ಜಕ್ಕಲಿ ಭುವನೇಶ್ವರಿ ಚಿತ್ರ ಅಧಿಕೃತ ಭಾವಚಿತ್ರವಾಗಲಿ: ಕನ್ನಡಪರ ಕಾರ್ಯಕರ್ತರ ಒತ್ತಾಯ

ನಾಡ ದೇವತೆ ಭುವನೇಶ್ವರಿಯ ನೂತನ ಭಾವಚಿತ್ರಕ್ಕೆ ಸಂಬಂಧಿಸಿದಂತೆ ಐವರು ಸದಸ್ಯರ ಸಮಿತಿಯ ನಿರ್ಣಯಕ್ಕೆ ಗದಗ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಹಾಗೂ ಕನ್ನಡ ಪರ ಸಂಘಟನೆಗಳ ಸದಸ್ಯರು ವಿರೋಧ ವ್ಯಕ್ತಪಡಿಸಿದ್ದಾರೆ.
ಭುವನೇಶ್ವರಿ ಭಾವಚಿತ್ರ
ಭುವನೇಶ್ವರಿ ಭಾವಚಿತ್ರ
Updated on

ಗದಗ: ನಾಡ ದೇವತೆ ಭುವನೇಶ್ವರಿಯ ನೂತನ ಭಾವಚಿತ್ರಕ್ಕೆ ಸಂಬಂಧಿಸಿದಂತೆ ಐವರು ಸದಸ್ಯರ ಸಮಿತಿಯ ನಿರ್ಣಯಕ್ಕೆ ಗದಗ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಹಾಗೂ ಕನ್ನಡ ಪರ ಸಂಘಟನೆಗಳ ಸದಸ್ಯರು ವಿರೋಧ ವ್ಯಕ್ತಪಡಿಸಿದ್ದಾರೆ.

ಕರ್ನಾಟಕ ಏಕೀಕರಣಕ್ಕಾಗಿ ನಡೆದ ಹೋರಾಟಗಳಿಗೆ ಲೆಕ್ಕವೇ ಇಲ್ಲ. ಅಖಂಡ ಕರ್ನಾಟಕ ಹೋರಾಟಕ್ಕೆ ಸ್ಪೂರ್ತಿಯಾಗಿದ್ದು, ಕರ್ನಾಟಕ ಮಾತೆ ಭುವನೇಶ್ವರಿ ಭಾವಚಿತ್ರ. ಸರ್ಕಾರ ಈಗ ಅಧಿಕೃತವಾಗಿ ಕನ್ನಡ ಭುವನೇಶ್ವರಿ ಚಿತ್ರ ಆರಾಧನೆಗೆ ಮುಂದಾಗುತ್ತಿದೆ.

ಜಕ್ಕಲಿ ಗ್ರಾಮದಲ್ಲಿ 1953 ರಲ್ಲಿ ಸಿದ್ಧಪಡಿಸಲಾದ ಭುವನೇಶ್ವರಿ ದೇವಿಯ ತೈಲವರ್ಣವನ್ನು ಸರ್ಕಾರ ಅಂತಿಮಗೊಳಿಸಬೇಕು ಎಂದು ಅವರು ಒತ್ತಾಯಿಸಿದ್ದಾರೆ. ಕಳೆದ ವರ್ಷ, ದೇವಿಯ ಭಾವಚಿತ್ರವನ್ನು ಅಂತಿಮಗೊಳಿಸುವ ಯೋಜನೆ ಪ್ರಾರಂಭವಾದಾಗ, ಕೆಲವು ಲೇಖಕರು ಮತ್ತು ಕನ್ನಡ ಕಾರ್ಯಕರ್ತರು ಜಕ್ಕಲಿಯವರ ಚಿತ್ರವನ್ನು ಬಳಸಬೇಕೆಂದು ರಾಜ್ಯ ಸರ್ಕಾರಕ್ಕೆ ಮನವಿ ಮಾಡಿದರು ಮತ್ತು ಕ.ಸಾ.ಪ ಅಧ್ಯಕ್ಷ ಮಹೇಶ್ ಜೋಶಿ ಅವರನ್ನು ಭಾವಚಿತ್ರ ನೋಡಲು ಆಹ್ವಾನಿಸಿದರು.

ಫೋಟೋದಲ್ಲಿ ಹಂಪಿ, ಶ್ರವಣಬೆಳಗೊಳ, ಬನವಾಸಿ, ಶೃಂಗೇರಿ, ಗೋಲ್ ಗುಂಬಜ್, ಹೊಯ್ಸಳ ಲಾಂಛನ, ಮೈಸೂರು ಚಾಮುಂಡೇಶ್ವರಿ, ಜೋಗ ಜಲಪಾತ, ಕರಾವಳಿ, ಬನಶಂಕರಿ ದೇವಸ್ಥಾನದ ಚಿತ್ರಗಳೂ ಇದ್ದು, ಕರ್ನಾಟಕದ ಕಲ್ಪನೆಯನ್ನು ಎತ್ತಿ ತೋರಿಸುತ್ತದೆ ಎಂದು ವಿವರಿಸಿದರು.

ಆದರೆ, ಸರ್ಕಾರ ಈ ಫೋಟೋವನ್ನು ಪರಿಗಣಿಸದ ಕಾರಣ ಈ ಭಾಗದ ಜನರು ಸಮಿತಿಯ ಪ್ರಕಾರ ಹೊಸ ಭುವನೇಶ್ವರಿ ದೇವಿಯ ಫೋಟೋದ ನಿರ್ಧಾರವನ್ನು ಮರುಪರಿಶೀಲಿಸುವಂತೆ ಒತ್ತಾಯಿಸಿದರು.

ಕಳೆದ ಏಳು ದಶಕಗಳಿಂದ ಬಳಸಲಾಗುತ್ತಿರುವ ಭುವನೇಶ್ವರಿ ದೇವಿಯ ಫೋಟೋದಲ್ಲಿ ಪ್ರಬಲ ಅಂಶಗಳಿವೆ. ದೇವಿಯು ಪುಸ್ತಕದೊಂದಿಗೆ ನಿಂತಿದ್ದಾಳೆ,  ಅವಳ ತಲೆಯು ಬಲಭಾಗಕ್ಕೆ ವಾಲಿದೆ, ಅದು ಕರ್ನಾಟಕದ ನಕ್ಷೆಯ ತಲೆಯಂತೆ ಕಾಣುತ್ತದೆ. ರಾಜ್ಯದ ಪ್ರಮುಖ ಭಾಗಗಳನ್ನು ಒಳಗೊಂಡ ಗಡಿಗಳಲ್ಲಿ ಕೆಲವು ಚಿತ್ರಗಳಿವೆ ಎಂದಿದ್ದಾರೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X
Google Preferred source

Advertisement

X
Kannada Prabha
www.kannadaprabha.com