ಪಿಎಸ್ಐ ನೇಮಕಾತಿ ಹಗರಣದಲ್ಲಿ ಅಭ್ಯರ್ಥಿ ನೀಡಿದ ಗರಿಷ್ಠ ಲಂಚದ ಮೊತ್ತ 85 ಲಕ್ಷ ರೂ.: ಸಿಐಡಿ ಬಹಿರಂಗ
ಪೊಲೀಸ್ ಸಬ್ ಇನ್ಸ್ ಪೆಕ್ಟರ್ ನೇಮಕಾತಿ ಹಗರಣದ ತನಿಖೆ ನಡೆಸುತ್ತಿರುವ ಅಪರಾಧ ತನಿಖಾ ದಳ(CID), ಆರೋಪಿಗಳಿಂದ 3.11 ಕೋಟಿ ರೂಪಾಯಿ ವಶಪಡಿಸಿಕೊಳ್ಳಲಾಗಿದೆ ಎಂದು ತಿಳಿಸಿದೆ.
Published: 22nd November 2022 09:15 AM | Last Updated: 22nd November 2022 03:55 PM | A+A A-

ಸಾಂದರ್ಭಿಕ ಚಿತ್ರ
ಬೆಂಗಳೂರು: ಪೊಲೀಸ್ ಸಬ್ ಇನ್ಸ್ ಪೆಕ್ಟರ್ ನೇಮಕಾತಿ ಹಗರಣದ ತನಿಖೆ ನಡೆಸುತ್ತಿರುವ ಅಪರಾಧ ತನಿಖಾ ದಳ(CID), ಆರೋಪಿಗಳಿಂದ 3.11 ಕೋಟಿ ರೂಪಾಯಿ ವಶಪಡಿಸಿಕೊಳ್ಳಲಾಗಿದೆ ಎಂದು ತಿಳಿಸಿದೆ.
ಸರ್ಕಾರಿ ಹುದ್ದೆ ಪಡೆಯಲು ಪಿಎಸ್ ಐ ನವೀನ್ ಪ್ರಸಾದ್ ಗೆ ಹೆಚ್ ಯು ರಘುವೀರ್ ಎಂಬ ಅಭ್ಯರ್ಥಿ ಅತಿ ಹೆಚ್ಚು ಸಂಭಾವನೆ 85 ಲಕ್ಷ ರೂಪಾಯಿ ನೀಡಿರುವುದಾಗಿ ಸಿಐಡಿ ತಿಳಿಸಿದೆ. ಇದಕ್ಕೆ ಪ್ರತಿಯಾಗಿ ಪ್ರಸಾದ್ ಮತ್ತೊಬ್ಬ ಆರೋಪಿ ಶರೀಫ್ ಕಲ್ಲಿಮನಿಗೆ ಅದೇ ಹಣವನ್ನು ನೀಡಿದ್ದು ಆತ ಮುಖ್ಯ ಆರೋಪಿ ಹರ್ಷಗೆ ಹಣವನ್ನು ವರ್ಗಾಯಿಸಿದ್ದಾರೆ. ಹರ್ಷ ನೇಮಕಾತಿ ವಿಭಾಗದಲ್ಲಿ ಹುದ್ದೆಯಲ್ಲಿದ್ದಾರೆ. ನಂತರ ಹಣ ನೀಡಿದ ಅಭ್ಯರ್ಥಿ ರಘುವೀರ್ ಗೆ ಒಎಂಆರ್ ಶೀಟ್ ನ ಕಾರ್ಬನ್ ಪ್ರತಿಯನ್ನು ಮತ್ತು ಪರೀಕ್ಷೆಗೆ ಬಳಸಿದ ಪೆನ್ ನ್ನು ನೀಡಲಾಗಿತ್ತು.
ವಶಪಡಿಸಿಕೊಳ್ಳಲಾಗಿರುವ 168 ಅಭ್ಯರ್ಥಿಗಳ ಒಎಂಆರ್ ಶೀಟ್ ನಲ್ಲಿ 22 ಅಭ್ಯರ್ಥಿಗಳ ಒಎಂಆರ್ ಶೀಟ್ ನ ಕಾರ್ಬನ್ ಪ್ರತಿಯ ಮಧ್ಯೆ ಹೊಂದಿಕೆಯಾಗುತ್ತಿರಲಿಲ್ಲ ಎಂದು ವಿಧಿ ವಿಜ್ಞಾನ ಪ್ರಯೋಗಾಲಯದ ವರದಿಯಿಂದ ತಿಳಿದುಬಂದಿದೆ ಎಂದು ಸಿಐಡಿ ತಿಳಿಸಿದೆ.
ಭ್ರಷ್ಟಾಚಾರ ತಡೆ ಕಾಯ್ದೆಯ 23ನೇ ಹೆಚ್ಚುವರಿ ನಗರ ಸಿವಿಲ್ ಮತ್ತು ಸೆಷನ್ಸ್ ಹಾಗೂ ವಿಶೇಷ ನ್ಯಾಯಾಧೀಶ ಕೆ ಲಕ್ಷ್ಮೀನಾರಾಯಣ ಭಟ್ ಸಲ್ಲಿಸಿರುವ ಹೇಳಿಕೆಗೆ ಆಕ್ಷೇಪವೆತ್ತಿ ಸಿಐಡಿ ಇದನ್ನು ಬಹಿರಂಗಪಡಿಸಿದೆ. ಈ ಮಧ್ಯೆ, ಕಳೆದ ಶುಕ್ರವಾರ 12 ಆರೋಪಿಗಳಿಗೆ ಕೋರ್ಟ್ ಜಾಮೀನು ನೀಡಿದ್ದು ಬ್ಯಾಡರಹಳ್ಳಿ ಪಿಎಸ್ ಐ ಹರ್ಷಗೆ ಜಾಮೀನು ತಿರಸ್ಕರಿಸಿದೆ. ಈತ ಮಧು ಮತ್ತು ದಿಲೀಪ್ ಕುಮಾರ್ ಎಂಬುವವರಿಂದ ತಲಾ 30 ಲಕ್ಷ ರೂಪಾಯಿ ಸಂಗ್ರಹಿಸಿದ್ದ ಹಾಗೂ ಹರ್ಷಗೆ ಹಣ ನೀಡುವಾಗ 5 ಲಕ್ಷ ರೂಪಾಯಿ ಇಟ್ಟುಕೊಂಡು ಉಳಿದದ್ದನ್ನು ನೀಡಿದ್ದ ಎಂದು ಹೇಳಲಾಗುತ್ತಿದೆ.
ಇದನ್ನೂ ಓದಿ: ಪಿಎಸ್ಐ ನೇಮಕಾತಿ ಅಕ್ರಮ: ಪ್ರಮುಖ ಆರೋಪಿ ಅಮೃತ್ ಪೌಲ್ ಮತ್ತು ಶಾಂತಕುಮಾರ್ ಮನೆಯಲ್ಲಿ ಇಡಿ ಶೋಧ
12 ಆರೋಪಿಗಳಿಗೆ ಜಾಮೀನು ಮಂಜೂರು ಮಾಡುವಾಗ ನ್ಯಾಯಾಲಯವು, ಅವರು ನ್ಯಾಯದಿಂದ ಪಲಾಯನ ಮಾಡುವ ಮತ್ತು ಸಾಕ್ಷಿಗಳನ್ನು ತಿರುಚುವ ಸಾಧ್ಯತೆಗಳು ದೂರವಿದೆ. ಚಾರ್ಜ್‌ಶೀಟ್ 20 ಸಂಪುಟಗಳನ್ನು ಒಳಗೊಂಡಿರುವುದರಿಂದ 240 ಕ್ಕೂ ಹೆಚ್ಚು ಸಾಕ್ಷಿಗಳನ್ನು ಒಳಗೊಂಡಿರುವ ಕಾರಣ ತನಿಖೆಯ ಮುಕ್ತಾಯ ಮತ್ತು ವಿಚಾರಣೆ ಶೀಘ್ರದಲ್ಲೇ ಪ್ರಾರಂಭವಾಗುವ ಸಾಧ್ಯತೆಯಿಲ್ಲ ಎಂದು ಗಮನಿಸಿದೆ.
ಸೋಮನಾಥ್, ಎಚ್.ಯು.ರಘುವೀರ್, ಸಿಎಂ ನಾರಾಯಣ, ಸಿ.ಕೆ.ದಿಲೀಪ್ ಕುಮಾರ್, ಎಚ್.ಆರ್.ಪ್ರವೀಣ್ ಕುಮಾರ್, ಜಿ.ಸಿ.ರಾಘವೇಂದ್ರ, ಆರ್.ಶರತ್ ಕುಮಾರ್, ಜಾಗೃತ್, ಮಮತೇಶ್ ಗೌಡ, ಆರ್.ಮಧು, ರಚನಾ ಹನ್ಮಂತ್ ಮತ್ತು ಬಿ.ಎನ್.ಕೇಶವಮೂರ್ತಿ 12 ಮಂದಿಗೆ ಜಾಮೀನು ನೀಡಲಾಗಿದೆ.