ಮಂಗಳೂರಿನಲ್ಲಿ ಆಟೋ ಸ್ಫೋಟ: ಸ್ಥಳಕ್ಕೆ ಎಡಿಜಿಪಿ ಅಲೋಕ್ ಕುಮಾರ್ ಭೇಟಿ, ಪರಿಶೀಲನೆ

ಶನಿವಾರ ಸಂಜೆ ಆಟೋರಿಕ್ಷಾ ಸ್ಫೋಟ ಸಂಭವಿಸಿದ ಸ್ಥಳಕ್ಕೆ ಭಾನುವಾರ ಭೇಟಿ ನೀಡಿದ ಎಡಿಜಿಪಿ ಅಲೋಕ್ ಕುಮಾರ್, ಘಟನೆಗೆ ಸಂಬಂಧಿಸಿದ ಮಾಹಿತಿಯನ್ನು ಸಂಗ್ರಹಿಸಿದರು.
ಎಡಿಜಿಪಿ ಅಲೋಕ್ ಕುಮಾರ್
ಎಡಿಜಿಪಿ ಅಲೋಕ್ ಕುಮಾರ್

ಮಂಗಳೂರು: ಶನಿವಾರ ಸಂಜೆ ಆಟೋರಿಕ್ಷಾ ಸ್ಫೋಟ ಸಂಭವಿಸಿದ ಸ್ಥಳಕ್ಕೆ ಭಾನುವಾರ ಭೇಟಿ ನೀಡಿದ ಎಡಿಜಿಪಿ ಅಲೋಕ್ ಕುಮಾರ್, ಘಟನೆಗೆ ಸಂಬಂಧಿಸಿದ ಮಾಹಿತಿಯನ್ನು ಸಂಗ್ರಹಿಸಿದರು.

ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಆಟೋ ರಿಕ್ಷಾ ಸ್ಫೋಟದಲ್ಲಿ ಗಾಯಗೊಂಡ ಇಬ್ಬರು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಸ್ಫೋಟದಿಂದ ಶಂಕಿತನಿಗೆ ಶೇ. 45 ರಷ್ಟು ಗಾಯವಾಗಿದೆ. ಕೈ ಸನ್ನೆ ಮೂಲಕ ಆತ ಉತ್ತರಿಸುತ್ತಿದ್ದಾನೆ. ಪಂಪ್ ವೆಲ್ ಗೆ ಹೋಗಲು ಆಟೋ ಬುಕ್ ಮಾಡಿದ್ದಾಗಿ ಹೇಳಿರುವುದಾಗಿ ತಿಳಿಸಿದರು.  

ವಿಚಾರಣೆಯಿಂದ ಹಲವಾರು ಮಾಹಿತಿಗಳು ಬಂದಿವೆ. ಶಂಕಿತ ವ್ಯಕ್ತಿಯನ್ನು ಗುರುತಿಸಿಲು ಅವರ ಸಂಬಂಧಿಕರಿಗೆ ತಿಳಿಸಿದ್ದೇವೆ.  ಇಂದು ಮಧ್ಯರಾತ್ರಿ ಅವರ ಸಂಬಂಧಿಕರು ನಗರಕ್ಕೆ ಆಗಮಿಸಬಹುದು, ಶಂಕಿತ ವ್ಯಕ್ತಿ ಯಾರನ್ನು ಭೇಟಿ ಮಾಡಿದ್ದಾನೆ ಎಂಬುದನ್ನು ಪತ್ತೆ ಹಚ್ಚಲು ಹೆಚ್ಚಿನ ತನಿಖೆ ನಡೆಸಬೇಕಾಗಿದೆ ಎಂದು ಅಲೋಕ್ ಕುಮಾರ್ ಹೇಳಿದರು.

ವಿವಿಧ ಆಯಾಮಗಳಲ್ಲಿ ತನಿಖೆ ನಡೆಸಲಾಗುವುದು. ಎನ್‌ಐಎ ತಂಡ ತನಿಖೆ ನಡೆಸುತ್ತಿದೆ. ಶಂಕಿತ ವ್ಯಕ್ತಿಯ ಗುರುತನ್ನು ಡಿಎನ್‌ಎ ಪರೀಕ್ಷೆಗಳ ಮೂಲಕ ಅಥವಾ ಕುಟುಂಬ ಸದಸ್ಯರಿಂದ ಪತ್ತೆಹಚ್ಚಬೇಕಾಗಿದೆ, ಆದ್ದರಿಂದ, ಅವರ ಕುಟುಂಬ ಸದಸ್ಯರನ್ನು ಬರಲು ಹೇಳಲಾಗಿದೆ ಎಂದು ಅವರು ಹೇಳಿದರು.

ಇದು ಕಡಿಮೆ-ತೀವ್ರತೆಯ ಐಇಡಿ ಸ್ಫೋಟವಾಗಿದೆ. ಪ್ರದೇಶದಲ್ಲಿ ಸಾಮರಸ್ಯವನ್ನು ಕದಡುವ ಪ್ರಯತ್ನವಾಗಿದ್ದು, ಅದನ್ನು ತಪ್ಪಿಸಲಾಗಿದೆ. ಕೊಯಮತ್ತೂರು ಸ್ಫೋಟ ಮಾಡಿದವರೇ ಇದನ್ನು ಮಾಡಿದ್ದಾರೆ ಎಂಬುದಾಗಿ ಹೇಳಲು ನಮಗೆ ಯಾವುದೇ ಮಾಹಿತಿ ಇಲ್ಲ ಎಂದು ಅಲೋಕ್ ಕುಮಾರ್ ತಿಳಿಸಿದರು. 
 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com