ಮಂಗಳೂರು ಆಟೋ ಸ್ಫೋಟ: ಉಗ್ರ ಪ್ರಕರಣದಲ್ಲಿ ಈ ಹಿಂದೆಯೂ ಬಂಧನಕ್ಕೊಳಗಾಗಿದ್ದ ಪ್ರಯಾಣಿಕ ಶಾರೀಕ್ 

ಮಂಗಳೂರಿನಲ್ಲಿ ಆಟೋ ಸ್ಫೋಟಗೊಂಡಾಗ ಅದರಲ್ಲಿ ಪ್ರಯಾಣಿಸುತ್ತಿದ್ದ ವ್ಯಕ್ತಿಯನ್ನು ಮೊಹಮ್ಮದ್ ಶಾರೀಕ್ (24) ಎಂದು ಗುರುತಿಸಲಾಗಿದ್ದು, ಈ ಹಿಂದೆಯೂ ಆತ ಭಯೋತ್ಪಾದನೆ ಪ್ರಕರಣವೊಂದರಲ್ಲಿ ಬಂಧನಕ್ಕೊಳಗಾಗಿದ್ದ ಎಂದು ತಿಳಿದುಬಂದಿದೆ. 
ಶಾರೀಕ್
ಶಾರೀಕ್

ಮಂಗಳೂರು: ಮಂಗಳೂರಿನಲ್ಲಿ ಆಟೋ ಸ್ಫೋಟಗೊಂಡಾಗ ಅದರಲ್ಲಿ ಪ್ರಯಾಣಿಸುತ್ತಿದ್ದ ವ್ಯಕ್ತಿಯನ್ನು ಮೊಹಮ್ಮದ್ ಶಾರೀಕ್ (24) ಎಂದು ಗುರುತಿಸಲಾಗಿದ್ದು, ಈ ಹಿಂದೆಯೂ ಆತ ಭಯೋತ್ಪಾದನೆ ಪ್ರಕರಣವೊಂದರಲ್ಲಿ ಬಂಧನಕ್ಕೊಳಗಾಗಿದ್ದ ಎಂದು ತಿಳಿದುಬಂದಿದೆ. 

ಗೋಡೆಯ ಮೇಲೆ ಭಯೋತ್ಪಾದಕ ಬರಹ ಬರೆದಿದ್ದ ಪ್ರಕರಣದಲ್ಲಿ ಶರೀಕ್ ನ್ನು 2020 ರ ನವೆಂಬರ್ ನಲ್ಲಿ ಬಂಧಿಸಲಾಗಿತ್ತು. ಆತ ಇತ್ತೀಚೆಗಷ್ಟೇ ಜಾಮೀನು ಪಡೆದು ಹೊರಬಂದಿದ್ದ.

ತೀರ್ಥಹಳ್ಳಿಯವನಾದ ಶಾರೀಕ್ ಪ್ರೇಮ್ ರಾಜ್ ಎಂಬ ಹೆಸರಿನಲ್ಲಿ ತನಗೆ ನಕಲಿ ಗುರುತಿನ ಚೀಟಿ ಮಾಡಿಸಿಕೊಂಡು ಆಟೋದಲ್ಲಿ ಕುಕ್ಕರ್ ಐಇಡಿಯೊಂದಿಗೆ ತೆರಳುತ್ತಿದ್ದ. ಈ ವೇಳೆ ಸ್ಫೋಟ ಸಂಭವಿಸಿದ್ದು, ಆಟೋ ಚಾಲಕ ಪುರುಷೋತ್ತಮ್ ಗೂ ತೀವ್ರ ಗಾಯಗಳಾಗಿದೆ. 

ಮಂಗಳೂರಿನಲ್ಲಿ ಕಂಕನಾಡಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ. ಡಿಜಿಪಿ ಹಾಗೂ ಐಜಿಪಿ ಪ್ರವೀಣ್ ಸೂದ್ ಈ ಬಗ್ಗೆ ಮಾಹಿತಿ ನೀಡಿದ್ದು, ಇದು ಆಕಸ್ಮಿಕವಲ್ಲ, ಭಯೋತ್ಪಾದನೆಯ ಕೃತ್ಯ ಎಂದು ಹೇಳಿದ್ದರು. 

ಪ್ರಾಥಮಿಕ ವರದಿಗಳ ಪ್ರಕಾರ ಆರೋಪಿ ಶಾರೀಕ್ ಐಇಡಿಯನ್ನು ನಿರ್ದಿಷ್ಟ ಗುರಿಯೊಂದಿಗೆ ಅಳವಡಿಸಲು ಉದ್ದೇಶಿಸಿದ್ದ. ಆದರೆ ಆಟೋ ರಿಕ್ಷಾದಲ್ಲೇ ಸ್ಫೋಟಗೊಂಡಿದೆ.  ವಿಧಿವಿಜ್ಞಾನ ತಂಡ ತನಿಖೆ ಪ್ರಾರಂಭಿಸಿದ್ದು, ಪ್ರೆಷರ್ ಕುಕ್ಕರ್ ನ ಒಳಗೆ ಸರ್ಕ್ಯೂಟ್ ಮತ್ತು ಟೈಮರ್ ಪತ್ತೆಯಾಗಿತ್ತು ಎಂದು ಮೂಲಗಳು ತಿಳಿಸಿವೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com