ಮರಣ ಪ್ರಮಾಣ ಶೇಕಡಾ 10 ರಷ್ಟು ಕಡಿಮೆ ಮಾಡುವ ಗುರಿ: ಆತ್ಮಹತ್ಯೆ ತಡೆಗಟ್ಟಲು ಆರೋಗ್ಯ ಸಚಿವಾಲಯದಿಂದ ಪುಸ್ತಕ ಬಿಡುಗಡೆ!
2030 ರ ವೇಳೆಗೆ ದೇಶದಲ್ಲಿ ಆತ್ಮಹತ್ಯೆ ಮರಣವನ್ನು ಶೇಕಡಾ 10 ರಷ್ಟು ಕಡಿಮೆ ಮಾಡುವ ಗುರಿಯನ್ನು ಹೊಂದಿರುವ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯವು, ಮೊಟ್ಟಮೊದಲ ಬಾರಿಗೆ ರಾಷ್ಟ್ರೀಯ ಆತ್ಮಹತ್ಯೆ ತಡೆ ತಂತ್ರ ಪುಸ್ತಕವನ್ನು ಬಿಡುಗಡೆ ಮಾಡಿದೆ.
Published: 23rd November 2022 09:22 AM | Last Updated: 23rd November 2022 02:41 PM | A+A A-

ಸಂಗ್ರಹ ಚಿತ್ರ
ಬೆಂಗಳೂರು: 2030 ರ ವೇಳೆಗೆ ದೇಶದಲ್ಲಿ ಆತ್ಮಹತ್ಯೆ ಮರಣವನ್ನು ಶೇಕಡಾ 10 ರಷ್ಟು ಕಡಿಮೆ ಮಾಡುವ ಗುರಿಯನ್ನು ಹೊಂದಿರುವ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯವು, ಮೊಟ್ಟಮೊದಲ ಬಾರಿಗೆ ರಾಷ್ಟ್ರೀಯ ಆತ್ಮಹತ್ಯೆ ತಡೆ ತಂತ್ರ ಪುಸ್ತಕವನ್ನು ಬಿಡುಗಡೆ ಮಾಡಿದೆ.
ಮೂರು ವರ್ಷಗಳಲ್ಲಿ ಆತ್ಮಹತ್ಯೆಗಳಿಗೆ ಪರಿಣಾಮಕಾರಿ ಕಾರ್ಯವಿಧಾನಗಳು, ಐದು ವರ್ಷಗಳಲ್ಲಿ ಎಲ್ಲಾ ಜಿಲ್ಲೆಗಳಲ್ಲಿ ಆತ್ಮಹತ್ಯೆ ತಡೆಗಟ್ಟುವ ಸೇವೆಗಳನ್ನು ಒದಗಿಸುವ ಮನೋವೈದ್ಯಕೀಯ ಒಪಿಡಿ ಸೇವೆಯನ್ನು ಸ್ಥಾಪಿಸಲು ಮತ್ತು ಮುಂದಿನ ಎಂಟು ವರ್ಷಗಳಲ್ಲಿ ಎಲ್ಲಾ ಶಿಕ್ಷಣ ಸಂಸ್ಥೆಗಳಲ್ಲಿ ಮಾನಸಿಕ ಯೋಗಕ್ಷೇಮ ಪಠ್ಯಕ್ರಮವನ್ನು ಸಂಯೋಜಿಸಲು ಇದು ಅಗತ್ಯವಿದೆ ತಿಳಿಸಲಾಗಿದೆ.
ತಜ್ಞರು ಮತ್ತು ವೈದ್ಯಕೀಯ ವೃತ್ತಿಪರರು ಮಾತನಾಡಿ, ಇತರೆ ದೇಶಗಳಲ್ಲಿ ಈಗಾಗಲೇ ಇಂತಹ ಪುಸ್ತಕಗಳಿವೆ. ಆದರೆ, ಭಾರತದಲ್ಲಿ ಇದೇ ಮೊದಲ ಬಾರಿಗೆ ಪುಸ್ತಕವನ್ನು ಹೊರತರಲಾಗಿದೆ ಎಂದು ಹೇಳಿದ್ದಾರೆ.
ಕೋವಿಡ್ -19 ಬಳಿಕ ಆತ್ಮಹತ್ಯೆ ಪ್ರಕರಣಗಳ ಸಂಖ್ಯೆ ಹೆಚ್ಚಾಗುತ್ತಿದೆ. 2020 ರಲ್ಲಿ ಮಹಿಳೆಯರಿಗೆ ಹೋಲಿಸಿದರೆ ಪುರುಷರಲ್ಲಿ ಆತ್ಮಹತ್ಯೆ ಪ್ರಕರಣಗಳು ಹೆಚ್ಚಾಗಿದ್ದವು. ಇದೀಗ ಮಹಿಳೆಯರು ಮತ್ತು ಮಕ್ಕಳಲ್ಲಿ ಪ್ರಕರಣಗಳು ಹೆಚ್ಚುತ್ತಿವೆ ಎಂದು ಹಿರಿಯ ಅಧಿಕಾರಿಯೊಬ್ಬರು ಹೇಳಿದ್ದಾರೆ.
ಆತ್ಮಹತ್ಯೆ ಪ್ರಕರಣಗಳು ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಕಚೇರಿಗಳು, ಶಿಕ್ಷಣ ಸಂಸ್ಥೆಗಳು, ವಸತಿ ಸಂಘಗಳು ಮತ್ತು ಇತರ ಪ್ರದೇಶಗಳಲ್ಲಿ ಜನರು ಸುಲಭವಾಗಿ ಸಂಪರ್ಕಿಸಲು ಮತ್ತು ಸಹಾಯ ಪಡೆಯಲು ವಿಶೇಷ ಸ್ಥಳಗಳ ಸ್ಥಾಪನೆ ಅಗತ್ಯವಿದೆ.
ವ್ಯಕ್ತಿಯು ತನ್ನ ನೋವು ಹೇಳಿಕೊಳ್ಳಲು ಕಚೇರಿ, ಶೈಕ್ಷಣಿಕ ಸಂಸ್ಥೆಗಳಲ್ಲಿ ಒಂದು ಕೇಂದ್ರವಿರಬೇಕು. ಈ ಕೇಂದ್ರ ಸಂಪರ್ಕಿಸಿದ ಕೂಡಲೇ ಅವರಿಗೆ ಸಲಹೆ ನೀಡುವ ಹಾಗೂ ಧೈರ್ಯ ಹೇಳುವ ಕೆಲಸವಾಗಬೇಕು. ಕೋವಿಡ್ -19 ನಂತರವೂ ಮಾನಸಿಕ ಸಮಸ್ಯೆಗಳ ಪ್ರಕರಣಗಳು ಹೆಚ್ಚಾಗಿವೆ ಎಂದು ಮಾನಸಿಕ ಆರೋಗ್ಯ ಮತ್ತು ನರ ವಿಜ್ಞಾನಗಳ ರಾಷ್ಟ್ರೀಯ ಸಂಸ್ಥೆಯ (ನಿಮ್ಹಾನ್ಸ್) ನಿರ್ದೇಶಕಿ ಮತ್ತು ಹಿರಿಯ ಪ್ರಾಧ್ಯಾಪಕರಾದ ಡಾ.ಪ್ರತಿಮಾ ಮೂರ್ತಿ ಹೇಳಿದ್ದಾರೆ.
ಇದನ್ನೂ ಓದಿ: ಬೆಂಗಳೂರು: ಪರೀಕ್ಷೆಗೆ ಕಾಪಿ ಚೀಟಿ ತಂದಿದ್ದಕ್ಕೆ ಶಿಕ್ಷಕಿಯಿಂದ ನಿಂದನೆ; ವಿದ್ಯಾರ್ಥಿನಿ ಆತ್ಮಹತ್ಯೆಗೆ ಶರಣು!
ಮಾನಸಿಕ ಸಮಸ್ಯೆಗಳ ಪರಿಹರಿಸಲು ಬಹು-ವಲಯ ವಿಧಾನದ ಅಗತ್ಯವಿದೆ. ಆತ್ಮಹತ್ಯೆ ಪ್ರಕರಣಗಳನ್ನು ಕಡಿಮೆ ಮಾಡಲು ಎಲ್ಲಾ ರೀತಿಯ ವ್ಯವಸ್ಥೆ ಕಲ್ಪಿಸುವ ಅವಶ್ಯಕತೆಯಿದೆ, ರಾಸಾಯನಿಕ ಮತ್ತು ಕೀಟನಾಶಕಗಳಂತಹ ಸಾವಯವ-ರಂಜಕ ಸಂಯುಕ್ತಗಳ ಸುಲಭ ಲಭ್ಯತೆಯನ್ನು ಕಡಿಮೆ ಮಾಡಬೇಕಿದೆ. ಇತ್ತೀಚಿನ ದಿನಗಳಲ್ಲಿ ಹೆಚ್ಚಿನ ಸಂಖ್ಯೆ ಯುವಕರು ಆತಂಕ, ಖಿನ್ನತೆ ಮತ್ತು ಇತರ ಸಮಸ್ಯೆಗಳಿಂದ ಬಳಲುತ್ತಿದ್ದಾರೆಂದು ಡಾ. ಮೂರ್ತಿ ತಿಳಿಸಿದ್ದಾರೆ.
ಆತ್ಮಹತ್ಯೆ ಪ್ರಕರಣಗಳ ನಿಯಂತ್ರಿಸಲು ವೈದ್ಯಕೀಯ ಪ್ರಿಸ್ಕ್ರಿಪ್ಷನ್ ಮತ್ತು ಚಿಕಿತ್ಸೆಯು ನಿರ್ಣಾಯಕ ಪಾತ್ರವನ್ನು ವಹಿಸುತ್ತದೆ. ಆತ್ಮಹತ್ಯೆ ತಡೆಗಟ್ಟುವಲ್ಲಿ ವಿಶ್ವ ಆರೋಗ್ಯ ಸಂಸ್ಥೆಯ ವಿಧಾನವನ್ನು ಒಳಗೊಂಡಿದೆಯ ಇದನ್ನು 'ಲೈವ್ ಲೈಫ್' ಎಂದು ಕರೆಯಲಾಗುತ್ತದೆ. ನಾಯಕತ್ವ, ಮಧ್ಯಸ್ಥಿಕೆಗಳು, ದೃಷ್ಟಿ ಮತ್ತು ಮೌಲ್ಯಮಾಪನ (ಲೈವ್) ಇದರ ವಿಧಾನಗಳಾಗಿವೆ. ಆರಂಭದಲ್ಲೇ ಮಾನಸಿಕ ಸಮಸ್ಯೆಗಳ ಗುರ್ತಿಸಿ ಚಿಕಿತ್ಸೆ ನೀಡುವುದರಿಂದ ಆತ್ಮಹತ್ಯೆ ಪ್ರಕರಣಗಳನ್ನು ಕಡಿಮೆ ಮಾಡಬಹುದು ಎಂದು ಹೇಳಿದ್ದಾರೆ.