ್ರಾಮಾಣಿಕ ಕಾನ್‌ಸ್ಟೆಬಲ್‌ಗಳಿಗೆ ಮೆಮೋ ಬರುತ್ತಿದೆ ಎಂದು ಅವರು ತಿಳಿಸಿದರು. 

ಇಂತಹ ಪ್ರಕರಣಗಳನ್ನು ಗಮಿಸಿದ್ದರೂ ಇತರ ಕೆಲ ವಾಹನಗಳ ಮಾಲೀಕರು ನೋಟಿಸ್ ಪಡೆಯಬಹುದು ಎಂಬ ಆತಂಕದಿಂದ ವೆಬ್ ಸೈಟ್ ಗೆ ಫೋಟೋ ಅಪ್ ಲೋಡ್ ಮಾಡುವುದಕ್ಕೆ ಕಡಿವಾಣ ಹಾಕುತ್ತಿರುವುದಾಗಿ ಕೆಜಿ ಹಳ್ಳಿ ಸಂಚಾರಿ ಠಾಣೆಯ ಸಹಾಯಕ ಸಬ್ ಇನ್ಸ್ ಪೆಕ್ಟರ್ ರೊಬ್ಬರು ಹೇಳಿದರು. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com